ಪಾಕ್ ಸ್ನೇಹಿತನ ಭೇಟಿಗಾಗಿ ದೇಶ ಬಿಡಲು ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿದ್ದ ಅಪ್ರಾಪ್ತ ಯುವತಿ ಬಂಧನ

ಪಾಕಿಸ್ತಾನ ಮೂಲದ ಸ್ನೇಹಿತನನ್ನು ಭೇಟಿಯಾಗಲು ದೇಶ ಬಿಡಲು ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿದ್ದ ಅಪ್ರಾಪ್ತ ಯುವತಿಯನ್ನು ಬಂಧಿಸಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಜೈಪುರ ವಿಮಾನ ನಿಲ್ದಾಣ
ಜೈಪುರ ವಿಮಾನ ನಿಲ್ದಾಣ

ಜೈಪುರ: ಪಾಕಿಸ್ತಾನ ಮೂಲದ ಸ್ನೇಹಿತನನ್ನು ಭೇಟಿಯಾಗಲು ದೇಶ ಬಿಡಲು ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿದ್ದ ಅಪ್ರಾಪ್ತ ಯುವತಿಯನ್ನು ಬಂಧಿಸಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಹೌದು.. ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಲವ್ ಸ್ಚೋರಿಗಳು ಹೆಚ್ಚಾಗುತ್ತಿದ್ದು, ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್ ಸುದ್ದಿ ಇನ್ನೂ ಹಸಿರಾಗಿರುವಂತೆಯೇ ಇತ್ತ ಭಾರತ ಮೂಲದ ಅಪ್ರಾಪ್ತ ಯುವತಿಯೊಬ್ಬಳು ಪಾಕಿಸ್ತಾನದಲ್ಲಿನ ತನ್ನ ಇನ್ ಸ್ಟಾಗ್ರಾಂ ಸ್ನೇಹಿತನನ್ನು ಭೇಟಿಯಾಗಲು ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಈ ವೇಳೆ ಅಧಿಕಾರಿಗಳು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

ಇನ್‌ಸ್ಟಾಗ್ರಾಮ್‌ ಲವರ್‌ನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳುತ್ತಿದ್ದ ರಾಜಸ್ಥಾನದ ಯುವತಿಯನ್ನು ಜೈಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಶುಕ್ರವಾರ ರಾಜಸ್ಥಾನಿ ಹುಡುಗಿಯೊಬ್ಬಳು ಜೈಪುರ ವಿಮಾನ ನಿಲ್ದಾಣದಲ್ಲಿ ತನ್ನ ಇನ್‌ಸ್ಟಾಗ್ರಾಮ್‌ ಪ್ರೇಮಿಯನ್ನು ಭೇಟಿಯಾಗಲು ತೆರಳುತ್ತಿದ್ದಾಗ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾಳೆ. 19 ವರ್ಷದ ಹುಡುಗಿಯು ಪಾಕಿಸ್ತಾನಕ್ಕೆ ಪರಾರಿಯಾಗುವ ಪ್ರಯತ್ನದಲ್ಲಿದ್ದಳು ಎಂದು ವಿಮಾನ ನಿಲ್ದಾಣದ ಠಾಣಾಧಿಕಾರಿ ದಿಗ್ಪಾಲ್ ಸಿಂಗ್ ಮಾಹಿತಿ ನೀಡಿದ್ದಾರೆ.

ಈ ಹುಡುಗಿಯು ಇಬ್ಬರು ಸಹಚರರೊಂದಿಗೆ ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿದ್ದಳು. ಪಾಕಿಸ್ತಾನದ ವಿಮಾನ ಟಿಕೆಟ್‌ ನೀಡುವಂತೆ ಸಿಬ್ಬಂದಿಯನ್ನು ಕೇಳಿಕೊಂಡಳು. ಇದನ್ನು ತಮಾಷೆಯಾಗಿ ಪರಿಗಣಿಸಿದ ಸಿಬ್ಬಂದಿ ಆಕೆಯ ಮನವಿಯನ್ನು ನಿರಾಕರಿಸಿದ್ದರು. ಆ ನಂತರ ಆಕೆ ತಾನು ಪಾಕಿಸ್ತಾನ ಪ್ರಜೆಯಾಗಿದ್ದಾಗಿ ಹೇಳಿಕೊಂಡಿದ್ದು, ಮೂರು ವರ್ಷಗಳ ಹಿಂದೆ ತನ್ನ ತಂದೆಯ ಚಿಕ್ಕಮ್ಮನೊಂದಿಗೆ ಭಾರತಕ್ಕೆ ಬಂದಿದ್ದಾಗಿ ತಿಳಿಸಿದ್ದಳು. ಆಕೆ ಸಿಕರ್ ಜಿಲ್ಲೆಯ ಶ್ರೀ ಮಾಧೋಪುರ್ ಪ್ರದೇಶದಲ್ಲಿ ನಿವಾಸಿಯಾಗಿದ್ದಾಳೆ. ಕೆಲ ದಿನಗಳ ಹಿಂದೆ ಚಿಕ್ಕಮ್ಮನೊಂದಿಗೆ ಜಗಳವಾಡಿ ಬಸ್ ಹತ್ತಿ ಜೈಪುರಕ್ಕೆ ತೆರಳಿದ್ದಳು ಎಂದು ತಿಳಿದುಬಂದಿದೆ.

