ಭಾರತದ ಅಂಜು ಆಯ್ತು, ಈಗ ಪ್ರಿಯಕರನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ  ಚೀನಾ ಮಹಿಳೆ ಪ್ರಯಾಣ!

ಭಾರತದ ಅಂಜು ನಂತರ ಇದೀಗ ಪ್ರಿಯಕರನಿಗಾಗಿ ಪಾಕ್‌ಗೆ ಚೀನಾದ ಮಹಿಳೆಯೊಬ್ಬರು ತೆರಳಿದ್ದು ಮತ್ತೊಂದು ಗಡಿಯಾಚೆಗಿನ ಪ್ರೇಮಕಥೆ ಮುನ್ನೆಲೆಗೆ ಬಂದಿದೆ. ಚೀನಾದ ಮಹಿಳೆಯೊಬ್ಬರು ಪಾಕಿಸ್ತಾನಿ ಗೆಳೆಯನನ್ನು ಭೇಟಿಯಾಗಲು ಖೈಬರ್ ಪಖ್ತುಂಖ್ವಾ ಪ್ರಾಂತ್ಯಕ್ಕೆ ತೆರಳಿದ್ದಳು.
ಯುವಕನನ್ನು ಭೇಟೆಯಾಗಲು ಪಾಕ್ ತೆರಳಿದ ಚೀನಾ ಮಹಿಳೆ
ಯುವಕನನ್ನು ಭೇಟೆಯಾಗಲು ಪಾಕ್ ತೆರಳಿದ ಚೀನಾ ಮಹಿಳೆ

ಪೇಶಾವರ: ಭಾರತದ ಅಂಜು ನಂತರ ಇದೀಗ ಪ್ರಿಯಕರನಿಗಾಗಿ ಪಾಕ್‌ಗೆ ಚೀನಾದ ಮಹಿಳೆಯೊಬ್ಬರು ತೆರಳಿದ್ದು ಮತ್ತೊಂದು ಗಡಿಯಾಚೆಗಿನ ಪ್ರೇಮಕಥೆ ಮುನ್ನೆಲೆಗೆ ಬಂದಿದೆ. ಚೀನಾದ ಮಹಿಳೆಯೊಬ್ಬರು ಪಾಕಿಸ್ತಾನಿ ಗೆಳೆಯನನ್ನು ಭೇಟಿಯಾಗಲು ಖೈಬರ್ ಪಖ್ತುಂಖ್ವಾ ಪ್ರಾಂತ್ಯಕ್ಕೆ ತೆರಳಿದ್ದಳು.

ಮಾಹಿತಿಯ ಪ್ರಕಾರ, ಈ ಮಹಿಳೆಯ ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹ ಬೆಳೆದಿದ್ದು ನಂತರ ಇಬ್ಬರ ನಡುವೆ ಪರಸ್ಪರ ಪ್ರೇಮ ಬೆಳೆದಿತ್ತು. ಸ್ಥಳೀಯ ಮಾಧ್ಯಮಗಳು ಗಾವೊ ಫೆಂಗ್ ಎಂದು ಗುರುತಿಸಿರುವ ಮಹಿಳೆ ಮೂರು ತಿಂಗಳ ಪ್ರಯಾಣ ವೀಸಾದಲ್ಲಿ ಚೀನಾದಿಂದ ಗಿಲ್ಗಿಟ್ ಮೂಲಕ ರಸ್ತೆ ಮಾರ್ಗವಾಗಿ ನಿನ್ನೆ ಇಸ್ಲಾಮಾಬಾದ್‌ಗೆ ಆಗಮಿಸಿದ್ದಾಳೆ. ಪೊಲೀಸರ ಪ್ರಕಾರ, 21 ವರ್ಷದ ಯುವತಿ ಆಕೆಯ 18 ವರ್ಷದ ಗೆಳೆಯ ಅಫ್ಘಾನಿಸ್ತಾನದ ಗಡಿಯಲ್ಲಿರುವ ಬುಡಕಟ್ಟು ಜಿಲ್ಲೆಯ ಬಜೌರ್ ನಿವಾಸಿ ಜಾವೇದ್ ನನ್ನು ಭೇಟಿಯಾಗಿದ್ದಳು. 

