ಬಿಜೆಪಿ ಅಧಿಕೃತ ಟ್ವಿಟರ್ ನಲ್ಲಿ 2 ಕೋಟಿಗೂ ಅಧಿಕ ಫಾಲೋವರ್ಸ್!

ಬಿಜೆಪಿಯ ಅಧಿಕೃತ ರಾಷ್ಟ್ರೀಯ ಟ್ವಿಟರ್ ಹ್ಯಾಂಡಲ್ 2 ಕೋಟಿಗೂ ಅಧಿಕ ಫಾಲೋವರ್ಸ್ ಪಡೆದಿದೆ ಎಂದು ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಶನಿವಾರ ಟ್ವೀಟ್ ಮಾಡಿದ್ದಾರೆ. 
ಬಿಜೆಪಿ ಟ್ವಿಟರ್
ಬಿಜೆಪಿ ಟ್ವಿಟರ್

ನವದೆಹಲಿ: ಬಿಜೆಪಿಯ ಅಧಿಕೃತ ರಾಷ್ಟ್ರೀಯ ಟ್ವಿಟರ್ ಹ್ಯಾಂಡಲ್ 2 ಕೋಟಿಗೂ ಅಧಿಕ ಫಾಲೋವರ್ಸ್ ಪಡೆದಿದೆ ಎಂದು ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಶನಿವಾರ ಟ್ವೀಟ್ ಮಾಡಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿಯವರ ವಿವಿಧ ಕಾರ್ಯಕ್ರಮಗಳ ಫೋಟೋಗಳನ್ನು ವಿಡಿಯೋ ರೂಪದಲ್ಲಿ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಬಿಜೆಪಿ,  ಈ ಮೂಲಕ ನಾವು ಹೊಸ ಅಧ್ಯಾಯ ಬರೆಯುತ್ತಿದ್ದೇವೆ, ಇದೊಂದು ಮೈಲಿಗಲ್ಲು, ಏಕತೆ ಮತ್ತು ಸೌಹಾರ್ದತೆ ಮತ್ತು ನಮ್ಮ ಶಕ್ತಿಯನ್ನು ತೋರಿಸುತ್ತದೆ ಎಂದಿದೆ. 

'ಇನ್ನೊಂದು ಅದ್ಬುತ ಸಾಧನೆ, ಬಿಜೆಪಿ ಫಾಲೋವರ್ಸ್ ಗಳ ಸಂಖ್ಯೆ ಇದೀಗ  20 ಮಿಲಿಯನ್ ಮುಟ್ಟಿದೆ ಎಂದು ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ. ವಿಶ್ವದಲ್ಲಿಯೇ ಅತಿ ಹೆಚ್ಚು ಫಾಲೋವರ್ಸ್  ಹೊಂದಿದ್ದ ರಾಜಕೀಯ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿರುವುದಕ್ಕೆ ಅವರು ಧನ್ಯವಾದ ಸಲ್ಲಿಸಿದ್ದಾರೆ.

ಬಿಜೆಪಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಮೂರು ಅಧಿಕೃತ ಟ್ವಿಟರ್ ಖಾತೆಗಳನ್ನು ಮಾತ್ರ ಫಾಲೋ ಮಾಡುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com