ಕರ್ನಾಟಕ, ಆಂಧ್ರದಲ್ಲಿ ಮಳೆಯಿಂದ ಬೆಳೆಗೆ ಹಾನಿ; ತಮಿಳುನಾಡಿನಲ್ಲಿ ಟೊಮೆಟೊ ಬೆಲೆ ಕೆಜಿಗೆ 200 ರೂ.!

ತಮಿಳುನಾಡಿನಲ್ಲಿ ದಿನೇ ದಿನೇ ಟೊಮೆಟೊ ಬೆಲೆ ಹೆಚ್ಚುತ್ತಿದ್ದು, ರಾಜಧಾನಿ ಚೆನ್ನೈ ಸೇರಿದಂತೆ  ಹಲವು ಪಟ್ಟಣಗಳಲ್ಲಿ ಭಾನುವಾರ ಟೊಮೆಟೊ ದರ ಕಿಲೋಗೆ 200 ರೂ. ತಲುಪಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚೆನ್ನೈ: ತಮಿಳುನಾಡಿನಲ್ಲಿ ದಿನೇ ದಿನೇ ಟೊಮೆಟೊ ಬೆಲೆ ಹೆಚ್ಚುತ್ತಿದ್ದು, ರಾಜಧಾನಿ ಚೆನ್ನೈ ಸೇರಿದಂತೆ  ಹಲವು ಪಟ್ಟಣಗಳಲ್ಲಿ ಭಾನುವಾರ ಟೊಮೆಟೊ ದರ ಕಿಲೋಗೆ 200 ರೂ. ತಲುಪಿದೆ.

ಚೆನ್ನೈನ ಕೊಯಂಬೆಡು ಸಗಟು ಮಾರುಕಟ್ಟೆಯಲ್ಲಿ ಉತ್ಪನ್ನದ ಕೊರತೆಯಿಂದ ಟೊಮೆಟೊ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮಧ್ಯಂತರ ಮಳೆಯಿಂದ ಬೆಳೆ ನಷ್ಟವಾಗಿದೆ. ಇದರಿಂದ  ತಮಿಳುನಾಡಿನಲ್ಲಿ ಟೊಮೆಟೊ ಕೊರತೆಯಾಗಿದೆ. ಭಾರೀ ಮಳೆಯಿಂದಾಗಿ ಸಂಪೂರ್ಣ ಬೆಳೆ ನಷ್ಟವಾಗಿದ್ದು, ಟೊಮೇಟೊ ಕೊರತೆ ಉಂಟಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಏರಿಕೆಯಾಗಿದೆ ಎಂದು ಕೊಯಂಬೀಡು ಮಾರುಕಟ್ಟೆಯ ಸಗಟು ತರಕಾರಿ ವ್ಯಾಪಾರಿ ಪಿ.ವಿ.ಅಹ್ಮದ್ ಅವರು ಹೇಳಿದ್ದಾರೆ.

ಇನ್ನು ಒಂದು ವಾರದಲ್ಲಿ ಕೆಜಿಗೆ 250 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

"ಈ ಮಾರುಕಟ್ಟೆ ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ ಟೊಮೆಟೊ ಬೆಲೆ ಕಿಲೋಗ್ರಾಂಗೆ 200 ರೂ.ಗೆ ತಲುಪಿದೆ. ಇದು ಸಾರ್ವಕಾಲಿಕ ದಾಖಲೆಯ ಬೆಲೆ ಏರಿಕೆ ಎಂದು ಕೊಯಂಬೆಡು ಸಗಟು ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಪಿ ಸುಕುಮಾರನ್ ಅವರು ಹೇಳಿದ್ದಾರೆ.

"ನಾವು ಜುಲೈ 20ರ ವೇಳೆಗೆ ದರ ಇಳಿಕೆಯಾಗಬಹುದು ಎಂದು ನಿರೀಕ್ಷಿಸಿದ್ದೇವೆ. ಆದರೆ ಹಠಾತ್ ಮಳೆಯಿಂದ ಬೆಳೆ ನಷ್ಟಕ್ಕೆ ಕಾರಣವಾಗಿದೆ ಮತ್ತು ಆಂಧ್ರ ಮತ್ತು ಕರ್ನಾಟಕದಲ್ಲಿ ಬೆಳೆಯಲಾದ ಶೇಕಡಾ 50 ಕ್ಕಿಂತ ಹೆಚ್ಚು ಟೊಮೆಟೊ ಮಳೆಯಿಂದಾಗಿ ನಷ್ಟವಾಗಿದೆ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com