ನಾನು ವಿಚ್ಛೇದನ ಕೊಟ್ಟಿಲ್ಲ, ಆಕೆ ಮತ್ತೊಂದು ವಿವಾಹವಾಗಲು ಹೇಗೆ ಸಾಧ್ಯ: ಪಾಕಿಸ್ತಾನಿ ಜೊತೆ ಅಂಜು ಮದುವೆ ಬಗ್ಗೆ ಪತಿ ಹೇಳಿದ್ದಿಷ್ಟು!

ತನ್ನ  ಫೇಸ್‌ಬುಕ್ ಸ್ನೇಹಿತ ನಸ್ರುಲ್ಲಾಳನ್ನು ಭೇಟಿಯಾಗಲು ರಾಜಸ್ಥಾನದಿಂದ ಪಾಕಿಸ್ತಾನಕ್ಕೆ ಹೋಗಿದ್ದ ಇಬ್ಬರು ಮಕ್ಕಳ ತಾಯಿ ಅಂಜು ಇತ್ತೀಚಿನ ದಿನಗಳಲ್ಲಿ ಸುದ್ದಿಗಳ ಕೇಂದ್ರಬಿಂದುವಾಗಿದ್ದಾಳೆ. ಅಂಜುಗೆ ಸಂಬಂಧಿಸಿದಂತೆ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. 
ಅಂಜು-ನುಸ್ರುಲ್ಲಾ
ಅಂಜು-ನುಸ್ರುಲ್ಲಾ

ನವದೆಹಲಿ: ತನ್ನ  ಫೇಸ್‌ಬುಕ್ ಸ್ನೇಹಿತ ನಸ್ರುಲ್ಲಾಳನ್ನು ಭೇಟಿಯಾಗಲು ರಾಜಸ್ಥಾನದಿಂದ ಪಾಕಿಸ್ತಾನಕ್ಕೆ ಹೋಗಿದ್ದ ಇಬ್ಬರು ಮಕ್ಕಳ ತಾಯಿ ಅಂಜು ಇತ್ತೀಚಿನ ದಿನಗಳಲ್ಲಿ ಸುದ್ದಿಗಳ ಕೇಂದ್ರಬಿಂದುವಾಗಿದ್ದಾಳೆ. ಅಂಜುಗೆ ಸಂಬಂಧಿಸಿದಂತೆ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. 

ಮಾಹಿತಿ ಪ್ರಕಾರ ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ಫಾತೀಮಾ ಎಂದು ಬದಲಾಯಿಸಿಕೊಂಡು ತನ್ನ ಸ್ನೇಹಿತ ನಸ್ರುಲ್ಲಾನನ್ನು ಜುಲೈ 25ರಂದು ಮದುವೆಯಾಗಿದ್ದಾಳೆ ಎಂಬ ಸುದ್ದಿ ಹೊರಬಂದಿದೆ. ಈ ಮಧ್ಯೆ ಅಂಜು ಪತಿ ಅರವಿಂದ್ ಕುಮಾರ್ ಹೇಳಿಕೆ ಮುನ್ನೆಲೆಗೆ ಬಂದಿದ್ದು, ನಾನು ಆಕೆಗೆ ವಿಚ್ಛೇದನ ಕೊಟ್ಟಿಲ್ಲ. ಹೀಗಿರುವಾಗ ಆಕೆ ಮತ್ತೊಂದು ಮದುವೆಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಇನ್ನು ಅಂಜು ಮೂರು ವರ್ಷಗಳ ಹಿಂದೆ ದೆಹಲಿಯಲ್ಲಿ ವಿಚ್ಛೇದನ ಪತ್ರಗಳನ್ನು ಸಲ್ಲಿಸಿದ್ದಾರೆ. ಆದರೆ ನ್ಯಾಯಾಲಯದಿಂದ ನನಗೆ ಯಾವುದೇ ಸಮನ್ಸ್ ಅಥವಾ ನೋಟಿಸ್ ಬಂದಿಲ್ಲ. ಕಾಗದದ ಮೇಲೆ ಆಕೆ ಇನ್ನೂ ನನ್ನ ಹೆಂಡತಿ, ಅವರು ಬೇರೆಯವರನ್ನು ಮದುವೆಯಾಗಲು ಸಾಧ್ಯವಿಲ್ಲ. ಸರ್ಕಾರವು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಅಂಜು ಅವರ ಪತಿ ಅರವಿಂದ್ ಕುಮಾರ್ ಆಗ್ರಹಿಸಿದ್ದಾರೆ.

