ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಮೋದಿ ಸರ್ಕಾರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಹಾಳು ಮಾಡುತ್ತಿದೆ: ಮಲ್ಲಿಕಾರ್ಜುನ ಖರ್ಗೆ

ಮೋದಿ ಸರ್ಕಾರ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು(ಪಿಎಸ್‌ಯು) ಹಾಳುಮಾಡುತ್ತಿದೆ ಮತ್ತು ಲಕ್ಷಾಂತರ ಸರ್ಕಾರಿ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಆರೋಪಿಸಿದ್ದಾರೆ.

ನವದೆಹಲಿ: ಮೋದಿ ಸರ್ಕಾರ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು(ಪಿಎಸ್‌ಯು) ಹಾಳುಮಾಡುತ್ತಿದೆ ಮತ್ತು ಲಕ್ಷಾಂತರ ಸರ್ಕಾರಿ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಆರೋಪಿಸಿದ್ದಾರೆ.

'ಮೇಕ್ ಇನ್ ಇಂಡಿಯಾ' ಕೇವಲ ಕೇಂದ್ರ ಸರ್ಕಾರದ ವರ್ಚಸ್ಸು ಹೆಚ್ಚಿಸಿಕೊಳ್ಳುವ ಪ್ರಚಾರದ ತಂತ್ರ ಅಷ್ಟೆ ಎಂದು ವಾಗ್ದಾಳಿ ನಡೆಸಿದ ಖರ್ಗೆ, ಪಿಎಸ್‌ಯುಗಳನ್ನು ಹಾಳುಮಾಡುವ ಮೂಲಕ.. ಲಕ್ಷಗಟ್ಟಲೆ ಸರ್ಕಾರಿ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿರುವುದು ಯಾವ ಟೂಲ್‌ಕಿಟ್‌ನ ಭಾಗವಾಗಿದೆ, ನರೇಂದ್ರ ಮೋದಿ ಜಿ" ಎಂದು ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ.

ಮೇಕ್ ಇನ್ ಇಂಡಿಯಾ’ ಎಂಬ ಹೈವೋಲ್ಟೇಜ್ ಪ್ರಚಾರ ಕೇವಲ ಇಮೇಜ್ ಹೆಚ್ಚಿಸಲು ಮಾತ್ರ, ಅದರಿಂದ ದೇಶಕ್ಕೆ ಏನು ಸಿಕ್ಕಿತು’? ಎಂದು ಎಐಸಿಸಿ ಅಧ್ಯಕ್ಷರು ಪ್ರಶ್ನಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಉದ್ಯಮಗಳು ದೇಶದ ಆರ್ಥಿಕತೆಯ ಪ್ರಮುಖ ಭಾಗವೆಂದು ಮೋದಿ ಸರ್ಕಾರ ನಂಬುವುದಿಲ್ಲ ಎಂದು ಕಾಂಗ್ರೆಸ್ ಮುಖ್ಯಸ್ಥರು ಹೇಳಿದ್ದಾರೆ.

"ಮೋದಿ ಸರ್ಕಾರ, ಏಳು ಪಿಎಸ್‌ಯುಗಳಿಂದ 3.84 ಲಕ್ಷ ಉದ್ಯೋಗಗಳನ್ನು ಏಕೆ ಕಿತ್ತುಕೊಂಡಿತು? ಕೇಂದ್ರ ಸರ್ಕಾರದಲ್ಲಿ ಮಹಿಳೆಯರ ಉದ್ಯೋಗಗಳು ಶೇಕಡಾ 42 ರಷ್ಟು ಏಕೆ ಕಡಿಮೆಯಾಗಿದೆ? ಗುತ್ತಿಗೆ ಮತ್ತು ಸಾಂದರ್ಭಿಕ ಸರ್ಕಾರಿ ಉದ್ಯೋಗಗಳು ಶೇಕಡಾ 88 ರಷ್ಟು ಏಕೆ ಹೆಚ್ಚಾಯಿತು" ಎಂದು ಖರ್ಗೆ ಪ್ರಶ್ನಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com