ರಾಹುಲ್ ಗಾಂಧಿ ಭಾರತದ ಯಾವುದೋ ಶತ್ರು ಶಕ್ತಿಯ ನಾಯಕನಂತೆ ಕಾಣಿಸುತ್ತಿದ್ದಾರೆ, ರಾಜಕೀಯ ನಾಯಕನಂತಲ್ಲ: ರವೀಂದರ್ ರೈನಾ

ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಅವರು ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಅಮೆರಿಕದಲ್ಲಿನ ಅವರ ಹೇಳಿಕೆಗಳು ಭಾರತದ 'ಶತ್ರುಗಳನ್ನು' ಹೋಲುತ್ತವೆ ಮತ್ತು ಅಲ್ಲಿಂದ ತೆರೆದುಕೊಳ್ಳುವ 'ನಾಟಕ'ಕ್ಕೆ ಅವರು 'ವೆಚ್ಚವನ್ನು' ಭರಿಸಬೇಕಾಗುತ್ತದೆ ಎಂದು ಹೇಳಿದರು.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಸಂಬಾ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಅವರು ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಅಮೆರಿಕದಲ್ಲಿನ ಅವರ ಹೇಳಿಕೆಗಳು ಭಾರತದ 'ಶತ್ರುಗಳನ್ನು' ಹೋಲುತ್ತವೆ ಮತ್ತು ಅಲ್ಲಿಂದ ತೆರೆದುಕೊಳ್ಳುವ 'ನಾಟಕ'ಕ್ಕೆ ಅವರು 'ವೆಚ್ಚವನ್ನು' ಭರಿಸಬೇಕಾಗುತ್ತದೆ ಎಂದು ಹೇಳಿದರು.

ರಾಹುಲ್ ಗಾಂಧಿ ಅವರು ಆರು ದಿನಗಳ ಪ್ರವಾಸ ಕೈಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಆಡಳಿತಾರೂಢ ಸರ್ಕಾರವನ್ನು ಗುರಿಯಾಗಿಟ್ಟುಕೊಂಡು ಅಮೆರಿಕದಲ್ಲಿ ಅವರು ನೀಡಿದ ಹೇಳಿಕೆಗೆ ಬಿಜೆಪಿ ಕಟುವಾಗಿ ಟೀಕಿಸಿದೆ.

'ರಾಹುಲ್ ಗಾಂಧಿ ಮಾತನಾಡುವ ರೀತಿ ನೋಡಿದರೆ ಅವರು ಯಾವ ರಾಜಕೀಯ ಪಕ್ಷದ ನಾಯಕರೂ ಅಲ್ಲ. ಅವರು ಭಾರತದ ಯಾವುದೋ ಶತ್ರು ಶಕ್ತಿಯ ನಾಯಕ ಎಂದು ತೋರುತ್ತಿದೆ' ಎಂದು ರೈನಾ ಸಾಂಬಾ ಜಿಲ್ಲೆಯ ವಿಜಯಪುರ ಪ್ರದೇಶದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರಿಗೆ ತಿಳಿಸಿದರು.

ದೇಶದ ಶತ್ರುಗಳು ಮಾತ್ರ ವಿದೇಶಿ ನೆಲದಲ್ಲಿ ಇಂತಹ ಟೀಕೆಗಳನ್ನು ಮಾಡುತ್ತಾರೆ. ಅವರು ದೇಶದ್ರೋಹ ಮತ್ತು ಹಗೆತನವನ್ನು ಸಾಧಿಸುತ್ತಿದ್ದಾರೆ. ಈ ನಾಟಕವನ್ನು ದೇಶ ನೋಡುತ್ತಿದೆ. ಅವರು ಅದರ ವೆಚ್ಚವನ್ನು ಭರಿಸುತ್ತಾರೆ ಎಂದು ಯುಎಸ್‌ನಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಗಳ ಕುರಿತು ಸರಣಿ ಪ್ರಶ್ನೆಗಳಿಗೆ ಉತ್ತರಿಸಿದರು.

ತಮ್ಮ ಮೂರು ನಗರಗಳ ಯುಎಸ್ ಪ್ರವಾಸದ ಸಮಯದಲ್ಲಿ, ರಾಹುಲ್ ಗಾಂಧಿಯವರು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರ ಜನರಿಗೆ 'ಬೆದರಿಕೆ' ಮತ್ತು ದೇಶದ ತನಿಖಾ ಸಂಸ್ಥೆಗಳನ್ನು 'ದುರುಪಯೋಗ' ಪಡಿಸಿಕೊಳ್ಳುತ್ತಿದೆ ಎಂದು ಹೇಳಿದರು.

ಭಾರತದಲ್ಲಿ ರಾಜಕೀಯದ ಎಲ್ಲಾ ಸಾಧನಗಳನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಿಯಂತ್ರಿಸುತ್ತಿದೆ. ರಾಜಕೀಯದಲ್ಲಿ ಐತಿಹಾಸಿಕವಾಗಿ ಬಳಸುತ್ತಿದ್ದ ಸಾಮಾನ್ಯ ಸಾಧನಗಳು ಈಗ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com