ಸುಕ್ಮಾ: 1 ಲಕ್ಷ ರೂ ಇನಾಮು ಹೊಂದಿದ್ದ ನಕ್ಸಲ್ ಕಮಾಂಡರ್ ಬಂಧನ

ನಕ್ಸಲ್ ಪೀಡಿತ ಛತ್ತೀಸ್ ಘಡದಲ್ಲಿ 1 ಲಕ್ಷ ರೂ ಇನಾಮು ಹೊಂದಿದ್ದ ನಕ್ಸಲ್ ಕಮಾಂಡರ್ ನನ್ನು ಭದ್ರತಾ ಪಡೆಗಳು ಬಂಧಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸುಕ್ಮಾ: ನಕ್ಸಲ್ ಪೀಡಿತ ಛತ್ತೀಸ್ ಘಡದಲ್ಲಿ 1 ಲಕ್ಷ ರೂ ಇನಾಮು ಹೊಂದಿದ್ದ ನಕ್ಸಲ್ ಕಮಾಂಡರ್ ನನ್ನು ಭದ್ರತಾ ಪಡೆಗಳು ಬಂಧಿಸಿವೆ.

ನಕ್ಸಲ್ ನಿಗ್ರಹ ದಳ ಮತ್ತು ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಛತ್ತೀಸ್‌ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಸೋಮವಾರ ಮಹತ್ವದ ಕಾರ್ಯಾಚರಣೆ ನಡೆಸಿ ತಲೆಗೆ 1 ಲಕ್ಷ ರೂಪಾಯಿ ಬಹುಮಾನ ಹೊಂದಿದ್ದ ನಕ್ಸಲ್ ಕಮಾಂಡರ್ ನನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂತೆಯೇ ಬಂಧಿತ ನಕ್ಸಲ್ ಮುಖಂಡನಿಂದ ಟಿಫಿನ್ ಬಾಕ್ಸ್ ಬಾಂಬ್, ನಾಲ್ಕು ಡಿಟೋನೇಟರ್‌ಗಳು, ನಾಲ್ಕು ಜಿಲೆಟಿನ್ ಕಡ್ಡಿಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಸೋದಿ ದೇವಾ ಅಲಿಯಾಸ್ ಸುನಿಲ್ ಎಂದು ಗುರುತಿಸಲಾಗಿದ್ದು, ಪೊಲೀಸ್ ಮತ್ತು ಕೋಬ್ರಾ, ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಗಣ್ಯ ಪಡೆಗಳ ಜಂಟಿ ತಂಡ ನಿನ್ನೆ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ನಡೆಸಿ ಈತನನ್ನು ಬಂಧಿಸಿದೆ.

ಸುರ್ಪನಗುಡ ಆರ್‌ಪಿಸಿಯ ಮಿಲಿಷಿಯಾ ಪ್ಲಟೂನ್ ಕಮಾಂಡರ್-ಇನ್-ಚೀಫ್ ಆಗಿ ದೇವಾ ನಿಷೇಧಿತ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಬಂಧಿತ ನಕ್ಸಲ್ ತನ್ನ ತಲೆಗೆ 1 ಲಕ್ಷ ರೂಪಾಯಿ ನಗದು ಬಹುಮಾನವನ್ನು ಹೊಂದಿದ್ದ. ಐಇಡಿ ಸ್ಫೋಟ, ಕೊಲೆ, ಭದ್ರತಾ ಸಿಬ್ಬಂದಿಗೆ ಹೊಂಚುದಾಳಿ, ಎನ್‌ಕೌಂಟರ್, ಸರಪಂಚ್‌ನನ್ನು ಪೊಲೀಸ್ ಇನ್ಫಾರ್ಮರ್ ಎಂಬ ಹಣೆಪಟ್ಟಿ ಹಚ್ಚಿ ಹತ್ಯೆ ಮಾಡಿದ್ದು ಮತ್ತು ಇತರ ಘಟನೆಗಳು ಸೇರಿದಂತೆ ಹಲವಾರು ಅಪರಾಧಗಳಲ್ಲಿ ಈ ಬಂಧಿತ ನಕ್ಸಲೀಯ ಭಾಗಿಯಾಗಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

2012 ಮತ್ತು 2018 ರ ನಡುವೆ ನಕ್ಸಲರ LOS ಸದಸ್ಯರಾಗಿ, ಮಿಲಿಟಿಯ ಸದಸ್ಯರಾಗಿ (2018-19),  (2019-21) ಮತ್ತು 2021 ರಿಂದ ಮಿಲಿಟಿಯ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com