ತಮಿಳುನಾಡಿನಾದ್ಯಂತ 500 ಪಡಿತರ ಅಂಗಡಿಗಳಲ್ಲಿ 60 ರೂಪಾಯಿಗೆ ಟೊಮೆಟೊ ಮಾರಾಟ!

ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆಜಿಗೆ 200 ರೂಪಾಯಿ ತಲುಪಿದ್ದು ಗ್ರಾಹಕರಲ್ಲಿ ಕಣ್ಣೀರು ತರಿಸುತ್ತಿದೆ. ಆದರೆ ಸಬ್ಸಿಡಿ ದರದಲ್ಲಿ 500 ಪಡಿತರ ಅಂಗಡಿಗಳಲ್ಲಿ ಟೊಮೆಟೊ ಮಾರಾಟ ಮಾಡಲು ತಮಿಳುನಾಡಿನ ಸಹಕಾರಿ ಇಲಾಖೆ ನಿರ್ಧರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚೆನ್ನೈ: ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆಜಿಗೆ 200 ರೂಪಾಯಿ ತಲುಪಿದ್ದು ಗ್ರಾಹಕರಲ್ಲಿ ಕಣ್ಣೀರು ತರಿಸುತ್ತಿದೆ. ಆದರೆ ಸಬ್ಸಿಡಿ ದರದಲ್ಲಿ 500 ಪಡಿತರ ಅಂಗಡಿಗಳಲ್ಲಿ ಟೊಮೆಟೊ ಮಾರಾಟ ಮಾಡಲು ತಮಿಳುನಾಡಿನ ಸಹಕಾರಿ ಇಲಾಖೆ ನಿರ್ಧರಿಸಿದೆ.

ಪ್ರಸ್ತುತ ರಾಜ್ಯದ 302 ಪಡಿತರ ಅಂಗಡಿಗಳಲ್ಲಿ ಕೆಜಿಗೆ 60 ರೂಪಾಯಿ ಸಬ್ಸಿಡಿ ದರದಲ್ಲಿ ಟೊಮೆಟೊ ಮಾರಾಟವಾಗುತ್ತಿದೆ. ಇದನ್ನು ಈಗ 500ಕ್ಕೆ ಹೆಚ್ಚಿಸಲಾಗಿದೆ.

ತೋಟಗಾರಿಕೆ ಮತ್ತು ಸಹಕಾರಿ ಇಲಾಖೆಗಳ ಅಧಿಕಾರಿಗಳೊಂದಿಗೆ ಸೋಮವಾರ ನಡೆದ ಸಭೆಯ ನಂತರ ಸಹಕಾರಿ ಸಚಿವ ಕೆ.ಆರ್.ಪೆರಿಯಕರುಪ್ಪನ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಮೊದಲ ಹಂತದಲ್ಲಿ ಚೆನ್ನೈನ 82 ನ್ಯಾಯಬೆಲೆ ಅಂಗಡಿಗಳಲ್ಲಿ ಟೊಮೇಟೊ ಕೆಜಿಗೆ 60 ರೂ.ಗೆ ಮಾರಾಟವಾಗಿದೆ ಎಂದು ಮಾಹಿತಿ ನೀಡಿದರು. ತರುವಾಯ, ಜುಲೈ 4 ರಿಂದ ರಾಜ್ಯಾದ್ಯಂತ 302 ಪಡಿತರ ಅಂಗಡಿಗಳಿಗೆ ಈ ಉಪಕ್ರಮವನ್ನು ವಿಸ್ತರಿಸಲಾಯಿತು. ಇದೀಗ ಮಂಗಳವಾರದಿಂದ 500 ಪಡಿತರ ಅಂಗಡಿಗಳಿಗೆ ಟೊಮೆಟೊ ಮಾರಾಟವನ್ನು ವಿಸ್ತರಿಸುವ ಯೋಜನೆ ಇದೆ.

ಜೂನ್ 26ರಿಂದ ರಾಜ್ಯ ಸಹಕಾರ ಇಲಾಖೆಯು ಟೊಮೇಟೊವನ್ನು ಸಬ್ಸಿಡಿ ದರದಲ್ಲಿ ನೀಡುತ್ತಿದೆ. ನೆರೆಯ ರಾಜ್ಯಗಳಲ್ಲಿ ನಿರಂತರ ಮಳೆಯಿಂದಾಗಿ ಟೊಮೆಟೊ ಪೂರೈಕೆ ಕಡಿಮೆಯಾದ ಪರಿಣಾಮ ಬೆಲೆ ಏರಿಕೆ ತಗ್ಗಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ಪೆರಿಯಕರುಪ್ಪನ್ ತಿಳಿಸಿದ್ದಾರೆ. ಬೆಲೆ ಏರಿಕೆಯು ಕೃತಕವಲ್ಲ, ಇದು ನೈಸರ್ಗಿಕ ಪರಿಣಾಮವಾಗಿದೆ ಮತ್ತು ಇದು ದಲ್ಲಾಳಿಗಳು ಅಥವಾ ಇತರ ಯಾವುದೇ ಕಾರಣಗಳಿಂದ ಉಂಟಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com