'ಜನ ಗಣ ಮನ' ಹಾಡಿ ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ 'ಗಾಯಕಿ ಮೇರಿ ಮಿಲ್ಬೆನ್'

ಅಮೆರಿಕ ಪ್ರವಾಸದ ಸಮಾರೋಪ ಕಾರ್ಯಕ್ರಮದಲ್ಲಿ ವಿದೇಶಿ ಗಾಯಕಿಯೊಬ್ಬರು ಭಾರತದ ರಾಷ್ಟ್ರಗೀತೆ ಜನಗಣ ಮನ ಹಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿದ ಘಟನೆ ನಡೆದಿದೆ.
ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ 'ಗಾಯಕಿ ಮೇರಿ ಮಿಲ್ಬೆನ್'
ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ 'ಗಾಯಕಿ ಮೇರಿ ಮಿಲ್ಬೆನ್'

ನವದೆಹಲಿ: ಅಮೆರಿಕ ಪ್ರವಾಸದ ಸಮಾರೋಪ ಕಾರ್ಯಕ್ರಮದಲ್ಲಿ ವಿದೇಶಿ ಗಾಯಕಿಯೊಬ್ಬರು ಭಾರತದ ರಾಷ್ಟ್ರಗೀತೆ ಜನಗಣ ಮನ ಹಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿದ ಘಟನೆ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದ್ದು, ಮೋದಿ ಅವರು ತಮ್ಮ ಅಮೇರಿಕಾ ಪ್ರವಾಸದ ವೇಳೆ ರೊನಾಲ್ಡ್ ರೇಗನ್ ಸೆಂಟರ್‌ನಲ್ಲಿ ಎನ್‌ಆರ್‌ಐ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.

ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಮೆರಿಕದ ಖ್ಯಾತ ಹಾಲಿವುಡ್ ನಟಿ ಮತ್ತು ಗಾಯಕಿ 38 ವರ್ಷದ ಮೇರಿ ಮಿಲ್‌ಬೆನ್ (Ms Millben) ಅವರು ಭಾರತೀಯ ರಾಷ್ಟ್ರಗೀತೆ 'ಜನ ಗಣ ಮನ' ಗೀತೆಯನ್ನು ಮನಮೋಹಕವಾಗಿ ಹಾಡಿದರು. ಈ ವೇಳೆ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಅವರು ಭಾರತದ ರಾಷ್ಟ್ರಗೀತೆಯನ್ನು ಹಾಡಿದ ನಂತರ ಪ್ರಧಾನಿ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು.

ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಇದೇ ಕಾರ್ಯಕ್ರಮದಲ್ಲಿ ಮಿಲ್ಬೆನ್ ಓಂ ಜೈ ಜಗದೀಶ್ ಹರೆ ಹಾಡನ್ನೂ ಕೂಡ ಹಾಡಿದ್ದು, ಮೇರಿ ಮಿಲ್ಬೆನ್ ಅವರ ಅದ್ಭುತ ಪ್ರದರ್ಶನವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ನಂತರ ಮೇರಿ ಮಿಲ್ಬೆನ್ ಬಂದು ಪ್ರಧಾನಿ ಮೋದಿಯವರ ಪಾದ ಮುಟ್ಟಿ ನಮಸ್ಕರಿಸಿದರು. ಮೇರಿ ಮಿಲ್ಬೆನ್ ಅವರ ಪಾದಗಳನ್ನು ಮುಟ್ಟುತ್ತಿರುವುದನ್ನು ನೋಡಿದ ಪ್ರಧಾನಿ ಮೋದಿ ಅವರನ್ನು ತಡೆದು ಹಸ್ತಲಾಘವ ಮಾಡಿದರು.

ಇದಾದ ಬಳಿಕ ಪ್ರಧಾನಿ ಮೋದಿ ಅವರು ಭಾರತೀಯ ಶೈಲಿಯಲ್ಲಿ ಮೇರಿ ಮಿಲ್ಬೆನ್ ಅವರಿಗೆ ಕೈಮುಗಿದು ನಮಸ್ಕರಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮೇರಿ ಮಿಲ್ಬೆನ್ ಕೂಡ ಕೈಮುಗಿದು ಪ್ರಧಾನಿಯ ಶುಭಾಶಯವನ್ನು ಸ್ವೀಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com