ಗೂಡ್ಸ್ ರೈಲಿನ ಸಾಂದರ್ಭಿಕ ಚಿತ್ರ
ಗೂಡ್ಸ್ ರೈಲಿನ ಸಾಂದರ್ಭಿಕ ಚಿತ್ರ

ಒಡಿಶಾದಲ್ಲಿ ಮತ್ತೊಂದು ಅಪಘಾತ: ಗೂಡ್ಸ್ ರೈಲಿಗೆ ಸಿಲುಕಿ ನಾಲ್ವರು ಕಾರ್ಮಿಕರು ಸಾವು, 3 ಮಂದಿಗೆ ಗಂಭೀರ ಗಾಯ

ಒಡಿಶಾದ ಬಾಲಾಸೋರ್ ನಲ್ಲಿ 288 ಪ್ರಯಾಣಿಕರನ್ನು ಬಲಿ ಪಡೆದ ತ್ರಿವಳಿ ರೈಲು ದುರಂತ ಪ್ರಕರಣ ಸಂಭವಿಸಿ ಇನ್ನೂ ಒಂದು ವಾರ ಕಳೆದಿಲ್ಲ ಆದಾಗಲೇ ಒಡಿಶಾದಲ್ಲಿ ಮತ್ತೊಂದು ರೈಲು ಅಪಘಾತ ನಡೆದಿದೆ.

ಜಾಜ್ ಪುರ:  ಒಡಿಶಾದ ಬಾಲಾಸೋರ್ ನಲ್ಲಿ 288 ಪ್ರಯಾಣಿಕರನ್ನು ಬಲಿ ಪಡೆದ ತ್ರಿವಳಿ ರೈಲು ದುರಂತ ಪ್ರಕರಣ ಸಂಭವಿಸಿ ಇನ್ನೂ ಒಂದು ವಾರ ಕಳೆದಿಲ್ಲ ಆದಾಗಲೇ ಒಡಿಶಾದಲ್ಲಿ ಮತ್ತೊಂದು ರೈಲು ಅಪಘಾತ ನಡೆದಿದೆ.

ಗೂಡ್ಸ್ ರೈಲಿಗೆ ಸಿಲುಕಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಾಜ್‌ಪುರ ರಸ್ತೆ ರೈಲು ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೂಡ್ಸ್ ರೈಲು ಚಲಿಸಲು ಪ್ರಾರಂಭಿಸಿದಾಗ ಕಾರ್ಮಿಕರು ಅದರಡಿ ಭಾರೀ ಮಳೆಯಿಂದ ಆಶ್ರಯ ಪಡೆದಿದ್ದರು ಎನ್ನಲಾಗಿದೆ. ದಿಢೀರನೆ ಗುಡುಗು ಸಹಿತ ಮಳೆಯಾಗಿದ್ದು, ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಗೂಡ್ಸ್ ರೈಲಿನ ಅಡಿಯಲ್ಲಿ ಆಶ್ರಯ ಪಡೆದಿದ್ದಾಗ ರೈಲು ಚಲಿಸಲು ಪ್ರಾರಂಭಿಸಿದೆ. ಇದರಿಂದಾಗಿ ನಾಲ್ವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ವಕ್ತಾರರು ಹೇಳಿದ್ದಾರೆ. 

ಅಲ್ಲದೇ,  ಇನ್ನಿಬ್ಬರು ಸಹ ಗಾಯಗೊಂಡಿದ್ದಾರೆ ಎಂದು ಜಾಜ್‌ಪುರದ ಸ್ಥಳೀಯರು ಹೇಳಿದ್ದಾರೆ. ಬಾಲಾಸೋರ್ ಜಿಲ್ಲೆಯಲ್ಲಿ 288 ಜನರ ಸಾವಿಗೆ ಕಾರಣವಾದ ಮೂರು ರೈಲುಗಳನ್ನು ಒಳಗೊಂಡ ದೊಡ್ಡ ಅಪಘಾತದ ಐದು ದಿನಗಳ ನಂತರ ಈ ಘಟನೆ ಸಂಭವಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com