2ನೇ ಬಾರಿ ಅಮೆರಿಕ ಕಾಂಗ್ರೆಸ್ ನಲ್ಲಿ ಭಾಷಣ ಮಾಡಲಿರುವ ಭಾರತದ ಮೊದಲ ಪ್ರಧಾನಿ, ನರೇಂದ್ರ ಮೋದಿ

2ನೇ ಬಾರಿ ಅಮೆರಿಕ ಕಾಂಗ್ರೆಸ್ ನಲ್ಲಿ ಭಾಷಣ ಮಾಡಲಿರುವ ಭಾರತದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ನರೇಂದ್ರ ಮೋದಿ ಭಾಜನರಾಗಲಿದ್ದಾರೆ.
ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: 2ನೇ ಬಾರಿ ಅಮೆರಿಕ ಕಾಂಗ್ರೆಸ್ ನಲ್ಲಿ ಭಾಷಣ ಮಾಡಲಿರುವ ಭಾರತದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ನರೇಂದ್ರ ಮೋದಿ ಭಾಜನರಾಗಲಿದ್ದಾರೆ.

ಹೌದು.. ಜೂನ್ 21 ರಿಂದ ಜೂನ್ 24 ರವರೆಗೆ ಅಮೆರಿಕಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತವನ್ನು ನೀಡಲು ಭಾರತೀಯ ಅಮೆರಿಕನ್ನರು ಉತ್ಸುಕತೆಯಿಂದ ತಯಾರಿ ನಡೆಸುತ್ತಿದ್ದಾರೆ. ಅವರ ಭೇಟಿಯ ವೇಳೆ ಸಾವಿರಾರು ವಲಸಿಗ ಭಾರತೀಯರು ವಾಷಿಂಗ್ಟನ್‌ನಲ್ಲಿ ಸೇರಲಿದ್ದಾರೆ. ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರು ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಳ್ಳಲ್ಲಿದ್ದಾರೆ.

ಗುರುವಾರದಂದು ನಡೆಯಲಿರುವ ಅಮೆರಿಕ ಕಾಂಗ್ರೆಸ್‌ನಲ್ಲಿ ಮೋದಿ ಭಾಷಣವು ಇಲ್ಲಿ ಅವರ ಎರಡನೇ ಭಾಷಣವಾಗಿದೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ ಮೂಲಕ ಭಾಷಣ ಮಾಡಲು ಅವರಿಗೆ ಈ ಹಿಂದೆ ಆಹ್ವಾನ ನೀಡಲಾಗಿತ್ತು.

ಇದೇ ವಿಚಾರವಾಗಿ ಮಾತನಾಡಿರುವ ವಿದೇಶಾಂಗ ಸಚಿವ ಜೈ ಶಂಕರ್ ಅವರು, ಈ ಹಿಂದೆ ಯಾವ ಭಾರತೀಯ ಪ್ರಧಾನಿಯೂ ಅಮೆರಿಕ ಕಾಂಗ್ರೆಸ್ ನಲ್ಲಿ 2ನೇ ಬಾರಿ ಭಾಷಣ ಮಾಡಿರಲಿಲ್ಲ. ವಿನ್‌ಸ್ಟನ್ ಚರ್ಚಿಲ್, ನೆಲ್ಸನ್ ಮಂಡೇಲಾ ರಂತಹ ಪ್ರಪಂಚದ ಕೆಲವೇ ಕೆಲವು ಪ್ರಮುಖ ನಾಯಕರು ಇದನ್ನು ಮಾಡಿದ್ದಾರೆ. ಆದ್ದರಿಂದಲೇ ಅದರ ಪ್ರಾಮುಖ್ಯತೆ ದೊಡ್ಡದಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಅಂತೆಯೇ  ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ದಕ್ಷಿಣ ಕೊರಿಯಾದ ಯೂನ್ ಸುಕ್ ಯೋಲ್ ನಂತರ ಅಧ್ಯಕ್ಷ ಬೈಡೆನ್ ಅವರು ಔತಣಕೂಟಕ್ಕೆ ಆಹ್ವಾನಿಸಿದ ಮೂರನೇ ವಿಶ್ವ ನಾಯಕ ಪ್ರಧಾನಿ ಮೋದಿ ಆಗಿದ್ದಾರೆ. ಅಲ್ಲದೆ ಅಮೆರಿಕ ಪ್ರವಾಸ ಮಾಡಿದ ಭಾರತದ ಮೂರನೇ ನಾಯಕ ಎಂಬ ಕೀರ್ತಿಗೂ ಮೋದಿ ಭಾಜನರಾಗಲಿದ್ದು, ಈ ಹಿಂದೆ 1963 ರಲ್ಲಿ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ನವೆಂಬರ್ 2009 ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಮೆರಿಕಕ್ಕೆ ಭೇಟಿ ನೀಡಿದ್ದ ನಾಯಕರಾಗಿದ್ದಾರೆ.
 
ಈ ಭೇಟಿಯೊಂದಿಗೆ, ಪ್ರಧಾನಿ ಮೋದಿ ಅವರು ಎರಡನೇ ಬಾರಿಗೆ ಅಮೆರಿಕ ಕಾಂಗ್ರೆಸ್ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೊದಲ ಭಾರತೀಯ ಪ್ರಧಾನಿ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.  ಇದು ಯುಎಸ್ ಮತ್ತು ಭಾರತದ ನಡುವಿನ ಸಂಬಂಧದ ಐತಿಹಾಸಿಕ ಮಹತ್ವವನ್ನು ನೆನಪಿಸುತ್ತದೆ.

ಪ್ರಧಾನಿ ಮೋದಿ ಅವರ ಏರ್ ಇಂಡಿಯಾ ಒನ್ ಜೂನ್ 21 ರಂದು ನ್ಯೂಯಾರ್ಕ್‌ನಿಂದ ಮಧ್ಯಾಹ್ನ ಬಂದಿಳಿದಾಗ ಭಾರತೀಯ ಅಮೆರಿಕನ್ನರ ಗುಂಪು ಆಂಡ್ರ್ಯೂಸ್ ಏರ್ ಫೋರ್ಸ್ ಬೇಸ್‌ಗೆ ಹೋಗಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com