ಒಡಿಶಾದಲ್ಲಿ ಭೀಕರ ರೈಲು ಅಪಘಾತ: ಭಾರತೀಯ ರೈಲ್ವೆ ಇತಿಹಾಸದಲ್ಲಿನ ಮಾರಣಾಂತಿಕ ಅಪಘಾತಗಳಲ್ಲೊಂದು..
ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಒಳಗೊಂಡಂತೆ ಒಡಿಶಾದಲ್ಲಿ ಶುಕ್ರವಾರ ಸಂಭವಿಸಿದ ರೈಲು ಅಪಘಾತದಲ್ಲಿ ಕನಿಷ್ಠ 233 ಜನರು ಸಾವಿಗೀಡಾಗಿದ್ದಾರೆ ಮತ್ತು 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಇದು ಸ್ವಾತಂತ್ರ್ಯಾ ನಂತರದ ಅತ್ಯಂತ ಮಾರಣಾಂತಿಕ ಅಪಘಾತಗಳಲ್ಲಿ ಒಂದಾಗಿದೆ ಎಂದು
Published: 03rd June 2023 08:19 AM | Last Updated: 03rd June 2023 08:28 AM | A+A A-

ಒಡಿಶಾದಲ್ಲಿ ಭೀಕರ ರೈಲು ಅಪಘಾತ: ಭಾರತೀಯ ರೈಲ್ವೆ ಇತಿಹಾಸದಲ್ಲಿನ ಮಾರಣಾಂತಿಕ ಅಪಘಾತಗಳಲ್ಲೊಂದು..
ನವದೆಹಲಿ: ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಒಳಗೊಂಡಂತೆ ಒಡಿಶಾದಲ್ಲಿ ಶುಕ್ರವಾರ ಸಂಭವಿಸಿದ ರೈಲು ಅಪಘಾತದಲ್ಲಿ ಕನಿಷ್ಠ 233 ಜನರು ಸಾವಿಗೀಡಾಗಿದ್ದಾರೆ ಮತ್ತು 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಇದು ಸ್ವಾತಂತ್ರ್ಯಾ ನಂತರದ ಅತ್ಯಂತ ಮಾರಣಾಂತಿಕ ಅಪಘಾತಗಳಲ್ಲಿ ಒಂದಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತಿವೆ.
ಭಾರತದ ಇತಿಹಾಸದಲ್ಲಿ ಅತ್ಯಂತ ಭೀಕರ ರೈಲು ಅಪಘಾತಗಳ ನೋಟ ಇಲ್ಲಿದೆ...
* ಜೂನ್ 6, 1981 ರಂದು ಬಿಹಾರದಲ್ಲಿ ಭೀಕರ ರೈಲು ಅಪಘಾತವೊಂದು ಸಂಭವಿಸಿತು. ಸೇತುವೆ ದಾಟುವಾಗ ರೈಲೊಂದು ಬಗ್ಮತಿ ನದಿಗೆ ಬಿದ್ದು 750ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು.
#WATCH | Odisha: Latest visuals from the site where the deadly Balashore train mishap took place pic.twitter.com/hMbe5BkTeD
— ANI (@ANI) June 3, 2023
* ಆಗಸ್ಟ್ 20, 1995 ರಂದು, ಪುರುಷೋತ್ತಮ್ ಎಕ್ಸ್‌ಪ್ರೆಸ್ ರೈಲು ಫಿರೋಜಾಬಾದ್ ಬಳಿ ನಿಂತಿದ್ದ ಕಾಳಿಂದಿ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಇದರ ಅಧಿಕೃತ ಸಾವಿನ ಸಂಖ್ಯೆ ಸುಮಾರು 305 ಆಗಿತ್ತು.
* 26 ನವೆಂಬರ್ 1998 ರಂದು, ಜಮ್ಮು ತಾವಿ-ಸೀಲ್ದಾಹ್ ಎಕ್ಸ್‌ಪ್ರೆಸ್ ಪಂಜಾಬ್‌ನ ಖನ್ನಾದಲ್ಲಿರುವ ಫ್ರಾಂಟಿಯರ್ ಗೋಲ್ಡನ್ ಟೆಂಪಲ್ ಮೇಲ್‌ನ ಮೂರು ಹಳಿತಪ್ಪಿದ ಕೋಚ್‌ಗಳಿಗೆ ಡಿಕ್ಕಿ ಹೊಡೆದು 212 ಜನರು ಸಾವಿಗೀಡಾಗಿದ್ದರು.