ಅಫ್ಘಾನಿಸ್ತಾನದ ಗಡಿಯಲ್ಲಿರುವ ಬಜೌರ್ ಜಿಲ್ಲೆಯ ಭದ್ರತಾ ಪರಿಸ್ಥಿತಿಯಿಂದಾಗಿ, ಜಾವೇದ್ ಯುವತಿಯನ್ನು ತನ್ನ ಊರಿನ ಬದಲು ಲೋವರ್ ದಿರ್ ಜಿಲ್ಲೆಯ ಸಮರ್‌ಬಾಗ್ ತೆಹ್ಸಿಲ್‌ನಲ್ಲಿರುವ ತನ್ನ ತಾಯಿಯ ಚಿಕ್ಕಪ್ಪನ ಮನೆಗೆ ಕರೆದೊಯ್ದಿದ್ದಾನೆ. ಕಳೆದ ಮೂರು ವರ್ಷಗಳಿಂದ ಸ್ನ್ಯಾಪ್‌ಚಾಟ್ ಮೂಲಕ ಇಬ್ಬರು ಸಂಪರ್ಕದಲ್ಲಿದ್ದು, ಸ್ನೇಹ ಪ್ರೇಮಕ್ಕೆ ತಿರುಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಲೋವರ್ ದಿರ್ ಜಿಲ್ಲೆಯ ಜಿಲ್ಲಾ ಪೊಲೀಸ್ ಅಧಿಕಾರಿ ಜಿಯಾವುದ್ದೀನ್ ಮಾಧ್ಯಮಗಳಿಗೆ ಮಾತನಾಡಿ, ಸಮರ್‌ಬಾಗ್ ಪ್ರದೇಶದಲ್ಲಿ ಚೀನಾ ಮಹಿಳೆಗೆ ಸಂಪೂರ್ಣ ಭದ್ರತೆ ಒದಗಿಸಲಾಗಿದೆ. ಆದಾಗ್ಯೂ, ಮೊಹರಂ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಭದ್ರತೆಯ ಕಾರಣಗಳಿಂದ ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿಲ್ಲ. ಮಹಿಳೆಯ ಪ್ರಯಾಣದ ದಾಖಲೆಗಳು ಸರಿಯಾಗಿವೆ. ಅವರು ಜಾವೇದ್ ಅವರೊಂದಿಗೆ ಇನ್ನೂ 'ನಿಕಾಹ್' ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ರೀತಿಯ ಘಟನೆಯಲ್ಲಿ, ರಾಜಸ್ಥಾನದ ಅಂಜು ಎಂಬ 34 ವರ್ಷದ ವಿವಾಹಿತ ಭಾರತೀಯ ಮಹಿಳೆ ತನ್ನ 29 ವರ್ಷದ ಸ್ನೇಹಿತ ನಸ್ರುಲ್ಲಾನನ್ನು ಭೇಟೆಯಾಗಲು ಪಾಕ್ ಗೆ ತೆರಳಿದ್ದು ಇದೀಗ ಆಕೆ ಇಸ್ಲಾಂಗೆ ಮತಾಂತರವಾಗಿ ಆತನನ್ನು ಮದುವೆಯಾಗಿದ್ದಾಳೆ ಎಂದು ವರದಿಯಾಗಿದೆ.

ಇದಕ್ಕೂ ಮುನ್ನ ಸಚಿನ್ ಗಾಗಿ ಭಾರತಕ್ಕೆ ಬಂದ ಪಾಕ್ ಮಹಿಳೆ
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, 30 ವರ್ಷದ ನಾಲ್ಕು ಮಕ್ಕಳ ತಾಯಿ ಸೀಮಾ ಗುಲಾಮ್ ಹೈದರ್, 22 ವರ್ಷದ ಹಿಂದೂ ಹುಡುಗ ಸಚಿನ್ ಮೀನಾ ಜೊತೆ ವಾಸಿಸಲು ಭಾರತಕ್ಕೆ ಆಗಮಿಸಿದ್ದಾಳೆ. 2019 ರಲ್ಲಿ PUBG ಆಡುವಾಗ ಅವನೊಂದಿಗೆ ಸಂಪರ್ಕಕ್ಕೆ ಮಹಿಳೆ ಬಂದಿದ್ದಳು. ಉತ್ತರ ಪ್ರದೇಶ ಪೊಲೀಸರ ಪ್ರಕಾರ, ಸೀಮಾ ಮತ್ತು ಸಚಿನ್ ದೆಹಲಿ ಸಮೀಪದ ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಅವರು ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com