ದೆಹಲಿಯ ಮುಂಡ್ಕಾ ಬಳಿ ಬಡಿದಾಟ: ಚೂರಿ ಇರಿತಕ್ಕೆ 2 ಬಲಿ, 5 ಮಂದಿಗೆ ಗಾಯ

ದೆಹಲಿಯ ಮುಂಡ್ಕಾದಲ್ಲಿ ನಡೆದ ಬಡಿದಾಟದಲ್ಲಿ ಚೂರಿ ಇರಿತಕ್ಕೆ 2 ಬಲಿಯಾಗಿದ್ದು 5 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ದೆಹಲಿಯ ಮುಂಡ್ಕಾದಲ್ಲಿ ನಡೆದ ಬಡಿದಾಟದಲ್ಲಿ ಚೂರಿ ಇರಿತಕ್ಕೆ 2 ಬಲಿಯಾಗಿದ್ದು 5 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ದೆಹಲಿ ಪೊಲೀಸರಿಗೆ ರಸ್ತೆಯಲ್ಲಿ ನಡೆದ ಬಡಿದಾಟದ ಬಗ್ಗೆ ಕರೆ ಬಂದಿತ್ತು.  ಗಲಿ ನಂ. 14 ರ ನಿವಾಸಿಗಳಾದ ಸೋನು ಹಾಗೂ ಅಭಿಷೇಕ್ ನಡುವೆ ಬಡಿದಾಟ ಪ್ರಾರಂಭವಾಗಿದೆ.  ಅಭಿಷೇಕ್ ಹಾಗೂ ಆತನ ಸ್ನೇಹಿತರು ಸೋನು ಎಂಬಾತನ ಮೇಲೆ ಹಲ್ಲೆ ನಡೆಸಿ ಇರಿದಿದ್ದಾರೆ. ಇದನ್ನು ತಡೆಯಲು ಹೋದವರಿಗೂ ಚೂರಿ ಇರಿತದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

ಅಭಿಷೇಕ್ ಗೂ ಚೂರಿ ಇರಿಯಲಾಗಿದೆ. ಘಟನೆಯಲ್ಲಿ ಒಟ್ಟು 7 ಮಂದಿಗೆ ಗಾಯಗಳಾಗಿದ್ದು, ಸೋನು ಹಾಗೂ ನವೀನ್ ಎಂಬುವವರು ಆಸ್ಪತ್ರೆಗೆ ಬರುವ ವೇಳೆಗೆ ಸಾವನ್ನಪ್ಪಿದ್ದರು. ಅಭಿಷೇಕ್ ಹಾಗೂ ಮತ್ತೋರ್ವ ವ್ಯಕ್ತಿಗೆ ತೀವ್ರ ಗಾಯಗಳಾಗಿದ್ದು ಅವರನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದೆ. 

ಗಾಯಗೊಂಡಿರುವ ಇನ್ನೂ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಅವರ ಸ್ಥಿತಿ ಸ್ಥಿರವಾಗಿದೆ. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ. 

ಈ ಘಟನೆಯಲ್ಲಿ ಶಾಮೀಲಾಗಿದ್ದವರು ನಮ್ಕೀನ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com