ಮುಂಬೈ: ಸಿಬ್ಬಂದಿಗಳ ನೇಮಕಾತಿಯಲ್ಲಿ ಲಂಚ ಹಗರಣದಲ್ಲಿ ಟಾಟಾ ಕನ್ಸಲ್ಟೆನ್ಸಿ ಸೇವೆಗಳು ತನ್ನ 6 ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಗುತ್ತಿಗೆ ನೌಕರರನ್ನು ನೇಮಕಾತಿ ಮಾಡಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಲಂಚ ಪಡೆದಿದ್ದಕ್ಕಾಗಿ 6 ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಟಾಟಾ ಸನ್ಸ್ ಅಧ್ಯಕ್ಷರಾದ ಎನ್ ಚಂದ್ರಶೇಖರನ್ ಹೇಳಿದ್ದಾರೆ.
ಅತಿ ದೊಡ್ಡ ಐಟಿ ಎಕ್ಸ್ ಪೋರ್ಟರ್ ಸಂಸ್ಥೆ ತನ್ನ ಇನ್ನೂ 3 ಉದ್ಯೋಗಿಗಳ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಟಿಸಿಎಸ್ ವಾರ್ಷಿಕ ಸಭೆಯಲ್ಲಿ ತಿಳಿಸಿದೆ.
ನಾವು 6 ಉದ್ಯೋಗಿಗಳನ್ನು ಹಾಗೂ 6 ಸಂಸ್ಥೆಗಳನ್ನು ನಿಷೇಧಿಸಲಾಗಿದೆ ಎಂದು ಷೇರು ಹೋಲ್ಡರ್ ಗಳ ಪ್ರಶ್ನೆಗಳಿಗೆ ಅಧ್ಯಕ್ಷರು ಪ್ರತಿಕ್ರಿಯಿಸಿದ್ದಾರೆ.
ಕಂಪನಿಯು ಎರಡು ಪ್ರತ್ಯೇಕ ದೂರುಗಳನ್ನು ಸ್ವೀಕರಿಸಿದೆ - ಒಂದು ಯುಎಸ್‌ನಲ್ಲಿ ವ್ಯಾಪಾರ ಸಹವರ್ತಿಗಳು ಅಥವಾ ಗುತ್ತಿಗೆ ಕಾರ್ಮಿಕರ ನೇಮಕಾತಿಗೆ ಸಂಬಂಧಿಸಿದೆ, ಮತ್ತೊಂದು ಭಾರತದಲ್ಲಿ ಫೆಬ್ರವರಿ ಅಂತ್ಯ ಮತ್ತು ಮಾರ್ಚ್‌ನಲ್ಲಿ ನಲ್ಲಿ ವರದಿಯಾಗಿದ್ದು, ಆರೋಪಗಳನ್ನು ತನಿಖೆ ಮಾಡಿದೆ ಎಂದು ಚಂದ್ರಶೇಖರನ್ ಮಾಹಿತಿ ನೀಡಿದ್ದಾರೆ.
ಈ ಉದ್ಯೋಗಿಗಳು ಪಡೆದ ನೆರವು ಅಥವಾ ಲಾಭಗಳ ಮೊತ್ತ ಪ್ರಮಾಣವನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಉದ್ಯೋಗಿಗಳು ತಾವೇ ನಿರ್ದಿಷ್ಟ ಸಂಸ್ಥೆಗಳಿಗೆ ನೆರವು ನೀಡಿರುವ ರೀತಿಯಲ್ಲಿ ವರ್ತಿಸುತ್ತಿದ್ದರು ಎಂದು ಚಂದ್ರಶೇಖರನ್ ಹೇಳಿದ್ದಾರೆ.
"ಕಂಪನಿಯು ಸಂಪೂರ್ಣ ಬಿಎ (ಬಿಸಿನೆಸ್ ಅಸೋಸಿಯೇಟ್) ಪೂರೈಕೆದಾರ ನಿರ್ವಹಣಾ ಪ್ರಕ್ರಿಯೆಯನ್ನು ಪರಿಶೀಲಿಸುತ್ತದೆ ಮತ್ತು ದುರ್ಬಲತೆಗಳು ಏನೆಂದು ನೋಡುತ್ತದೆ ಮತ್ತು ನಾವು ಅಂತಹ ಘಟನೆಗಳು ಮತ್ತೆ ನಡೆಯುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತೇವೆ ಎಂದು ಚಂದ್ರಶೇಖರನ್ ತಿಳಿಸಿದ್ದಾರೆ.
Advertisement