ಅಸ್ಸಾಂನಲ್ಲಿ ಪ್ರವಾಹದ ಹಿನ್ನೆಲೆ; ಬಿಹಾರದ ಬಾಗಮತಿ ನದಿಯಲ್ಲಿ ನೀರಿನ ಮಟ್ಟ ದಿಢೀರ್ ಏರಿಕೆ, ಕೊಚ್ಚಿಹೋದ ಸೇತುವೆಗಳು

ಅಸ್ಸಾಂನಲ್ಲಿ ಪ್ರವಾಹದ ನಂತರ, ಭಾನುವಾರ ಬಿಹಾರದ ಬಾಗಮತಿ ನದಿಯ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದೆ. ಬಾಗಮತಿ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿದೆ. ಆದರೆ, ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಔರಾಯ್ ವೃತ್ತಾಧಿಕಾರಿ ರಮಾನಂದ್ ಸಾಗರ್ ತಿಳಿಸಿದ್ದಾರೆ.
ಮುರಿದುಬಿದ್ದ ಭಾಗಮತಿ ನದಿ ಮೇಲಿನ ಸೇತುವೆ
ಮುರಿದುಬಿದ್ದ ಭಾಗಮತಿ ನದಿ ಮೇಲಿನ ಸೇತುವೆ

ಮುಜಾಫರ್‌ನಗರ: ಅಸ್ಸಾಂನಲ್ಲಿ ಪ್ರವಾಹದ ನಂತರ, ಭಾನುವಾರ ಬಿಹಾರದ ಬಾಗಮತಿ ನದಿಯ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದೆ.

ಬಾಗಮತಿ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿದೆ. ಆದರೆ, ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಔರಾಯ್ ವೃತ್ತಾಧಿಕಾರಿ ರಮಾನಂದ್ ಸಾಗರ್ ತಿಳಿಸಿದ್ದಾರೆ.

ಬಿಸಿಲಿನ ತಾಪದ ನಡುವೆ ಬಿಹಾರದ ಮುಜಾಫರ್‌ಪುರದಲ್ಲಿ ಪ್ರವಾಹ ಉಂಟಾಗಿದೆ. ಪಿಪಾ ಸೇತುವೆಯ ಎರಡೂ ಬದಿಗಳಲ್ಲಿ ನೀರು ತುಂಬಿಕೊಂಡಿದೆ. ಅನೇಕ 'ಚಚಾರಿ' ಸೇತುವೆಗಳು ಕೊಚ್ಚಿಹೋಗಿವೆ. ಔರಾಯ್‌ ಮತ್ತು ಕತ್ರಾದಲ್ಲಿ ಪ್ರವಾಹದ ನೀರು ನಿಧಾನವಾಗಿ ಹರಡಲಾರಂಭಿಸಿದೆ.

ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಔರಾಯ್‌ನಲ್ಲಿರುವ ಮಧುಬನ್ ಪ್ರತಾಪ್‌ನ ಚಚಾರಿ ಸೇತುವೆ ಮತ್ತು ಕತ್ರಾದ ಹರ್ಪುರ್ ಘಾಟ್ ಸಂಪೂರ್ಣವಾಗಿ ನಾಶವಾಗಿದೆ.

ಕೊಚ್ಚಿಹೋಗಿರುವ ಸೇತುವೆಗಳಿಂದಾಗಿ ಜನರು ದಿನಬಳಕೆಯ ವಸ್ತುಗಳನ್ನು ಪಡೆಯಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ದಿನಬಳಕೆಯ ವಸ್ತುಗಳಿಗಾಗಿ ತಮ್ಮ ಪ್ರಾಣವನ್ನು ಬಿಗಿಹಿಡಿದುಕೊಂಡು ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾರೆ.

ಪಿಪಾ ಸೇತುವೆಗಳ ಎರಡೂ ಬದಿಗಳಲ್ಲಿ ಪ್ರವಾಹದ ನೀರು ಹೆಚ್ಚಿದೆ. ಪಿಪಾ ಸೇತುವೆಯ ಇಕ್ಕೆಲಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಿಂತು ದುರಸ್ತಿಗಾಗಿ ಕಾಯುತ್ತಿದ್ದಾರೆ. ಆದರೆ, ಬಾಗಮತಿ ನದಿಯ ನೀರಿನ ಮಟ್ಟದಲ್ಲಿ ನಿರಂತರ ಏರಿಕೆಯಿಂದಾಗಿ ಪಿಪಾ ಸೇತುವೆ ದುರಸ್ತಿ ಮಾಡಲು ಸಾಧ್ಯವಾಗಲಿಲ್ಲ.

ಪ್ರತಿ ವರ್ಷವೂ ಪ್ರವಾಹದ ಭೀಕರತೆಯನ್ನು ಎದುರಿಸಬೇಕಾಗಿದೆ. ತಡರಾತ್ರಿಯಿಂದ ಬಾಗಮತಿ ನದಿಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಮತ್ತು ಇದರಿಂದಾಗಿ ಪಿಪಾ ಸೇತುವೆಯ ಎರಡೂ ಬದಿಗಳಲ್ಲಿ ನೀರು ತುಂಬಿದೆ ಎಂದು ರಾಜೇಶ್ ಕುಮಾರ್ ಹೇಳಿದರು.

ಔರಾಯ್ ವಲಯಾರಣ್ಯಾಧಿಕಾರಿ ರಮಾನಂದ್ ಸಾಗರ್ ಮಾತನಾಡಿ, ಪ್ರವಾಹ ಬರುವ ಮುನ್ನವೇ ಸಿದ್ಧತೆ ನಡೆಸಲಾಗಿತ್ತು. ಆದರೆ, ಬಾಗಮತಿ ನದಿಯ ಮೇಲಿನ ಹೊಳೆಯಲ್ಲಿ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ.ಇದರಿಂದಾಗಿ ಚಾಚಾರಿ ಸೇತುವೆಗಳು ಕುಸಿದಿವೆ. ನಾವು ದೋಣಿಗಳ ವ್ಯವಸ್ಥೆ ಮಾಡುತ್ತಿದ್ದೇವೆ. ಇದರಿಂದ ಜನರು ಅಲ್ಲಿಗೆ ಹೋಗುವುದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.

ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿಯು ಸ್ವಲ್ಪಮಟ್ಟಿಗೆ ಸುಧಾರಿಸಿದೆ. ಆದರೆ 15 ಜಿಲ್ಲೆಗಳಲ್ಲಿ ಸುಮಾರು 4.01 ಲಕ್ಷ ಜನರು ಇನ್ನೂ ಪ್ರವಾಹದಿಂದಾಗಿ ತೊಂದರೆಗೊಳಗಾಗಿದ್ದಾರೆ ಎಂದು ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ತಿಳಿಸಿದೆ.

ಎಎಸ್‌ಡಿಎಂಎದ ಪ್ರವಾಹ ವರದಿಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಪ್ರವಾಹದ ನೀರಿನಲ್ಲಿ ಮುಳುಗಿ ನಲಾಬ್ರಿ ಜಿಲ್ಲೆಯಲ್ಲಿ ಇನ್ನೂ ಒಬ್ಬರು ಸಾವಿಗೀಡಾಗಿದ್ದಾರೆ. ಈಮೂಲಕ ಈವರೆಗೆ ಸಾವಿಗೀಡಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com