ಮಹದಾಯಿ ಜಲ ವಿವಾದ: ಕರ್ನಾಟಕ ವಿರುದ್ಧ ಒಟ್ಟಾಗಿ ಕಾನೂನು ಹೋರಾಟ ನಡೆಸಲಿರುವ ಮಹಾರಾಷ್ಟ್ರ, ಗೋವಾ

ನೆರೆಯ ಗೋವಾದೊಂದಿಗೆ ಯಾವುದೇ ವಿವಾದಗಳಿಲ್ಲ ಎಂದು ಹೇಳಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮಹದಾಯಿ ನೀರು ಹಂಚಿಕೆಯಲ್ಲಿ ಕರ್ನಾಟಕದ ವಿರುದ್ಧ ತಮ್ಮ ರಾಜ್ಯ ಮತ್ತು ಗೋವಾ ಸಮಸ್ಯೆಯನ್ನು ಒಟ್ಟಾಗಿ ಎದುರಿಸಲಿದೆ ಎಂದಿದ್ದಾರೆ. 
ಗೋವಾ ಸಿಎಂ ಪ್ರಮೋದ್ ಸಾವಂತ್, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ
ಗೋವಾ ಸಿಎಂ ಪ್ರಮೋದ್ ಸಾವಂತ್, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ
Updated on

ಪಂಜಿಂ: ನೆರೆಯ ಗೋವಾದೊಂದಿಗೆ ಯಾವುದೇ ವಿವಾದಗಳಿಲ್ಲ ಎಂದು ಹೇಳಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮಹದಾಯಿ ನೀರು ಹಂಚಿಕೆಯಲ್ಲಿ ಕರ್ನಾಟಕದ ವಿರುದ್ಧ ತಮ್ಮ ರಾಜ್ಯ ಮತ್ತು ಗೋವಾ ಸಮಸ್ಯೆಯನ್ನು ಒಟ್ಟಾಗಿ ಎದುರಿಸಲಿದೆ ಎಂದಿದ್ದಾರೆ. 

ನಿನ್ನೆ ಮುಂಬೈಯಲ್ಲಿ ನಡೆದ ತಿಲ್ಲಾರಿ ನೀರಾವರಿ ಯೋಜನೆಯ ಅಂತಾರಾಜ್ಯ ನಿಯಂತ್ರಣ ಮಂಡಳಿ ಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಜಲ ಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ಅವರ ಸಮ್ಮುಖದಲ್ಲಿ ಶಿಂಧೆ ಈ ಹೇಳಿಕೆ ನೀಡಿದ್ದಾರೆ. 

ಅಂತಾರಾಜ್ಯ ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮಹಾರಾಷ್ಟ್ರದ ನಿಲುವಿಗೆ ಪ್ರತಿಕ್ರಿಯಿಸಿದ ಶಿಂಧೆ, ಗೋವಾ ಮತ್ತು ಮಹಾರಾಷ್ಟ್ರ ಮಧ್ಯೆ ಯಾವುದೇ ವಿವಾದಗಳಿಲ್ಲ. ನಾವು ಕರ್ನಾಟಕದ ವಿರುದ್ಧ ಒಟ್ಟಾಗಿ ಹೋರಾಡಲಿದ್ದೇವೆ ಎಂದರು. ಅವರ ಮಾತನ್ನು ಸ್ವಾಗತಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ನಾವಿಬ್ಬರೂ ಒಗ್ಗಟ್ಟಾಗಿದ್ದರೆ ಗೋವಾಕ್ಕೆ ಇದರಿಂದ ಲಾಭ ಹೆಚ್ಚು ಎಂದರು. 

ಮಹದಾಯಿ ನದಿ ನೀರು ಹಂಚಿಕೆಯಲ್ಲಿ ಮೂರೂ ರಾಜ್ಯಗಳು ಕಳೆದ ಹಲವು ವರ್ಷಗಳಿಂದ ವಿವಾದದಲ್ಲಿ ತೊಡಗಿದ್ದವು. ಕರ್ನಾಟಕ ಸರ್ಕಾರವು ಒಪ್ಪಂದಗಳನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಯೋಜನೆಗಳನ್ನು ಮುಂದುವರಿಸಲು ಪ್ರಯತ್ನಿಸುತ್ತಿದೆ ಎಂದು ಗೋವಾ ಆಗಾಗ್ಗೆ ಆರೋಪಿಸಿದೆ. ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಗೋವಾ ಮತ್ತು ಕರ್ನಾಟಕ ಎರಡು ದಶಕಗಳಿಂದ ವಿವಾದವನ್ನು ಎದುರಿಸುತ್ತಿವೆ.