ತಾನು ಪಾಕಿಸ್ತಾನದವಳು ಎಂದು ಹೇಳಿ ಅಧಿಕಾರಿಗಳನ್ನೇ ಪೇಚಿಗೆ ಸಿಲುಕಿಸಿದ್ದ ಅಪ್ರಾಪ್ತೆ
ವಿಮಾನ ನಿಲ್ದಾಣದ ಸಿಬ್ಬಂದಿ ಆಕೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ವಿಚಾರಣೆಯ ಸಮಯದಲ್ಲಿ, ತಾನು ಲಾಹೋರ್‌ ಸಮೀಪದ ಇಸ್ಲಾಮಾಬಾದ್‌ ಮೂಲದವಳು ಎಂದು ಪೊಲೀಸರಿಗೆ ತಿಳಿಸಿದ್ದಾಳೆ. 

ಮೂಲಗಳ ಪ್ರಕಾರ, ಆಕೆಯ ಜೊತೆಗಿದ್ದ ಇಬ್ಬರು ಯುವಕರು ಬಸ್‌ನಲ್ಲಿ ಪರಿಚಯವಾಗಿದ್ದಾರೆ. ಆಕೆಯನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಬಂದಿದ್ದರು ಎಂದು ಗೊತ್ತಾಗಿದೆ. ಹುಡುಗಿಯನನ್ನು ವಿಚಾರಣೆ ಮಾಡಿರುವ ಮಹಿಳಾ ಪೊಲೀಸರು ಆಕೆಯ ವಿಳಾಸವನ್ನು ಪತ್ತೆ ಹಚ್ಚಿದ್ದಾರೆ. ಆಕೆ ಶ್ರೀ ಮಾಧೋಪುರಕ್ಕೆ ಸೇರಿದವಳು. ಇನ್‌ಸ್ಟಾಗ್ರಾಮ್‌ನಲ್ಲಿ ಲಾಹೋರ್‌ನ ಅಸ್ಲಂ ಲಾಹೋರಿ ಎಂಬ ಹೆಸರಿನ ವ್ಯಕ್ತಿಯೊಂದಿಗೆ ಹುಡುಗಿ ಸ್ನೇಹ ಬೆಳೆಸಿದ್ದಳು. ಅವರು ಒಂದು ವರ್ಷದಿಂದ ಸಂಪರ್ಕದಲ್ಲಿದ್ದಾರೆ. ಆ ಹುಡುಗ ತನ್ನ ಶಾಲೆಯ ಇತರ ಹುಡುಗಿಯರೊಂದಿಗೆ ಸಂಪರ್ಕದಲ್ಲಿದ್ದ ಎಂದು ಆಕೆ ಬಹಿರಂಗಪಡಿಸಿದ್ದಾಳೆ. ಅಸ್ಲಾಮ್ ವಿಮಾನ ನಿಲ್ದಾಣದಲ್ಲಿ ಹೇಗೆ ವರ್ತಿಸಬೇಕು ಎಂಬುದರ ಕುರಿತು ಸೂಚನೆಗಳನ್ನು ನೀಡಿದ್ದಾಗಿ ಹುಡುಗಿ ಹೇಳಿದ್ದಾಳೆ.

ಪೊಲೀಸರು ಆಕೆಯ ಮೊಬೈಲ್ ಫೋನ್ ಅನ್ನು ತಪಾಸಣೆಗಾಗಿ ವಶಪಡಿಸಿಕೊಂಡಿದ್ದಾರೆ. ಆಕೆ ಪಾಕಿಸ್ತಾನಕ್ಕೆ ಪಲಾಯನ ಮಾಡುವ ಪ್ರಯತ್ನದ ಕುರಿತು ಕುಟುಂಬ ಸದಸ್ಯರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಹುಡುಗಿಯು ವಿದ್ಯಾಭ್ಯಾಸದಲ್ಲಿ ತುಂಬಾ ಬುದ್ಧಿವಂತೆ ಎಂದು ಹೇಳಲಾಗಿದ್ದು, ಇತ್ತೀಚೆಗೆ 12ನೇ ತರಗತಿ ಪಾಸಾಗಿದ್ದಾಳೆ. ಯುವತಿಯ ತಂದೆ ಸೇನೆಯಲ್ಲಿರುವುದು ಪತ್ತೆಯಾಗಿದ್ದು, ಈ ಮಾಹಿತಿ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಪ್ರಸ್ತುತ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com