ಲಂಡನ್‌ನಲ್ಲಿ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ವಿರುದ್ಧ ಲೋಕಸಭಾ ಸ್ಪೀಕರ್ ಕ್ರಮ ಕೈಗೊಳ್ಳಬೇಕು: ಗಿರಿರಾಜ್ ಸಿಂಗ್

ಭಾರತೀಯ ಸಂಸತ್ತಿನಲ್ಲಿ ಮೈಕ್ರೊಫೋನ್‌ಗಳು ವಿರೋಧ ಪಕ್ಷದ ವಿರುದ್ಧ ಹೆಚ್ಚಾಗಿ ಮೌನವಾಗಿರುತ್ತವೆ ಎಂದು ಲಂಡನ್‌ನಲ್ಲಿ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸೋಮವಾರ ಒತ್ತಾಯಿಸಿದ್ದಾರೆ.
ಗಿರಿರಾಜ್ ಸಿಂಗ್
ಗಿರಿರಾಜ್ ಸಿಂಗ್

ನವದೆಹಲಿ: ಭಾರತೀಯ ಸಂಸತ್ತಿನಲ್ಲಿ ಮೈಕ್ರೊಫೋನ್‌ಗಳು ವಿರೋಧ ಪಕ್ಷದ ವಿರುದ್ಧ ಹೆಚ್ಚಾಗಿ ಮೌನವಾಗಿರುತ್ತವೆ ಎಂದು ಲಂಡನ್‌ನಲ್ಲಿ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸೋಮವಾರ ಒತ್ತಾಯಿಸಿದ್ದಾರೆ.

ಬ್ರಿಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ತುಕ್ಡೆ-ತುಕ್ಡೆ ಗ್ಯಾಂಗ್‌ನಂತೆ ಮಾತನಾಡಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ.

'ಅವರು ಸಂಸತ್ತಿನಲ್ಲಿ ತುಂಬಾ ಮಾತನಾಡಿದ್ದಾರೆ. ಆದರೂ, ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡದಂತೆ ಮೈಕ್ ಸ್ವಿಚ್ ಆಫ್ ಮಾಡಲಾಗಿದೆ ಎಂದು ಲಂಡನ್‌ನಲ್ಲಿ ಹೇಳಿದ್ದಾರೆ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ ಮತ್ತು ಲೋಕಸಭೆ ಮತ್ತು ದೇಶಕ್ಕೆ ಮಾಡಿದ ಅವಮಾನ ಎಂದು ನಾನು ಭಾವಿಸುತ್ತೇನೆ' ಎಂದು ಸಿಂಗ್ ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ತಿಳಿಸಿದರು. 

ಕಳೆದ ವಾರ, 'ಲೋಕಸಭೆಯಲ್ಲಿ ಕಾರ್ಯನಿರ್ವಹಿಸುವ ಮೈಕ್‌ಗಳು ಪ್ರತಿಪಕ್ಷಗಳ ವಿರುದ್ಧ ಮೌನವಾಗಿರುತ್ತವೆ. ನಮ್ಮ ಮೈಕ್‌ಗಳು ಸರಿಯೇ ಇವೆ. ಅವು ಕಾರ್ಯನಿರ್ವಹಿಸುತ್ತಿವೆ. ಆದರೆ, ನೀವು ಅವುಗಳನ್ನು ಈಗ ಆನ್ ಮಾಡಲು ಸಾಧ್ಯವಿಲ್ಲ. ನಾನು ಮಾತನಾಡುವಾಗ ಅದು ನನಗೆ ಹಲವಾರು ಬಾರಿ ಸಂಭವಿಸಿದೆ' ಎಂದು ರಾಹುಲ್ ಗಾಂಧಿಯವರು ಬ್ರಿಟಿಷ್ ಸಂಸದರಿಗೆ ತಿಳಿಸಿದರು.

ಗಾಂಧಿಯವರ ಈ ಹೇಳಿಕೆಗಳನ್ನು 'ಕೆಟ್ಟ ಸುಳ್ಳು' ಎಂದು ಕರೆದ ಗಿರಿರಾಜ್ ಸಿಂಗ್, 'ಇದರ ವಿರುದ್ಧ ಲೋಕಸಭಾ ಸ್ಪೀಕರ್ ಕ್ರಮ ಕೈಗೊಳ್ಳಬೇಕು. ಈ ಹೇಳಿಕೆಗಳು ದೇಶಕ್ಕೆ ಮಾಡಿದ ಅವಮಾನ. ಭಾರತವು ವಿಶ್ವದಿಂದ ಗೌರವವನ್ನು ಪಡೆಯುತ್ತಿದೆ ಮತ್ತು ಅವರು ವಿದೇಶಕ್ಕೆ ಹೋಗಿ ತುಕ್ಡೆ-ತುಕ್ಡೆ ಗ್ಯಾಂಗ್‌ನಂತೆ ಮಾತನಾಡುತ್ತಿದ್ದಾರೆ' ಹೇಳಿದರು.

ಕಾನೂನು ಸಚಿವ ಕಿರಣ್ ರಿಜಿಜು ಕೂಡ ಟ್ವೀಟ್‌ನಲ್ಲಿ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

'ಭಾರತದ ಸಂಸದರೊಬ್ಬರು ಲಂಡನ್‌ಗೆ ಹೋಗಿ ಭಾರತದ ಆಂತರಿಕ ವಿಷಯಗಳಲ್ಲಿ ಮಧ್ಯಪ್ರವೇಶಿಸುವಂತೆ ವಿದೇಶಗಳಿಗೆ ಮನವಿ ಮಾಡಿರುವುದು ಅತ್ಯಂತ ದುರದೃಷ್ಟಕರ. ನಾವೆಲ್ಲರೂ ನಮ್ಮ ಪ್ರಜಾಪ್ರಭುತ್ವದ ಬಗ್ಗೆ ಹೆಮ್ಮೆಪಡುತ್ತೇವೆ ಮತ್ತು ನಮ್ಮ ಪ್ರಜಾಪ್ರಭುತ್ವದ ಪರಂಪರೆಯನ್ನು ಗೌರವಿಸುತ್ತೇವೆ. ವಿದೇಶಿ ಶಕ್ತಿಗಳು ಭಾರತವನ್ನು ಆಳಲು ಭಾರತೀಯರು ಎಂದಿಗೂ ಅನುಮತಿಸುವುದಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com