ಗುಜರಾತ್ ಕರಾವಳಿಗೆ ಅಪ್ಪಳಿಸಿದ ಬಿಪರ್ಜೋಯ್ ಚಂಡಮಾರುತ
ಕಚ್: ಬಿಪರ್ಜೋಯ್ ಚಂಡಮಾರುತ ಗುಜರಾತ್ ನ ಸೌರಾಷ್ಟ್ರ ಮತ್ತು ಕಚ್ ಕರಾವಳಿ ಜಿಲ್ಲೆಗಳಿಗೆ ಗುರುವಾರ ಸಂಜೆ ಅಪ್ಪಳಿಸಿದ್ದು, ಈಗಾಗಲೇ ಅಪಾಯ ಪ್ರದೇಶಗಳಲ್ಲಿರುವ ಸುಮಾರು 94 ಸಾವಿರ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.
ಗುಜರಾತ್ ನ ಕರಾವಳಿ ಭಾಗದ ಎಂಟು ಜಿಲ್ಲೆಗಳಲ್ಲಿ ಬಿಪರ್ಜೋಯ್ ಚಂಡಮಾರುತದ ಪರಿಣಾಮ ಬೀರಲಿದ್ದು, ಇದು ಮಧ್ಯರಾತ್ರಿಯವರೆಗೂ ಹೆಚ್ಚು ಸಕ್ರಿಯವಾಗಿರಲಿದೆ ಎಂದು ಭಾರತೀಯ ಹವಾಮಾನಇಲಾಖೆ (ಐಎಂಡಿ) ತಿಳಿಸಿದೆ.
ಈ ಚಂಡಮಾರುತ ಹೆಚ್ಚು ತೀವ್ರವಾಗಿದ್ದು, ಕರಾವಳಿಗೆ ಅಪ್ಪಳಿಸುತ್ತಿದ್ದಂತೆ ಹಲವಾರು ಸ್ಥಳಗಳಲ್ಲಿ ಮರಗಳನ್ನು ಉರುಳಿಸಿದೆ ಮತ್ತು ಓಖಾ ಬಂದರಿನಲ್ಲಿ ಹಲವು ದೋಣಿಗಳು ಹಾನಿಗೊಳಗಾಗಿವೆ.
"ದಟ್ಟವಾದ ಮೋಡಗಳು ಕಚ್ ಮತ್ತು ದೇವಭೂಮಿ ದ್ವಾರಕಾ ಜಿಲ್ಲೆಗಳನ್ನು ಪ್ರವೇಶಿಸಿದ್ದು, ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆಯು ಪ್ರಾರಂಭವಾಗಿದೆ. ಇದು ಮಧ್ಯರಾತ್ರಿಯವರೆಗೆ ಮುಂದುವರಿಯುತ್ತದೆ" ಎಂದು ಐಎಂಡಿ ಡೈರೆಕ್ಟರ್ ಜನರಲ್ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.
"ಬಿಪರ್ಜೋಯ್ ಚಂಡಮಾರುತದ ವ್ಯಾಪ್ತಿ ಸುಮಾರು 50 ಕಿಮೀ ಆಗಿದ್ದು, ಗಂಟೆಗೆ 13-14 ಕಿಮೀ ವೇಗದಲ್ಲಿ ಚಲಿಸುತ್ತಿದೆ. ಹೀಗಾಗಿ ಸುಮಾರು ಐದು ಗಂಟೆಗಳ ಕಾಲ ಭಾರಿ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಕಚ್ ಜಿಲ್ಲೆಯಲ್ಲಿ ಬಿಪೋರ್ಜಾಯ್ ಚಂಡಮಾರುತದ ಅಪ್ಪಳಿಸುವ ಮುನ್ನ ಗುಜರಾತ್‌ನ ಕರಾವಳಿ ಪ್ರದೇಶದಿಂದ ಸುಮಾರು ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