ಶ್ರೀಲಂಕಾ ನೌಕಾಪಡೆಯಿಂದ ತಮಿಳುನಾಡಿನ 22 ಮೀನುಗಾರರ ಬಂಧನ

ಶ್ರೀಲಂಕಾ ನೌಕಾಪಡೆಯು ಜಾಫ್ನಾದಲ್ಲಿನ ಡೆಲ್ಫ್ಟ್ ದ್ವೀಪದ ವಾಯುವ್ಯಕ್ಕೆ ಪಾಲ್ಕ್ ಬೇ ಸಮುದ್ರದಲ್ಲಿ ಬುಧವಾರ ರಾತ್ರಿ  ತಮಿಳುನಾಡಿನ 22 ಮೀನುಗಾರರನ್ನು ಬಂಧಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಮನಾಥಪುರಂ: ಶ್ರೀಲಂಕಾ ನೌಕಾಪಡೆಯು ಜಾಫ್ನಾದಲ್ಲಿನ ಡೆಲ್ಫ್ಟ್ ದ್ವೀಪದ ವಾಯುವ್ಯಕ್ಕೆ ಪಾಲ್ಕ್ ಬೇ ಸಮುದ್ರದಲ್ಲಿ ಬುಧವಾರ ರಾತ್ರಿ  ತಮಿಳುನಾಡಿನ 22 ಮೀನುಗಾರರನ್ನು ಬಂಧಿಸಿದೆ.

ಲಂಕಾಕ್ಕೆ ಸೇರಿರುವ ಪ್ರದೇಶದಲ್ಲಿ ಭೇಟಿಯಾಡುತ್ತಿದ್ದ ಭಾರತೀಯ ಮೀನುಗಾರರನ್ನು ಓಡಿಸಲು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ 22 ಭಾರತೀಯ ಮೀನುಗಾರರೊಂದಿಗೆ  4 ಭಾರತೀಯ ಟ್ರಾಲರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿದೆ.

ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂನಲ್ಲಿರುವ ಮೀನುಗಾರರ ಸಂಘದ ಪ್ರಕಾರ ಬಂಧಿತ ಮೀನುಗಾರರು ನಾಗಪಟ್ಟಣಂ, ಪುದುಕ್ಕೊಟ್ಟೈ ಮತ್ತು ರಾಮನಾಥಪುರಂ ಜಿಲ್ಲೆಗೆ ಸೇರಿದವರಾಗಿದ್ದಾರೆ.  

ವಶಪಡಿಸಿಕೊಂಡ ಟ್ರಾಲರ್‌ಗಳನ್ನು ಮತ್ತು 22 ಭಾರತೀಯ ಮೀನುಗಾರರನ್ನು ಕಂಕಸಂತುರೈ ಬಂದರಿಗೆ ಕರೆ ತರಲಾಗಿದ್ದು,  ಮುಂದಿನ ಕಾನೂನು ಪ್ರಕ್ರಿಯೆಗಳಿಗಾಗಿ ಮೈಲಾಡಿ ಮೀನುಗಾರಿಕೆ ನಿರೀಕ್ಷಕರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಲಾಗಿದೆ.  ಸ್ಥಳೀಯ ಮೀನುಗಾರರು ಬಂಧನಕ್ಕೆ ತಮಿಳುನಾಡು ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಎನ್ ಜೆ ಬೋಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com