ಲಿವ್-ಇನ್ ಸಂಬಂಧಗಳ ನೋಂದಣಿಗೆ ಕೇಂದ್ರಕ್ಕೆ ನಿರ್ದೇಶನ: ಇದೊಂದು ದುಡುಕು ಬುದ್ಧಿಯ ಕಲ್ಪನೆ ಎಂದ ಸುಪ್ರೀಂ ಕೋರ್ಟ್

ಪ್ರತಿ ಲಿವ್ ಇನ್ ಸಂಬಂಧದ ನೋಂದಣಿಗೆ ನಿಯಮಾವಳಿಗಳನ್ನು ರೂಪಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ ಮತ್ತು ಇದು 'ದುಡುಕು ಬುದ್ಧಿಯ' ಕಲ್ಪನೆ ಎಂದು ಬಣ್ಣಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on

ನವದೆಹಲಿ: ಪ್ರತಿ ಲಿವ್ ಇನ್ ಸಂಬಂಧದ ನೋಂದಣಿಗೆ ನಿಯಮಾವಳಿಗಳನ್ನು ರೂಪಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ ಮತ್ತು ಇದು 'ದುಡುಕು ಬುದ್ಧಿಯ' ಕಲ್ಪನೆ ಎಂದು ಬಣ್ಣಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ನೇತೃತ್ವದ ಪೀಠ, 'ನೀವು ಅಂತಹ ಜನರ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಬಯಸುತ್ತೀರಾ ಅಥವಾ ಲಿವ್-ಇನ್ ಸಂಬಂಧಗಳಲ್ಲಿ ಇರಬಾರದು ಎಂದು ಬಯಸುತ್ತಿರುವಿರಾ? ಎಂದು ಅರ್ಜಿದಾರ ಪರ ಹಾಜರಾಗಿದ್ದ ವಕೀಲೆ ಮಮತಾ ರಾಣಿ ಅವರನ್ನು ಪ್ರಶ್ನಿಸಿತು. 

ಅಂತವರ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ಈ ರೀತಿಯ ಸಂಬಂಧಗಳನ್ನು ನೋಂದಾಯಿಸಬೇಕೆಂದು ಅರ್ಜಿದಾರರು ಬಯಸುತ್ತಾರೆ ಎಂದು ವಕೀಲರು ಉತ್ತರಿಸಿದರು.

'ಲಿವ್-ಇನ್ ಸಂಬಂಧಗಳ ನೋಂದಣಿಗೂ, ಕೇಂದ್ರಕ್ಕೂ ಏನು ಸಂಬಂಧವಿದೆ? ಇದು ಯಾವ ರೀತಿಯ ದುಡುಕು ಬುದ್ಧಿಯ ಕಲ್ಪನೆ? ಈ ರೀತಿಯ ಪಿಐಎಲ್‌ಗಳನ್ನು ಸಲ್ಲಿಸುವ ಅರ್ಜಿದಾರರ ಮೇಲೆ ಈ ನ್ಯಾಯಾಲಯವು ವೆಚ್ಚವನ್ನು ವಿಧಿಸಲು ಪ್ರಾರಂಭಿಸಲು ಇದು ಸಕಾಲವಾಗಿದೆ' ಎಂದು ನ್ಯಾಯಾಲಯ ಕಿಡಿಕಾರಿದೆ.

ಈ ಆರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠ ಹೇಳಿದೆ.

ಲಿವ್-ಇನ್ ಪಾರ್ಟ್ನರ್‌ನಿಂದ ಅತ್ಯಾಚಾರ ಮತ್ತು ಕೊಲೆಯಂತಹ ಅಪರಾಧಗಳ ಹೆಚ್ಚಳವನ್ನು ಉಲ್ಲೇಖಿಸಿ ಲಿವ್-ಇನ್ ಸಂಬಂಧಗಳ ನೋಂದಣಿಗೆ ನಿಯಮಗಳನ್ನು ರೂಪಿಸಲು ಕೇಂದ್ರಕ್ಕೆ ನಿರ್ದೇಶನವನ್ನು ಕೋರಿ ರಾಣಿ ಅವರು ಪಿಐಎಲ್ ಸಲ್ಲಿಸಿದ್ದರು.

ಶ್ರದ್ಧಾ ವಾಕರ್‌ರನ್ನು ಆಕೆಯ ಲೈವ್-ಇನ್ ಪಾರ್ಟ್ನರ್ ಅಫ್ತಾಬ್ ಅಮೀನ್ ಪೂನಾವಾಲಾ ಎಂಬಾತ ಕೊಂದಿದ್ದಾರೆ ಉಲ್ಲೇಖಿಸಿದ್ದ ಮನವಿಯು, ಅಂತಹ ಸಂಬಂಧಗಳ ನೋಂದಣಿಗೆ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸುವಂತೆ ಕೋರಿತ್ತು.

ಲಿವ್-ಇನ್ ಸಂಬಂಧಗಳ ನೋಂದಣಿಯು ಪರಸ್ಪರರ ಬಗ್ಗೆ ಮತ್ತು ಅವರ ವೈವಾಹಿಕ ಸ್ಥಿತಿ, ಅಪರಾಧದ ಇತಿಹಾಸ ಮತ್ತು ಇತರ ಸಂಬಂಧಿತ ವಿವರಗಳಿಗೆ ಸಂಬಂಧಿಸಿದಂತೆ ಪ್ರತಿಯೊಬ್ಬರ ಬಗ್ಗೆ ಸರ್ಕಾರಕ್ಕೆ ನಿಖರವಾದ ಮಾಹಿತಿ ಲಭ್ಯವಾಗುವಂತೆ ಮಾಡುತ್ತದೆ ಎಂದು ಪಿಐಎಲ್ ಹೇಳಿದೆ.

ಅತ್ಯಾಚಾರ ಮತ್ತು ಕೊಲೆಯಂತಹ ಅಪರಾಧಗಳ ಹೆಚ್ಚಳದ ಜೊತೆಗೆ, 'ಮಹಿಳೆಯರು ದಾಖಲಿಸಿದ ಸುಳ್ಳು ಅತ್ಯಾಚಾರ ಪ್ರಕರಣಗಳಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಇದರಲ್ಲಿ ಅವರು ಆರೋಪಿಗಳೊಂದಿಗೆ ಲಿವ್-ಇನ್ ಸಂಬಂಧಗಳಲ್ಲಿ ವಾಸಿಸುತ್ತಿದ್ದಾರೆಂದು ಹೇಳಿಕೊಳ್ಳುತ್ತಾರೆ ಮತ್ತು ಇದು ಲಿವ್-ಇನ್ ಸಂಬಂಧಗಳಲ್ಲಿ ವಾಸಿಸುವವರ ಆರೋಪಗಳು ಪುರಾವೆಗಳ ಬೆಂಬಲದಿಂದ ಸಾಬೀತಾಗಿದೆಯೇ ಎಂದು ಕಂಡುಹಿಡಿಯಲು ನ್ಯಾಯಾಲಯಗಳಿಗೆ ಯಾವಾಗಲೂ ಕಷ್ಟಕರವಾಗಿದೆ ಎಂದು ಪಿಐಎಲ್‌ನಲ್ಲಿ ಹೇಳಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com