CoWin ಡೇಟಾ ಸೋರಿಕೆ ಆಗಿಲ್ಲ; ಪೋರ್ಟಲ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ: ಕೇಂದ್ರ ಸರ್ಕಾರ

CoWin ಪೋರ್ಟಲ್‌ನಿಂದ ಡೇಟಾ ಸೋರಿಕೆಯಾಗಿದೆ ಎಂಬ ವಿಷಯ ಇತ್ತೀಚೆಗೆ ಬಹಿರಂಗಗೊಂಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ, ಕೋವಿನ್ ಪೋರ್ಟಲ್ ನಿಂದ ಡೇಟಾ ಸೋರಿಕೆಯಾಗಿಲ್ಲ.
ರಾಜೀವ್ ಚಂದ್ರಶೇಖರ್
ರಾಜೀವ್ ಚಂದ್ರಶೇಖರ್

ನವದೆಹಲಿ: CoWin ಪೋರ್ಟಲ್‌ನಿಂದ ಡೇಟಾ ಸೋರಿಕೆಯಾಗಿದೆ ಎಂಬ ವಿಷಯ ಇತ್ತೀಚೆಗೆ ಬಹಿರಂಗಗೊಂಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ, ಕೋವಿನ್ ಪೋರ್ಟಲ್ ನಿಂದ ಡೇಟಾ ಸೋರಿಕೆಯಾಗಿಲ್ಲ. ಪೋರ್ಟಲ್ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

ಈ ಪೋರ್ಟಲ್‌ನಲ್ಲಿರುವ ಡೇಟಾವನ್ನು OTP ದೃಢೀಕರಣದ ಮೂಲಕ ಮಾತ್ರ ಪ್ರವೇಶಿಸಬಹುದು. ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ಯಾರೂ ಬಳಕೆದಾರರ ಡೇಟಾವನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಟ್ವಿಟರ್‌ನಲ್ಲಿನ ಕೆಲವು ಪೋಸ್ಟ್‌ಗಳಲ್ಲಿ, ಸರ್ಕಾರಿ ಪೋರ್ಟಲ್ COWIN ನಿಂದ ಟೆಲಿಗ್ರಾಮ್‌ನಲ್ಲಿ ಕೋಟಿಗಟ್ಟಲೆ ಭಾರತೀಯರ ವೈಯಕ್ತಿಕ ಡೇಟಾ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. ಜನಸಾಮಾನ್ಯರ ಜೊತೆಗೆ ಹಲವು ದೊಡ್ಡ ನಾಯಕರು ಮತ್ತು ಪತ್ರಕರ್ತರ ಆಧಾರ್, ಪಾಸ್‌ಪೋರ್ಟ್ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಗಳಂತಹ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ವೈಯಕ್ತಿಕ ವಿವರವು ಸಂದೇಶ ಕಳುಹಿಸುವ ವೇದಿಕೆ ಟೆಲಿಗ್ರಾಮ್‌ನಲ್ಲಿ ಲಭ್ಯವಿದೆ.

ಟೆಲಿಗ್ರಾಮ್ ಬೋಟ್‌ನಲ್ಲಿ ಕೋವಿನ್ ಪೋರ್ಟಲ್‌ಗೆ ಲಿಂಕ್ ಮಾಡಲಾದ ಸಂಖ್ಯೆಯನ್ನು ನಮೂದಿಸಿದಾಗ ಲಿಂಕ್ ಜೆಂಡರ್, ಡಿಒಬಿ ಮತ್ತು ಲಸಿಕೆ ಕೇಂದ್ರದ ಹೆಸರು ಮತ್ತು ಲಸಿಕೆಗೆ ಬಳಸುವ ಐಡಿ ಸಂಖ್ಯೆ ಗೋಚರಿಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದಲ್ಲದೆ, ವೋಟರ್ ಐಡಿಯಿಂದ ಆಧಾರ್ ಮತ್ತು ಪ್ಯಾನ್ ಕಾರ್ಡ್‌ವರೆಗಿನ ಐಡಿಗಳು ಟೆಲಿಗ್ರಾಮ್‌ನಲ್ಲಿ ಗೋಚರಿಸುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com