ಹಿಂಡಿನಿಂದ ಬೇರ್ಪಟ್ಟ 2 ವಾರಗಳಲ್ಲಿ ಆನೆ ಮರಿ ಸಾವು!

ತಾಯಿ ಆನೆ ಹಾಗೂ ಆನೆ ಹಿಂಡಿನಿಂದ ಬೇರ್ಪಟ್ಟ 2 ವಾರಗಳಲ್ಲಿ ಆನೆ ಮರಿ ಸಾವನ್ನಪ್ಪಿರುವ ಘಟನೆ ಕೇರಳದ ಅಟ್ಟಪಾಡಿ ಅರಣ್ಯ ಶ್ರೇಣಿಯಲ್ಲಿ  ವರದಿಯಾಗಿದೆ.
ಆನೆ ಮರಿ (ಸಂಗ್ರಹ ಚಿತ್ರ)
ಆನೆ ಮರಿ (ಸಂಗ್ರಹ ಚಿತ್ರ)
Updated on

ಕೇರಳ: ತಾಯಿ ಆನೆ ಹಾಗೂ ಆನೆ ಹಿಂಡಿನಿಂದ ಬೇರ್ಪಟ್ಟ 2 ವಾರಗಳಲ್ಲಿ ಆನೆ ಮರಿ ಸಾವನ್ನಪ್ಪಿರುವ ಘಟನೆ ಕೇರಳದ ಅಟ್ಟಪಾಡಿ ಅರಣ್ಯ ಶ್ರೇಣಿಯಲ್ಲಿ  ವರದಿಯಾಗಿದೆ.

1.6 ವರ್ಷದ ಆನೆ ಮರಿ ಮೃತಪಟ್ಟಿದ್ದು, ಇದಕ್ಕೆ ಸೂಕ್ತ ಕಾರಣ ಏನೆಂದು ಈ ವರೆಗೂ ತಿಳಿದುಬಂದಿಲ್ಲ. ಆನೆ ಮರಿ ಸಾವನ್ನಪ್ಪುವುದಕ್ಕೆ ಕಾರಣ ಏನೆಂದು ತಿಳಿಯುವುದಕ್ಕಾಗಿ ಮರಣೋತ್ತರ ಪರೀಕ್ಷೆ ಮಾಡಬೇಕಾಗುತ್ತದೆ ಎಂದು ಅರಣ್ಯ ಅಧಿಕಾರಿ ಹೇಳಿದ್ದಾರೆ. 

ಕಳೆದ 2 ವಾರಗಳಿಂದ ಆನೆ ಮರಿಯ ಆರೈಕೆ ಮಾಡುತ್ತಿದ್ದ ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ, ಸೋಂಕಿನಿಂದ ಬಳಲುತ್ತಿದ್ದುದ್ದೇ ಇದಕ್ಕೆ ಕಾರಣ ಇರಬಹುದು ಎಂದು ಹೇಳಿದ್ದಾರೆ.

ಜೂ.26 ರಂದು ಆನೆ ಮರಿ ಆರೋಗ್ಯಕರವಾಗಿಯೇ ಇತ್ತು. ಆದರೆ ಏಕಾ ಏಕಿ ದುರ್ಬಲಗೊಂಡ ಪರಿಣಾಮ ಚಿಕಿತ್ಸೆ ನೀಡಿದ್ದೆವು. ಆ ನಂತರವೂ ಸ್ವಲ್ಪ ಚೇತರಿಸಿಕೊಂಡಿತ್ತು. ಆದರೆ ಮಂಗಳವಾರ ಮಧ್ಯಾಹ್ನ ಮತ್ತೆ ನಿತ್ರಾಣಗೊಂಡು ಸಾವನ್ನಪ್ಪಿತು ಎಂದು ಹೇಳಿದ್ದಾರೆ. "ಇದು ಬಹುಶಃ ಹುಟ್ಟಿನಿಂದಲೇ ಸಮಸ್ಯೆಗಳನ್ನು ಹೊಂದಿತ್ತು, ಇದು ಅದರ ಹಿಂಡಿನಿಂದ ಕೈಬಿಡಲ್ಪಟ್ಟಿದ್ದಕ್ಕೆ ಕಾರಣವಾಗಿರಬಹುದು" ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com