ಶೃಂಗಸಭೆಯನ್ನು ವರ್ಚ್ಯುಯಲ್ ಆಗಿ ನಡೆಸುವ ಭಾರತದ ನಿರ್ಧಾರಕ್ಕೆ ಎಸ್ ಸಿಒ ಸದಸ್ಯರ ಅಸಮಾಧಾನ

ಎಸ್ ಸಿಒ ಶೃಂಗಸಭೆಯನ್ನು ವರ್ಚ್ಯುಯಲ್ ಫಾರ್ಮೆಟ್ ನಲ್ಲಿ ನಡೆಸುವುದಾಗಿ ಘೋಷಿಸಿರುವ ಭಾರತದ ನಡೆಗೆ ಶಾಂಘೈ ಸಹಕಾರ ಸಂಘ ( ಎಸ್ ಸಿಒ) ಸದಸ್ಯ ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿವೆ. 
ಎಸ್ ಸಿಒ ಸಭೆಯ ಸಂಗ್ರಹ ಚಿತ್ರ
ಎಸ್ ಸಿಒ ಸಭೆಯ ಸಂಗ್ರಹ ಚಿತ್ರ
Updated on

ನವದೆಹಲಿ: ಎಸ್ ಸಿಒ ಶೃಂಗಸಭೆಯನ್ನು ವರ್ಚ್ಯುಯಲ್ ಫಾರ್ಮೆಟ್ ನಲ್ಲಿ ನಡೆಸುವುದಾಗಿ ಘೋಷಿಸಿರುವ ಭಾರತದ ನಡೆಗೆ ಶಾಂಘೈ ಸಹಕಾರ ಸಂಘ ( ಎಸ್ ಸಿಒ) ಸದಸ್ಯ ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿವೆ. 

ನಾವು ನಮ್ಮ ನಾಯಕರನ್ನು ವ್ಯಕ್ತಿಗತವಾಗಿ ಭೇಟಿ ಮಾಡಲು ಎದುರುನೋಡುತ್ತಿದ್ದೆವು. ಡಿಸೆಂಬರ್ 2022 ರಿಂದ ನಾವು ಈ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದ್ದೆವು ಆದರೆ ವರ್ಚ್ಯುಯಲ್ ಆಗಿ ಸಭೆ ನಡೆಸುವುದಾಗಿ ಭಾರತ ಮೇ ತಿಂಗಳಲ್ಲಿ ಘೋಷಿಸಿದಾಗ ನಾವು ನಮ್ಮ ತಯಾರಿಗಳನ್ನು ಸ್ಥಗಿತಗೊಳಿಸಿದೆವು ಎಂದು ಎಸ್ ಸಿಒ ಸದಸ್ಯ ರಾಷ್ಟ್ರದ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.

ಶೃಂಗಸಭೆ ಕೇವಲ ಎಸ್ ಸಿಒ ರಾಷ್ಟ್ರಗಳ ನಾಯಕರನ್ನು ವ್ಯಕ್ತಿಗತವಾಗಿ ಭೇಟಿ ಮಾಡುವುದಕ್ಕೆ ಅವಕಾಶ ಕಲ್ಪಿಸುವುದಷ್ಟೇ ಅಲ್ಲದೇ ಹಲವು ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಭೆಗೂ ವೇದಿಕೆಯಾಗಿರುತ್ತಿತ್ತು ಇದಕ್ಕಾಗಿ ಎಸ್ ಸಿಒ ಸದಸ್ಯ ರಾಷ್ಟ್ರಗಳು ಸಿದ್ಧತೆ ನಡೆಸಿದ್ದವು.

ಸೆಪ್ಟೆಂಬರ್ 2022 ರಲ್ಲಿ ಸಮರ್ಕಂಡ್ ನಲ್ಲಿ ನಡೆದ ಎಸ್ ಸಿಒ ಶೃಂಗಸಭೆ ಮುಕ್ತಾಯಗೊಂಡಾಗ ಎಸ್ ಸಿಒ ಅಧ್ಯಕ್ಷ ಸ್ಥಾನವನ್ನು ಭಾರತಕ್ಕೆ ಉಜ್ಬೇಕಿಸ್ಥಾನ ಹಸ್ತಾಂತರಿಸಿತ್ತು.
 
ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ 134 ಸಭೆಗಳನ್ನು ಎಂದಿನಂತೆ ಭೌತಿಕ ಉಪಸ್ಥಿತಿಯಲ್ಲೇ ನಡೆಸಿರುವ ಭಾರತ, ಜು.14 ರಂದು ನಡೆಯುವ ಶೃಂಗಸಭೆಯನ್ನು ವರ್ಚ್ಯುಯಲ್ ಆಗಿ ನಡೆಸಲಾಗುವುದು ಎಂದು ಮೇ.31 ರಂದು ವಿದೇಶಾಂಗ ಸಚಿವಾಲಯದ ಮೂಲಕ ಘೋಷಿಸಿತ್ತು.

ಭಾರತ ಜಿ-20 ಅಧ್ಯಕ್ಷತೆ ಹಾಗೂ ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದೆ. ಪರಿಣಾಮವಾಗಿ ಅಧ್ಯಕ್ಷ ಸ್ಥಾನದ ಮಹತ್ವ ಕೈತಪ್ಪಿದೆ. ಗೋವಾದಲ್ಲಿ ನಡೆದ ಎಸ್‌ಸಿಒ ವಿದೇಶಾಂಗ ಮಂತ್ರಿಗಳ ಸಭೆಯ ಸಮಯದಲ್ಲಿ ಮಾತ್ರ ಎಸ್‌ಸಿಒ ಸಂಕ್ಷಿಪ್ತವಾಗಿ ಪ್ರಾಮುಖ್ಯತೆಗೆ ಬಂದಿತ್ತು,’’ ಎಂದು ಎಸ್‌ಸಿಒ ಸದಸ್ಯರೊಬ್ಬರು ವಿಷಾದ ವ್ಯಕ್ತಪಡಿಸಿದ್ದಾರೆ. ಭೌಗೋಳಿಕ ವ್ಯಾಪ್ತಿ ಮತ್ತು ಜನಸಂಖ್ಯೆಯನ್ನು ಪರಿಗಣಿಸುವುದಾದರೆ SCO ಸಂಘ ಅತ್ಯಲ್ಪವಲ್ಲ. "ಯುರೇಷಿಯಾ ಪ್ರದೇಶದ ಸರಿಸುಮಾರು 60 ಪ್ರತಿಶತದಷ್ಟು ಮತ್ತು ವಿಶ್ವ ಜನಸಂಖ್ಯೆಯ 40 ಪ್ರತಿಶತದಷ್ಟು ಜಾಗತಿಕ GDP ಯ 20 ಪ್ರತಿಶತದಷ್ಟು ಒಟ್ಟು GDP ಯನ್ನು ಒಳಗೊಂಡಿರುವ ದೃಷ್ಟಿಯಿಂದ ಇದು ವಿಶ್ವದ ಅತಿದೊಡ್ಡ ಪ್ರಾದೇಶಿಕ ಸಂಸ್ಥೆಯಾಗಿದೆ. ಆದ್ದರಿಂದ ಇದು ಹೆಚ್ಚು ಗೋಚರಿಸಲಿ ಎಂಬ ನಿರೀಕ್ಷೆ ಸಹಜವಾಗಿದೆ ಎಂದು SCO ಮತ್ತೊಬ್ಬ ಸದಸ್ಯರು ಹೇಳಿದ್ದಾರೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com