ಮಧ್ಯ ಪ್ರದೇಶ: ಸತತ 52 ಗಂಟೆಗಳ ರಕ್ಷಣಾ ಕಾರ್ಯಾಚರಣೆ ವಿಫಲ, ಕೊಳವೆ ಬಾವಿಗೆ ಬಿದ್ದಿದ್ದ ಬಾಲಕಿ ಸಾವು

ಮಧ್ಯಪ್ರದೇಶದ ಸೆಹೋರ್‌ನಲ್ಲಿ 300 ಅಡಿ ಬೋರ್‌ವೆಲ್‌ಗೆ ಬಿದ್ದಿದ್ದ ಎರಡೂವರೆ ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಸೇನೆ, ಎನ್ ಡಿಆರ್ ಎಫ್, ಎಸ್ ಡಿಇಆರ್ ಎಫ್ ಸಿಬ್ಬಂದಿ, ಭಾರಿ ಯಂತ್ರೋಪಕರಣಗಳು, ರೊಬೋಟಿಕ್ ತಂಡ ಸತತ 50 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದವು. ಆದರೂ, ಬಾಲಕಿ ಬದುಕುಳಿಯಲಿಲ್ಲ.
ಕೊಳವೆ ಬಾವಿಗೆ ಬಿದ್ದಿದ್ದ ಮಗು
ಕೊಳವೆ ಬಾವಿಗೆ ಬಿದ್ದಿದ್ದ ಮಗು

ಸೆಹೋರ್ : ಮಧ್ಯಪ್ರದೇಶದ ಸೆಹೋರ್‌ನಲ್ಲಿ 300 ಅಡಿ ಬೋರ್‌ವೆಲ್‌ಗೆ ಬಿದ್ದಿದ್ದ ಎರಡೂವರೆ ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಸೇನೆ, ಎನ್ ಡಿಆರ್ ಎಫ್, ಎಸ್ ಡಿಇಆರ್ ಎಫ್ ಸಿಬ್ಬಂದಿ, ಭಾರಿ ಯಂತ್ರೋಪಕರಣಗಳು, ರೊಬೋಟಿಕ್ ತಂಡ ಸತತ 50 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆಯಲ್ಲಿ ತೊಡಗಿಕೊಂಡು ರಕ್ಷಿಸಿದ್ದವು. ಆದರೂ, ಬಾಲಕಿ ಬದುಕುಳಿಯಲಿಲ್ಲ.

ಮಂಗಳವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಮುಂಗಾವಳಿ ಗ್ರಾಮದ 300 ಅಡಿ ಬೋರ್‌ವೆಲ್‌ಗೆ ಬಿದ್ದಿದ್ದ ಬಾಲಕಿಯನ್ನು ಗುರುವಾರ ಸಂಜೆ 5:30ಕ್ಕೆ ರಕ್ಷಿಸಿ,  ಆಂಬುಲೆನ್ಸ್‌ನಲ್ಲಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅಲ್ಲಿ ಆಕೆ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸಲಾದ ಯಂತ್ರಗಳ ಕಂಪನದಿಂದಾಗಿ  ಆರಂಭದಲ್ಲಿ 40 ಅಡಿಗಳಲ್ಲಿ ಸಿಲುಕಿಕೊಂಡಿದ್ದ ಬಾಲಕಿ ಸೃಷ್ಟಿ 100 ಅಡಿಗಳಷ್ಟು ಕೆಳಕ್ಕೆ ಬಿದ್ದಿರುವುದಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬುಧವಾರ ಹೇಳಿದರೆ, ಬಾಲಕಿ ರಕ್ಷಿಸುವ ಮುನ್ನ 134 ಅಡಿ ಅಳಕ್ಕೆ  ಬಿದ್ದಿತ್ತು ಎಂದು ಸ್ಥಳದಲ್ಲಿದ್ದ ಅಧಿಕಾರಿಯೊಬ್ಬರು ತಿಳಿಸಿದರು.

ಸೇನೆ ಸೇರಿದಂತೆ ಅನೇಕ ಏಜೆನ್ಸಿಗಳ ಸಿಬ್ಬಂದಿ ಬಾಲಕಿ ರಕ್ಷಿಸಲು ಹರಸಾಹಸಪಟ್ಟರು. ಪೈಪ್ ಮೂಲಕ ಆಕೆಗೆ ಆಮ್ಲಜನಕವನ್ನು ಪೂರೈಸಲಾಗಿತ್ತು. ಗುರುವಾರ ಬೆಳಗ್ಗೆ ಗುಜರಾತ್‌ನ ರೊಬೊಟಿಕ್ ತಜ್ಞರ ತಂಡ ಬಾಲಕಿಯನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಿತ್ತು.ಬಾಲಕಿ ಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಲು ರೋಬೋಟ್ ನ್ನು ಬೋರ್‌ವೆಲ್‌ಗೆ ಇಳಿಸಲಾಗಿತ್ತು. ಆದರೂ ಈ ಎಲ್ಲಾ ಪ್ರಯತ್ನ ವಿಫಲವಾಗಿದೆ. ಬಾಲಕಿ ಸಾವನ್ನಪ್ಪುವುದರೊಂದಿಗೆ ತೆರೆದ ಕೊಳವೆ ಬಾವಿಗಳಿಂದ ಆಗುತ್ತಿರುವ  ಅಪಾಯಗಳನ್ನು ಈ ಘಟನೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಶನಿವಾರ ಗುಜರಾತ್‌ನ ಜಾಮ್‌ನಗರ ಜಿಲ್ಲೆಯಲ್ಲಿ ಎರಡು ವರ್ಷದ ಬಾಲಕಿ ಕಿರಿದಾದ ಬೋರ್‌ವೆಲ್‌ಗೆ ಬಿದ್ದಿದ್ದ ಬಾಲಕಿ 20 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಳು. 19 ಗಂಟೆಗಳ ಕಾಲ ತೀವ್ರ ರಕ್ಷಣಾ ಪ್ರಯತ್ನಗಳ ಹೊರತಾಗಿಯೂ ಆಕೆ ಸಾವನ್ನಪ್ಪಿದಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com