ಕತಿಹಾರ್ ಘಟನೆ: ಪೊಲೀಸ್ ಕ್ರಮದಿಂದ ಸಾವು ಸಂಭವಿಸಿಲ್ಲ, 'ಗುಂಡಿನ ದಾಳಿ ನಡೆಸಿದ್ದು ಅಪರಿಚಿತ ವ್ಯಕ್ತಿ; ಎಸ್ ಪಿ

ಕತಿಹಾರ್‌ನ ಬರ್ಸೋಯಿಯಲ್ಲಿ ವಿದ್ಯುತ್‌ಗಾಗಿ ಸ್ಥಳೀಯರು ನಡೆಸಿದ್ದ ಪ್ರತಿಭಟನೆ ವೇಳೆ ಜನಸಮೂಹ ಆಕ್ರೋಶಗೊಂಡಿದ್ದರಿಂದ ಪೊಲೀಸರು ಜನರ ಮೇಲೆ ಲಾಠಿ ಚಾರ್ಜ್ ಮತ್ತು ಗುಂಡು ಹಾರಿಸಿದ್ದರು.
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ಕತಿಹಾರ್: ಕತಿಹಾರ್‌ನ ಬರ್ಸೋಯಿಯಲ್ಲಿ ವಿದ್ಯುತ್‌ಗಾಗಿ ಸ್ಥಳೀಯರು ನಡೆಸಿದ್ದ ಪ್ರತಿಭಟನೆ ವೇಳೆ ಜನಸಮೂಹ ಆಕ್ರೋಶಗೊಂಡಿದ್ದರಿಂದ ಪೊಲೀಸರು ಜನರ ಮೇಲೆ ಲಾಠಿ ಚಾರ್ಜ್ ಮತ್ತು ಗುಂಡು ಹಾರಿಸಿದ್ದು ಈ ವೇಳೆ ಮೂವರಿಗೆ ಗುಂಡು ತಗುಲಿ, ಇಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ವಾಸ್ತವವಾಗಿ, ಪ್ರತಿಭಟನೆಯ ಸಂದರ್ಭದಲ್ಲಿ ಇಬ್ಬರು ಸಾವನ್ನಪ್ಪಿದ್ದು ಅವರು ಪೊಲೀಸ್ ಬುಲೆಟ್‌ಗಳಿಂದಲ್ಲ, ಅಪರಿಚಿತ ವ್ಯಕ್ತಿ ಹಾರಿಸಿದ ಗುಂಡಿನಿಂದ ಎಂದು ಜಿಲ್ಲಾಡಳಿತ ಮತ್ತು ಪೊಲೀಸ್ ಆಡಳಿತವು ಹೇಳಿದ್ದಾರೆ. ಪ್ರತಿಭಟನೆ ವೇಳೆ ಇಬ್ಬರು ಮೃತಪಟ್ಟು, ಒಬ್ಬರು ಗಾಯಗೊಂಡ ಘಟನೆಯಲ್ಲಿ ಪೊಲೀಸರ ತಪ್ಪಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಜುಲೈ 26ರಂದು ನಡೆದ ಈ ಘಟನೆಯ ನಂತರ ಡಿಎಂ ಮತ್ತು ಎಸ್ಪಿ ಶುಕ್ರವಾರ ತನಿಖೆಗೆ ನಡೆಸಿದ್ದು, ತನಿಖೆಯ ಸಂದರ್ಭದಲ್ಲಿ ಬ್ಲಾಕ್ ಆಫೀಸ್ ಆವರಣದಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾದ ವೀಡಿಯೊದ ಆಧಾರದ ಮೇಲೆ ಡಿಎಂ ಮತ್ತು ಎಸ್ಪಿ ಜಂಟಿಯಾಗಿ ಬಿಡುಗಡೆ ಮಾಡಿದರು.

ಇದೇ ವೇಳೆ ಸಂಪೂರ್ಣ ತನಿಖೆ ನಡೆಯುತ್ತಿದ್ದು, ವಿದ್ಯುತ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಪೊಲೀಸರು ಗುಂಡು ಹಾರಿಸಿದ್ದರಿಂದ ಇಬ್ಬರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆಯೇ ಅಥವಾ ಇದರಲ್ಲಿ ಇನ್ನೇನಾದರೂ ಷಡ್ಯಂತ್ರವಿದೆಯೇ ಎಂಬುದು ತನಿಖೆಯ ನಂತರವಷ್ಟೇ ತಿಳಿಯಲಿದೆ. ಸದ್ಯ ಪೊಲೀಸರ ಗುಂಡೇಟಿನಿಂದ ಜನರು ಸಾವನ್ನಪ್ಪಿಲ್ಲ, ಯಾರೋ ಅಪರಿಚಿತರ ಗುಂಡಿನಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com