ಅಂತರರಾಷ್ಟ್ರೀಯ ಗಡಿ ಬಳಿ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್, ಪ್ರತ್ಯೇಕ ಘಟನೆಯಲ್ಲಿ ಹೆರಾಯಿನ್ ವಶ

ಅಮೃತಸರದ ಅಂತರರಾಷ್ಟ್ರೀಯ ಗಡಿ ಬಳಿ ಭಾರತೀಯ ಭೂಪ್ರದೇಶಕ್ಕೆ ನುಸುಳಿದ ನಂತರ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಹೊಡೆದುರುಳಿಸಿದ್ದಾರೆ ಎಂದು ವಕ್ತಾರರು ಗುರುವಾರ ತಿಳಿಸಿದ್ದಾರೆ.
ಬಿಎಸ್ಎಫ್ ಹೊಡೆದುರುಳಿಸಿದ ಪಾಕಿಸ್ತಾನದ ಡ್ರೋನ್
ಬಿಎಸ್ಎಫ್ ಹೊಡೆದುರುಳಿಸಿದ ಪಾಕಿಸ್ತಾನದ ಡ್ರೋನ್

ಚಂಡೀಗಢ: ಅಮೃತಸರದ ಅಂತರರಾಷ್ಟ್ರೀಯ ಗಡಿ ಬಳಿ ಭಾರತೀಯ ಭೂಪ್ರದೇಶಕ್ಕೆ ನುಸುಳಿದ ನಂತರ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಹೊಡೆದುರುಳಿಸಿದ್ದಾರೆ ಎಂದು ವಕ್ತಾರರು ಗುರುವಾರ ತಿಳಿಸಿದ್ದಾರೆ.

ಪ್ರತ್ಯೇಕ ಬೆಳವಣಿಗೆಯಲ್ಲಿ, ಗಡಿ ಕಾವಲು ಪಡೆಯ ಸಿಬ್ಬಂದಿ ತರ್ನ್ ತರನ್ ಜಿಲ್ಲೆಯಲ್ಲಿ ಮತ್ತೊಂದು ಪಾಕಿಸ್ತಾನಿ ಡ್ರೋನ್ ಮೂಲಕ ಬೀಳಿಸಿದ್ದ ಎರಡು ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಂಡಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಅಮೃತಸರದ ಭೈನಿ ರಜಪೂತಾನ ಗ್ರಾಮದ ಬಳಿ ಮಾನವರಹಿತ ವೈಮಾನಿಕ ವಾಹನದ ಝೇಂಕಾರದ ಸದ್ದು ಕೇಳಿದ ಬಿಎಸ್ಎಫ್ ಸಿಬ್ಬಂದಿ ಅದರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪಡೆಯ ವಕ್ತಾರರು ತಿಳಿಸಿದ್ದಾರೆ.

ಬಿಎಸ್‌ಎಫ್ ಮತ್ತು ಪಂಜಾಬ್ ಪೊಲೀಸರ ಜಂಟಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಹೊರವಲಯದಲ್ಲಿರುವ ರಜತಾಲ್-ಭರೋಪಾಲ್-ಡಾವೊಕೆ ಟ್ರೈ-ಜಂಕ್ಷನ್‌ನ ಪಕ್ಕದ ಮೈದಾನದಲ್ಲಿ ಡ್ರೋನ್ ಹಾನಿಗೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅವರು ಹೇಳಿದರು.

ವಶಪಡಿಸಿಕೊಂಡ ಡ್ರೋನ್ ಮಾಡೆಲ್ ಡಿಜೆಐ ಮ್ಯಾಟ್ರಿಸ್ 300ಆರ್‌ಟಿಕೆ ಸರಣಿಯ ಕ್ವಾಡ್‌ಕಾಪ್ಟರ್ ಆಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

2.50 ಕಿಲೋಗ್ರಾಂ ತೂಕದ ಹೆರಾಯಿನ್ ವಶ

ಇನ್ನೊಂದೆಡೆ ತರ್ನ್ ತರನ್‌ ಜಿಲ್ಲೆಯ ವಾನ್ ಗ್ರಾಮದ ಬಳಿ ಬುಧವಾರ ಅದೇ ಸಮಯದಲ್ಲಿ ಪಾಕಿಸ್ತಾನದ ಕಡೆಯಿಂದ ಬರುತ್ತಿದ್ದ ಡ್ರೋನ್ ಅನ್ನು ಬಿಎಸ್ಎಫ್ ಸಿಬ್ಬಂದಿ ಪತ್ತೆ ಹಚ್ಚಿದರು ಮತ್ತು ಅದನ್ನು ತಡೆದರು ಎಂದು ವಕ್ತಾರರು ತಿಳಿಸಿದ್ದಾರೆ.

ಸ್ವಲ್ಪ ಸಮಯದ ನಂತರ, ವಾನ್‌ನಿಂದ ಬಂದ ಅನುಮಾನಾಸ್ಪದ ಮೋಟಾರ್‌ ಸೈಕಲ್ ಅನ್ನು ಗುರುತಿಸಿದ ಸೈನಿಕರು ಅದನ್ನು ನಿಲ್ಲಿಸಲು ಮುಂದಾದರು. ಆದರೆ, ಅದರ ಸವಾರನು ಮಾರಿ ಕಾಂಬೋಕೆ ಗ್ರಾಮದ ಕಡೆಗೆ ವೇಗವಾಗಿ ಹೊರಟುಹೋದನು. ಬಿಎಸ್‌ಎಫ್ ಪಡೆಗಳು ಬೈಕ್ ಅನ್ನು ಹಿಂಬಾಲಿಸಿದಾಗ ಅದನ್ನು ಗ್ರಾಮದಲ್ಲಿ ಬಿಟ್ಟು ಹೋಗಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು.

ಗ್ರಾಮವನ್ನು ಸುತ್ತುವರಿದು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ, ಹಳದಿ ಅಂಟಿಕೊಳ್ಳುವ ಟೇಪ್‌ನಲ್ಲಿ ಸುತ್ತಿದ ಪ್ಯಾಕೆಟ್ ಪತ್ತೆಯಾಗಿದೆ. ಪ್ಯಾಕೆಟ್‌ನಲ್ಲಿ ಸುಮಾರು 2.50 ಕಿಲೋಗ್ರಾಂ ತೂಕದ ಹೆರಾಯಿನ್ ಕಂಡುಬಂದಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಡ್ರೋನ್ ಮೂಲಕ ಇಳಿಸಿದ ನಂತರ ಬೈಕ್ ಸವಾರ ಪ್ಯಾಕೆಟ್ ಕೊಂಡೊಯ್ಯುತ್ತಿದ್ದ ಶಂಕೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com