ಶ್ರದ್ಧಾ ವಾಲ್ಕರ್
ಶ್ರದ್ಧಾ ವಾಲ್ಕರ್

ಶ್ರದ್ಧಾ ವಾಕರ್ ಹತ್ಯೆ: ಪತ್ತೆಯಾದ ಮಾಂಸ, ತಲೆಕೂದಲು, ಮೂಳೆಯ ಡಿಎನ್ಎ ಶ್ರದ್ಧಾ ತಂದೆಯ ಮಾದರಿಯೊಂದಿಗೆ ಹೊಂದಿಕೆ: ವರದಿ

ಇಡೀ ದೇಶವನ್ನು ಬೆಚ್ಚಿ ಬೀಳಿಸಿರುವ ಶ್ರದ್ಧಾವಾಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದ ಸಂತ್ರಸ್ಥೆಯದ್ದು ಎನ್ನಲಾದ ದೇಹದ ತುಂಡುಗಳು, ಮೂಳೆ ಮತ್ತು ತಲೆಕೂದಲಿನ DNA ಆಕೆಯ ತಂದೆಯ ಮಾದರಿಯೊಂದಿಗೆ ಹೊಂದಾಣಿಕೆಯಾಗುತ್ತಿದೆ ಎಂದು ತಿಳಿದುಬಂದಿದೆ.

ನವದೆಹಲಿ: ಇಡೀ ದೇಶವನ್ನು ಬೆಚ್ಚಿ ಬೀಳಿಸಿರುವ ಶ್ರದ್ಧಾವಾಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದ ಸಂತ್ರಸ್ಥೆಯದ್ದು ಎನ್ನಲಾದ ದೇಹದ ತುಂಡುಗಳು, ಮೂಳೆ ಮತ್ತು ತಲೆಕೂದಲಿನ DNA ಆಕೆಯ ತಂದೆಯ ಮಾದರಿಯೊಂದಿಗೆ ಹೊಂದಾಣಿಕೆಯಾಗುತ್ತಿದೆ ಎಂದು ತಿಳಿದುಬಂದಿದೆ.
 
ಡಿಎನ್‌ಎ ಮೈಟೊಕಾಂಡ್ರಿಯದ ಪ್ರೊಫೈಲಿಂಗ್‌ಗಾಗಿ ಪೊಲೀಸರು ಕಳುಹಿಸಿರುವ ಕೂದಲು ಮತ್ತು ಮೂಳೆ ಮಾದರಿಗಳು ಶ್ರದ್ಧಾ ಅವರ ತಂದೆ ಮತ್ತು ಸಹೋದರ ಡಿಎನ್ಎ ದೊಂದಿಗೆ ಹೊಂದಾಣಿಕೆಯಾಗಿದ್ದು, ಇದು ಆ ದೇಹದ ತುಂಡುಗಳು ಶ್ರದ್ಧಾಳದ್ದೇ ಎಂಬುದನ್ನು ಖಚಿತಪಡಿಸಿವೆ. ಅಂತೆಯೇ ಶ್ರದ್ಧಾ ವಾಕರ್ ಅವರ 28 ವರ್ಷದ ಲೈವ್-ಇನ್ ಪಾಲುದಾರ ಅಫ್ತಾಬ್ ಅಮೀನ್ ಪೂನಾವಾಲಾ ಹತ್ಯೆ ಮಾಡಿದ್ದಾರೆ ಎಂಬುದನ್ನು ದೃಢಪಡಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಗುರ್ಗಾಂವ್ ಮತ್ತು ಮೆಹ್ರೌಲಿ ಸೇರಿದಂತೆ ದೆಹಲಿ ಎನ್‌ಸಿಆರ್‌ನ ಅರಣ್ಯ ಪ್ರದೇಶಗಳಲ್ಲಿ ಶೋಧ ನಡೆಸಿದಾಗ ಮೂಳೆಗಳು ಮತ್ತು ಕೂದಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಎನ್‌ಎ ಹೊರತೆಗೆಯಲು ಸಾಧ್ಯವಾಗದ ಮೂಳೆ ಮತ್ತು ಕೂದಲಿನ ಮಾದರಿಗಳನ್ನು 'ಡಿಎನ್‌ಎ ಮೈಟೊಕಾಂಡ್ರಿಯಲ್ ಪ್ರೊಫೈಲಿಂಗ್'ಗಾಗಿ ಸೆಂಟರ್ ಫಾರ್ ಡಿಎನ್‌ಎ ಫಿಂಗರ್‌ಪ್ರಿಂಟಿಂಗ್ ಮತ್ತು ಡಯಾಗ್ನೋಸ್ಟಿಕ್ಸ್ (ಸಿಡಿಎಫ್‌ಡಿ) ಹೈದರಾಬಾದ್‌ಗೆ ಕಳುಹಿಸಲಾಗಿತ್ತು ಎಂದು ವಿಶೇಷ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಸಾಗರ್ ಪ್ರೀತ್ ಹೂಡಾ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, "ಬುಧವಾರದಂದು, ನಾವು ಪರೀಕ್ಷೆಯ ವರದಿ ಸ್ವೀಕರಿಸಿದ್ದೇವೆ. ಮೃತರದ್ದು ಎಂದು ಹೇಳಲಾದ ಒಂದು ಮೂಳೆ ಮತ್ತು ಕೂದಲಿನ ಗೊಂಚಲು ಆಕೆಯ ತಂದೆ ಮತ್ತು ಸಹೋದರನ ಮಾದರಿಗಳೊಂದಿಗೆ ಹೊಂದಿಕೆಯಾಗಿದೆ, ಇದು ಮೂಳೆ ಮತ್ತು ಕೂದಲಿನ ಗುರುತನ್ನು ಶ್ರಧಾ ವಾಕರ್ ಅವರದ್ದೇ ಎಂಬುದನ್ನು ಸಾಬೀತುಪಡಿಸುತ್ತದೆ. ಮೂಳೆಗಳನ್ನು ಈಗ ಶವಪರೀಕ್ಷೆಗಾಗಿ ಕಳುಹಿಸಲಾಗುವುದು ಇದನ್ನು ವೈದ್ಯಕೀಯ ಮಂಡಳಿಯು ಏಮ್ಸ್‌ನಲ್ಲಿ ನಡೆಸುತ್ತದೆ ಎಂದು ಅವರು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com