260 ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ಒಡಿಶಾ ರೈಲು ದುರಂತಕ್ಕೆ ಕಾರಣವೇನು? ಇಲ್ಲಿದೆ ವಿವರ...
ನವದೆಹಲಿ: ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು–ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅವಘಡದಲ್ಲಿ ಕನಿಷ್ಠ 23 ಮಂದಿ ಮೃತಪಟ್ಟು, ಸುಮಾರು 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬಹನಾಗಾ ಬಜಾರ್ ನಿಲ್ದಾಣದ ಸಮೀಪ ರಾತ್ರಿ 7.20ರ ಸುಮಾರಿಗೆ ಈ ಭೀಕರ ಅವಘಡ ಸಂಭವಿಸಿದೆ. ಒಡಿಶಾದ ಈ ಮಹಾ ರೈಲು ದುರಂತಕ್ಕೆ ರೈಲು ಹಳಿಗಳಲ್ಲಿನ ದೋಷವೇ ಕಾರಣವಿರಬಹುದು ಎಂದು ಪ್ರಾಥಮಿಕವಾಗಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಹಳಿಗಳು ದೋಷಯುಕ್ತವಾಗಿದ್ದವೆಂದು ಶಂಕಿಸಲಾಗಿದೆ. ಆದರೆ, ತನಿಖೆಯ ನಂತರ ದುರಂತಕ್ಕೆ ನಿಖರ ಕಾರಣವೇನೆಂದು ತಿಳಿಯಲಿದೆ.
ಒಡಿಶಾದ ಬಾಲಸೋರ್ ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಮೂರು ರೈಲುಗಳ ಅಪಘಾತದಲ್ಲಿ ಸುಮಾರು 260ಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದು, ಸಾವಿರ ಪ್ರಯಾಣಿಕರು ಗಾಯಗೊಂಡಿದ್ದಾರೆ. ಆದರೆ ಏಕಾಏಕಿ ಮೂರು ರೈಲು ಡಿಕ್ಕಿ ಹೇಗಾಯಿತು ಎಂಬುದು ಇದೀಗ ಚರ್ಚೆಯ ವಿಷಯವಾಗಿದೆ.
ಆರಂಭದಲ್ಲಿ ಕೋರಮಂಡಲ್ ಶಾಲಿಮಾರ್ ಎಕ್ಸ್ ಪ್ರೆಸ್ ರೈಲು ಒಡಿಶಾದ ಬಾಲಸೋರ್ ನಲ್ಲಿ ಹಳಿ ತಪ್ಪಿದ್ದ ಪರಿಣಾಮ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆಯಲ್ಲೇ ಯಶವಂತಪುರ್-ಹೌರಾ ಸೂಪರ್ ಫಾಸ್ಟ್ ರೈಲು ಹಳಿತಪ್ಪಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕೆಲವೇ ನಿಮಿಷಗಳಲ್ಲಿ ನಿದ್ದೆಯಲ್ಲಿದ್ದ ಪ್ರಯಾಣಿಕರು ಕೊನೆಯುಸಿರೆಳೆದಿದ್ದರು.
ಒಡಿಶಾ ರೈಲು ದುರಂತಕ್ಕೆ ಪ್ರಮುಖ ವಾಗಿ ಎರಡು ಕಾರಣಗಳಿವೆ. ಮೊದಲ ಮಾನವ ದೋಷ ಮತ್ತು ಎರಡನೇ ತಾಂತ್ರಿಕ ದೋಷ. ಈ ಅಪಘಾತದ ಹಿಂದೆ ತಾಂತ್ರಿಕ ದೋಷವೇ ಕಾರಣ ಎಂದು ಹೇಳಲಾಗಿದೆ. ಸಿಗ್ನಲ್ ದೋಷದಿಂದ ಒಂದೇ ಹಳಿಯಲ್ಲಿ ಎರಡು ರೈಲುಗಳು ಬಂದು ಡಿಕ್ಕಿ ಹೊಡೆದಿವೆ ಎಂದು ವರದಿಯಾಗುತ್ತಿದೆ.
ವಾಸ್ತವವಾಗಿ, ಚಾಲಕನು ನಿಯಂತ್ರಣ ಕೊಠಡಿಯ ಸೂಚನೆಗಳ ಮೇರೆಗೆ ರೈಲು ಓಡಿಸುತ್ತಾನೆ ಮತ್ತು ನಿಯಂತ್ರಣ ಕೊಠಡಿಯಿಂದ ಸೂಚನೆಗಳನ್ನು ಹಳಿಗಳ ಮೇಲಿನ ದಟ್ಟಣೆಯನ್ನು ನೋಡುವ ಮೂಲಕ ನೀಡಲಾಗುತ್ತದೆ.
ಪ್ರತಿ ರೈಲ್ವೆ ನಿಯಂತ್ರಣ ಕೊಠಡಿಯಲ್ಲಿ ದೊಡ್ಡ ಡಿಸ್ಪ್ಲೇ ಅಳವಡಿಸಲಾಗಿರುತ್ತದೆ. ಅದರ ಮೇಲೆ ಯಾವ ಹಳಿಯ ಮೇಲೆ ರೈಲು ಇದೆ ಮತ್ತು ಯಾವ ಟ್ರ್ಯಾಕ್ ಖಾಲಿಯಾಗಿದೆ ಎಂದು ಗೋಚರಿಸುತ್ತದೆ. ಇದನ್ನು ಹಸಿರು ಮತ್ತು ಕೆಂಪು ಬಣ್ಣದ ಲೈಟ್ ಮೂಲಕ ತೋರಿಸಲಾಗುತ್ತದೆ. ಉದಾಹರಣೆಗೆ, ಹಳಿಯಲ್ಲಿ ರೈಲು ಓಡುತ್ತಿದ್ದರೆ, ಅದು ಕೆಂಪು ಬಣ್ಣವನ್ನು ತೋರಿಸುತ್ತದೆ ಮತ್ತು ಖಾಲಿ ಇರುವ ಟ್ರ್ಯಾಕ್ ಹಸಿರು ಬಣ್ಣವನ್ನು ತೋರಿಸುತ್ತದೆ. ಇದನ್ನು ನೋಡಿ ಕಂಟ್ರೋಲ್ ರೂಂನಿಂದ ಲೋಕೋ ಪೈಲಟ್‌ಗೆ ಸೂಚನೆಗಳನ್ನು ನೀಡಲಾಗುತ್ತದೆ. ಆದರೆ ಈ ಬಾರಿ ಡಿಸ್ಪ್ಲೇಯಲ್ಲಿ ರೈಲಿನ ಸಿಗ್ನಲ್ ಸರಿಯಾಗಿ ಕಾಣಿಸದ ಕಾರಣ ಇಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