ಮಧ್ಯ ಪ್ರದೇಶ: ಹಿಜಾಬ್ ವಿವಾದ, ಶಾಲೆ ವಿರುದ್ಧ ಪ್ರಕರಣ ದಾಖಲು

ಸಮವಸ್ತ್ರದ ಭಾಗವಾಗಿ ವಿದ್ಯಾರ್ಥಿನಿಯರು ಹಿಜಾಬ್ ರೀತಿಯ ಹೆಡ್ ಸ್ಕಾರ್ಫ್ ಧರಿಸುವಂತೆ ಮಾಡಿರುವ ಆರೋಪದಿಂದಾಗಿ ವಿವಾದದ ಕೇಂದ್ರವಾಗಿರುವ ದಾಮೋಹ್ ಜಿಲ್ಲೆಯ ಖಾಸಗಿ ಶಾಲೆಯೊಂದರ ವಿರುದ್ಧ ಮಧ್ಯ ಪ್ರದೇಶ ಸರ್ಕಾರ ಪ್ರಕರಣ ದಾಖಲಿಸಿದೆ ಎಂದು ಗೃಹ ಸಚಿವ ನಾರೋಟ್ಟಮ್ ಮಿಶ್ರಾ ಗುರುವಾರ ತಿಳಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದಾಮೋಹ್: ಸಮವಸ್ತ್ರದ ಭಾಗವಾಗಿ ವಿದ್ಯಾರ್ಥಿನಿಯರು ಹಿಜಾಬ್ ರೀತಿಯ ಹೆಡ್ ಸ್ಕಾರ್ಫ್ ಧರಿಸುವಂತೆ ಮಾಡಿರುವ ಆರೋಪದಿಂದಾಗಿ ವಿವಾದದ ಕೇಂದ್ರವಾಗಿರುವ ದಾಮೋಹ್ ಜಿಲ್ಲೆಯ ಖಾಸಗಿ ಶಾಲೆಯೊಂದರ ವಿರುದ್ಧ ಮಧ್ಯ ಪ್ರದೇಶ ಸರ್ಕಾರ ಪ್ರಕರಣ ದಾಖಲಿಸಿದೆ ಎಂದು ಗೃಹ ಸಚಿವ ನಾರೋಟ್ಟಮ್ ಮಿಶ್ರಾ ಗುರುವಾರ ತಿಳಿಸಿದ್ದಾರೆ. 

ಐಪಿಸಿ ಸೆಕ್ಷನ್ 295( ಎ) ಧಾರ್ಮಿಕ ಭಾವನೆಗಳ ಪ್ರಚೋದನೆ ) ಮತ್ತು 506 ಬಿ ( ಅಪರಾಧದ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆಯಿಂದ ಹೊರಬರುವ ಅಂಶಗಳ ಆಧಾರದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ವಕ್ತಾರರೂ ಆಗಿರುವ ಮಿಶ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ. 

ರಾಜಧಾನಿ ಭೋಪಾಲ್ ನಿಂದ 250 ಕಿ.ಮೀ ದೂರದಲ್ಲಿರುವ ದಾಮೋಹ್ ನಲ್ಲಿರುವ ಗಂಗಾ ಜಮುನಾ ಪ್ರೌಢ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಹುಡುಗಿಯರು ಸಮವಸ್ತ್ರದ ಭಾಗವಾಗಿ ಹಿಜಾಬ್ ರೀತಿಯ ಹೆಡ್ ಸ್ಕಾರ್ಫ್ ಧರಿಸಿರುವ ಫೋಸ್ಟರ್ ಒಂದು ವೈರಲ್ ಆದ ಬಳಿ ಆ ಶಾಲೆಯ ಮಾನ್ಯತೆಯನ್ನು ಶಿಕ್ಷಣ ಇಲಾಖೆ  ಕಳೆದ ವಾರ ಅಮಾನುತುಪಡಿಸಿತ್ತು. 

ಈ ವಿಚಾರ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಬುಧವಾರ ತಿಳಿಸಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ , ಸತ್ಯಾಂಶ ಆಧಾರದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು  ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com