ಇದನ್ನೂ ಓದಿ: ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 233 ಸಾವು, 900 ಮಂದಿ ಗಾಯ; ರೈಲು ಸಂಚಾರ ರದ್ದು
* ಆಗಸ್ಟ್ 2, 1999: ಉತ್ತರ ಫ್ರಾಂಟಿಯರ್ ರೈಲ್ವೆಯ ಕತಿಹಾರ್ ವಿಭಾಗದ ಗೈಸಾಲ್ ನಿಲ್ದಾಣದಲ್ಲಿ ಬ್ರಹ್ಮಪುತ್ರ ಮೇಲ್ ರೈಲು ಅವಧ್ ಅಸ್ಸಾಂ ಎಕ್ಸ್‌ಪ್ರೆಸ್‌ಗೆ ಅಪ್ಪಳಿಸಿದಾಗ ಗೈಸಲ್ ರೈಲು ದುರಂತ ಸಂಭವಿಸಿತು. ಈ ವೇಳೆ 285ಕ್ಕೂ ಹೆಚ್ಚು ಜನರು ಸಾವಿಗೀಡಾದರು ಮತ್ತು 300ಕ್ಕೂ ಹೆಚ್ಚು ಜನರು ಗಾಯಗೊಂಡರು. ಬಲಿಯಾದವರಲ್ಲಿ ಹಲವರು ಸೇನೆ, ಬಿಎಸ್‌ಎಫ್ ಅಥವಾ ಸಿಆರ್‌ಪಿಎಫ್ ಸಿಬ್ಬಂದಿಯಾಗಿದ್ದರು.
#WATCH | Latest visuals from the site of the deadly train accident in Odisha's Balasore. Rescue operations underway
— ANI (@ANI) June 3, 2023
The current death toll stands at 233 pic.twitter.com/H1aMrr3zxR
* ನವೆಂಬರ್ 20, 2016: ಕಾನ್ಪುರದಿಂದ ಸರಿಸುಮಾರು 60 ಕಿಮೀ ದೂರದಲ್ಲಿರುವ ಪುಖ್ರಾಯನ್‌ನಲ್ಲಿ ಇಂದೋರ್-ರಾಜೇಂದ್ರ ನಗರ ಎಕ್ಸ್‌ಪ್ರೆಸ್‌ನ 14 ಕೋಚ್‌ಗಳು ಹಳಿತಪ್ಪಿ 152 ಜನರು ಸಾವಿಗೀಡಾಗಿದ್ದರು ಮತ್ತು 260 ಮಂದಿ ಗಾಯಗೊಂಡರು.
* ಸೆಪ್ಟೆಂಬರ್ 9, 2002: ಹೌರಾ ರಾಜಧಾನಿ ಎಕ್ಸ್‌ಪ್ರೆಸ್ ರಫಿಗಂಜ್‌ನ ಧಾವೆ ನದಿ ಸೇತುವೆ ಮೇಲೆ ಹಳಿತಪ್ಪಿ 140ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು. ಘಟನೆಗೆ ಭಯೋತ್ಪಾದಕರ ವಿಧ್ವಂಸಕ ಕೃತ್ಯ ಕಾರಣ ಎನ್ನಲಾಗಿದೆ.
* ಡಿಸೆಂಬರ್ 23, 1964: ಪಂಬನ್-ಧನುಷ್ಕೋಡಿ ಪ್ಯಾಸೆಂಜರ್ ರೈಲು ರಾಮೇಶ್ವರಂ ಸೈಕ್ಲೋನ್‌ನಿಂದ ಕೊಚ್ಚಿಹೋಗಿ ಅದರಲ್ಲಿದ್ದ 126 ಪ್ರಯಾಣಿಕರು ಮೃತಪಟ್ಟರು.
* ಮೇ 28, 2010: ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿ-ಮುಂಬೈಗೆ ಹೊರಟಿದ್ದ ರೈಲು ಜಾರ್‌ಗ್ರಾಮ್ ಬಳಿ ಹಳಿತಪ್ಪಿ ಮತ್ತು ಮುಂದೆ ಬರುತ್ತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು 148 ಪ್ರಯಾಣಿಕರ ಸಾವಿಗೆ ಕಾರಣವಾಯಿತು.