ಕಳೆದ ಏಪ್ರಿಲ್‌ನಲ್ಲಿ, ಮಹಾರಾಷ್ಟ್ರ ಸರ್ಕಾರವು ವಿರ್ಡಿ ಅಣೆಕಟ್ಟಿನ ಕೆಲಸ ಪ್ರಾರಂಭಿಸಲು ತನ್ನ ಯಂತ್ರೋಪಕರಣಗಳನ್ನು ಸ್ಥಳಾಂತರಿಸಿತು. ಇದು ಗೋವಾ-ಮಹಾರಾಷ್ಟ್ರ ಗಡಿಯಲ್ಲಿ ನೆಲೆಗೊಂಡಿರುವ ವಿರ್ಡಿಯಲ್ಲಿನ ಕಟ್ಟಿಕಾ ಉಪನದಿಯ ಮೂಲಕ ವಲ್ವಂತಿ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸಲು ಯೋಜಿಸಿದೆ. ಆದರೆ, ಗೋವಾ ಸರ್ಕಾರ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.

ಇದಕ್ಕೂ ಮೊದಲು ಜನವರಿಯಲ್ಲಿ, ಮಹದೇಯಿ ನದಿಯ ಮೇಲಿನ ಕಳಸಾ-ಭಂಡೂರ ಯೋಜನೆಗೆ ಕರ್ನಾಟಕದ ಡಿಪಿಆರ್ ನ್ನು ಕೇಂದ್ರವು ಅನುಮೋದಿಸಿತು.

ಗೋವಾದಲ್ಲಿ ಮಾಂಡೋವಿ ನದಿ ಮತ್ತು ಕರ್ನಾಟಕದ ಮಹದಾಯಿ ಎಂದೂ ಕರೆಯಲ್ಪಡುವ ಗೋವಾದ ಉತ್ತರ ಭಾಗಗಳಲ್ಲಿ ಜೀವನಾಡಿ ಎಂದು ಪರಿಗಣಿಸಲಾಗಿದೆ. ಇದು ಕರ್ನಾಟಕದಲ್ಲಿ ಹುಟ್ಟಿ ಗೋವಾದ ಪಂಜಿಮ್‌ನಲ್ಲಿ ಅರಬ್ಬೀ ಸಮುದ್ರವನ್ನು ಸಂಧಿಸುತ್ತದೆ, ಮಹಾರಾಷ್ಟ್ರದ ಮೂಲಕ ಸ್ವಲ್ಪ ಭಾಗ ಹರಿಯುತ್ತದೆ. 

ಮಹದಾಯಿ ಜಲ ವಿವಾದ: ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಮಹದಾಯಿ ಜಲ ವಿವಾದವನ್ನು 2018 ರಲ್ಲಿ ನ್ಯಾಯಮಂಡಳಿ ಇತ್ಯರ್ಥಪಡಿಸಿತು, ಕರ್ನಾಟಕಕ್ಕೆ 13.42 ಟಿಎಂಸಿ, ಮಹಾರಾಷ್ಟ್ರಕ್ಕೆ 1.33 ಟಿಎಂಸಿ ಮತ್ತು ಗೋವಾಕ್ಕೆ 24 ಟಿಎಂಸಿ ನೀರು ಹಂಚಿಕೆಯಾಗಿದೆ. 2020ರಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. 

ಆದರೆ ತೀರ್ಪನ್ನು ಪ್ರಶ್ನಿಸಿ ಮೂರೂ ರಾಜ್ಯಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದವು. ಗೋವಾ 2019 ಮತ್ತು 2020 ರಲ್ಲಿ ಅನುಕ್ರಮವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜಾ ಅರ್ಜಿ ಮತ್ತು ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದವು. ಕರ್ನಾಟಕ ಸರ್ಕಾರವು ಅಕ್ರಮ ನೀರು ತಿರುವು ಎಂದು ಆರೋಪಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com