ಅಂಜು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಕಲಿ ದಾಖಲೆಗಳು ಮತ್ತು ಸಹಿಯನ್ನು ಬಳಸಿದ್ದಾರೆಯೇ ಎಂದು ಪರಿಶೀಲಿಸಲು ಸರ್ಕಾರ ಆಕೆಯ ಪಾಸ್‌ಪೋರ್ಟ್ ಮತ್ತು ವೀಸಾ ದಾಖಲೆಗಳನ್ನು ಸಹ ತನಿಖೆ ಮಾಡಬೇಕು. ವೀಸಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಬಗ್ಗೆ ಅವಳು ನನಗೆ ತಿಳಿಸಲಿಲ್ಲ ಎಂದು ಅವರು ಹೇಳಿದರು. ಆಕೆ ಭಾರತಕ್ಕೆ ಮರಳಿದ ನಂತರ ಈ ವಿಷಯದ ಕುರಿತು ಎಫ್‌ಐಆರ್ ದಾಖಲಿಸುವುದಾಗಿ ಅರವಿಂದ್ ಹೇಳಿದ್ದಾರೆ.

ಅಂಜು-ಅರವಿಂದ್ ಅವರನ್ನು ಮದುವೆಯಾಗಿದ್ದರು
ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ ಅಂಜು ಇಸ್ಲಾಂಗೆ ಮತಾಂತರಗೊಂಡಿದ್ದು, ಆಕೆಯ ಹೆಸರು ಫಾತಿಮಾ ಎಂದಾಗಿದೆ. ಗ್ವಾಲಿಯರ್ ನಿವಾಸಿ ಅಂಜು ಅರವಿಂದ್ ಎಂಬುವರನ್ನು ಮದುವೆಯಾಗಿದ್ದರು. ಇಬ್ಬರೂ ರಾಜಸ್ಥಾನದಲ್ಲಿ ವಾಸಿಸುತ್ತಿದ್ದರು. ಅಂಜು ಮತ್ತು ಅರವಿಂದ್ ದಂಪತಿಗೆ 15 ವರ್ಷದ ಮಗಳು ಮತ್ತು ಆರು ವರ್ಷದ ಮಗ ಇದ್ದಾನೆ. ಅಂಜು ವಾಘಾ ಅವರು 2019ರಲ್ಲಿ ತನ್ನ ಫೇಸ್‌ಬುಕ್ ಸ್ನೇಹಿತ ನಸ್ರುಲ್ಲಾ ಅವರನ್ನು ಭೇಟಿ ಮಾಡಲು ಅಟ್ಟಾರಿ ಗಡಿಯ ಮೂಲಕ ಭಾರತದಿಂದ ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ಹೋಗಿದ್ದಾಳೆ. ಅಲ್ಲಿ ಅವರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಸ್ಥಳೀಯ ನ್ಯಾಯಾಲಯದಲ್ಲಿ ವಿವಾಹವಾಗಿದ್ದಾರೆ. ದಾಖಲೆಯ ಪ್ರಕಾರ, ಅಂಜುಗೆ ಅಪ್ಪರ್ ದಿರ್ ಜಿಲ್ಲೆಗೆ ಮಾತ್ರ 30 ದಿನಗಳ ವೀಸಾ ನೀಡಲು ನಿರ್ಧರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com