ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಮುಕ್ತಗೊಳಿಸಿ; ನನಗೆ ಪಕ್ಷದಲ್ಲಿ ಹೊಸ ಹುದ್ದೆ ನೀಡಿ: ಅಜಿತ್ ಪವಾರ್

ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯಿಂದ ತಮ್ಮನ್ನು ಮುಕ್ತಗೊಳಿಸಬೇಕು ಮತ್ತು ಪಕ್ಷ ಸಂಘಟನೆಯಲ್ಲಿ ಯಾವುದಾದರೂ ಪಾತ್ರವನ್ನು ನೀಡಬೇಕು ಎಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಜಿತ್ ಪವಾರ್ ಬುಧವಾರ ಪಕ್ಷದ ನಾಯಕತ್ವಕ್ಕೆ ಮನವಿ ಮಾಡಿದ್ದಾರೆ.
ಅಜಿತ್ ಪವಾರ್
ಅಜಿತ್ ಪವಾರ್

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯಿಂದ ತಮ್ಮನ್ನು ಮುಕ್ತಗೊಳಿಸಬೇಕು ಮತ್ತು ಪಕ್ಷ ಸಂಘಟನೆಯಲ್ಲಿ ಯಾವುದಾದರೂ ಪಾತ್ರವನ್ನು ನೀಡಬೇಕು ಎಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಜಿತ್ ಪವಾರ್ ಬುಧವಾರ ಪಕ್ಷದ ನಾಯಕತ್ವಕ್ಕೆ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದ ಮುಂಬೈನಲ್ಲಿ ನಡೆದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ 24ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ತಮ್ಮ ಚಿಕ್ಕಪ್ಪ ಶರದ್ ಪವಾರ್ ಮತ್ತು ಇತರ ಹಿರಿಯ ನಾಯಕರು ಭಾಗವಹಿಸಿದ್ದಾಗ ಅವರು ಈ ಬೇಡಿಕೆಯನ್ನು ಮುಂದಿದ್ದಾರೆ.

ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಲು ನನಗೆ ಆಸಕ್ತಿಯಿಲ್ಲ, ಆದರೆ ಪಕ್ಷದ ಶಾಸಕರ ಬೇಡಿಕೆಯ ಮೇರೆಗೆ ಹುದ್ದೆ ಒಪ್ಪಿಕೊಂಡಿದ್ದೇನೆ. ಪಕ್ಷ ಸಂಘಟನೆಯಲ್ಲಿ ಯಾವುದೇ ಹುದ್ದೆ ನೀಡಿದರೂ ನನಗೆ ವಹಿಸಿಕೊಡಿ, ನನಗೆ ವಹಿಸಿರುವ ಜವಾಬ್ದಾರಿಗೆ ಸಂಪೂರ್ಣ ನ್ಯಾಯ ಒದಗಿಸುತ್ತೇನೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.

ತಮ್ಮ ಬೇಡಿಕೆಯ ಬಗ್ಗೆ ನಿರ್ಧರಿಸುವುದು ಎನ್‌ಸಿಪಿ ನಾಯಕತ್ವಕ್ಕೆ ಬಿಟ್ಟದ್ದು ಎಂದು ಈ ವೇಳೆ ಸೇರಿಸಿದ್ದಾರೆ. ಶಿವಸೇನೆಯ ಬಂಡಾಯದಿಂದಾಗಿ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಯಾಗಿದ್ದ ಎಂವಿಎ ಸರ್ಕಾರ ಪತನಗೊಂಡ ನಂತರ ಕಳೆದ ಜುಲೈನಲ್ಲಿ ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಇತ್ತೀಚೆಗೆ ತಮ್ಮ ಪುತ್ರಿ ಮತ್ತು ಸಂಸದೆ ಸುಪ್ರಿಯಾ ಸುಳೆ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಮಹಾರಾಷ್ಟ್ರದ ಜವಾಬ್ದಾರಿಯನ್ನು ವಹಿಸಿದ್ದರು. ಪ್ರಫುಲ್ ಪಟೇಲ್ ಇತರ ರಾಜ್ಯಗಳಿಗೆ ಮತ್ತೊಬ್ಬ ಕಾರ್ಯಾಧ್ಯಕ್ಷರಾಗಿದ್ದಾರೆ.

ಎನ್ ಸಿಪಿ  ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಮತ್ತು ಅಜಿತ್ ಪವಾರ್ ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಿಲ್ಲ, ಇಬ್ಬರ ನಡುವಿನ ಸೀತಲ ಸಮರ ಭುಗಿಲೆದ್ದಿದೆ, ಎನ್‌ಸಿಪಿಯನ್ನು ಎರಡು ಗುಂಪುಗಳಾಗಿದ್ದು ಜಯಂತ್ ಪಾಟೀಲ್ ನೇತೃತ್ವದ  ತಂಡ ಮತ್ತು ಇನ್ನೊಂದು ಗುಂಪು ಪವಾರ್ ಜೂನಿಯರ್ ನೇತೃತ್ವದಲ್ಲಿದೆ ಎಂದು ಹೇಳಲಾಗಿದೆ.

ಪಾಟೀಲ್ ಅವರು ಕಳೆದ ಐದು ವರ್ಷಗಳಿಂದ ಎನ್‌ಸಿಪಿ ಅಧ್ಯಕ್ಷರಾಗಿದ್ದಾರೆ. ಪಕ್ಷದ ನಿಯಮಗಳ ಪ್ರಕಾರ, ಪ್ರತಿ ಮೂರು ವರ್ಷಗಳಿಗೊಮ್ಮೆ ಹೊಸ ಅಧ್ಯಕ್ಷರನ್ನು ನೇಮಿಸಲಾಗುತ್ತದೆ. ಆದರೆ ಪಾಟೀಲ್ ಅವರು ಪಕ್ಷದಲ್ಲಿ ತಮ್ಮ ಹುದ್ದೆಯಲ್ಲಿದ್ದಾರೆ. ಅಜಿತ್ ಪವಾರ್ ಈಗ ಪಕ್ಷದ ರಾಜ್ದಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದಾಗ್ಯೂ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಇನ್ನೂ ಈ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com