ಮೋದಿ ಅವರನ್ನು ಸಿಲುಕಿಸುವಂತೆ ಸಿಬಿಐ ನನ್ನ ಮೇಲೆ ಒತ್ತಡ ಹೇರಲು ಪ್ರಯತ್ನಿಸಿತ್ತು: ಅಮಿತ್ ಶಾ

ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು 'ಟ್ರ್ಯಾಪ್' ಮಾಡಲು ಮತ್ತು ಕಂಬಿ ಹಿಂದೆ ಹಾಕಲು ಎಲ್ಲಾ ತಂತ್ರಗಳನ್ನು ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಸಿಬಿಐ ಬಳಸಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅಮಿತ್ ಶಾ
ಅಮಿತ್ ಶಾ
Updated on

ನವದೆಹಲಿ: ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು 'ಟ್ರ್ಯಾಪ್' ಮಾಡಲು ಮತ್ತು ಕಂಬಿ ಹಿಂದೆ ಹಾಕಲು ಎಲ್ಲಾ ತಂತ್ರಗಳನ್ನು ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಸಿಬಿಐ ಬಳಸಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ನಾನು ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ದೆ. ಇದರಿಂದ ಹೊರಬರಬೇಕೆಂದರೆ ಮೋದಿ ಹೆಸರೇಳುವಂತೆ ಕೇಳಿದ್ದರು. ಶೇಕಡಾ 90ಕ್ಕೂ ಹೆಚ್ಚು ಪ್ರಶ್ನೆಗಳಲ್ಲಿ ಸಿಬಿಐ ಮೋದಿಯವರ ಹೆಸರನ್ನು ಹೇಳುವಂತೆ ನನ್ನನ್ನು ಕೇಳುತ್ತಲೇ ಇದ್ದರು. ಆದರೆ ಇದನ್ನು ನಾನು ನಿರಾಕರಿಸಿದ್ದೆ ಹೀಗಾಗಿ ನಾನು ಜೈಲು ಪಾಲಾಗಿದ್ದೆ ಎಂದರು. ಈ ವೇಳೆ ಸೋನಿಯಾ ಗಾಂಧಿ ಕಾಂಗ್ರೆಸ್ ಅನ್ನು ಮುನ್ನಡೆಸುತ್ತಿದ್ದರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಹೀಗಿದ್ದರೂ ಬಿಜೆಪಿ ಯಾವತ್ತೂ ಈ ಬಗ್ಗೆ ಕಪ್ಪು ಕುರ್ತಾ, ಧೋತಿ ಮತ್ತು ಪೇಟ ಧರಿಸಿ ಪ್ರತಿಭಟನೆ ಮಾಡಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಅನೇಕ ಅಮಾಯಕ ಪೊಲೀಸ್ ಅಧಿಕಾರಿಗಳನ್ನು ಸೇರಿಸಲಾಗಿತ್ತು. ನಂತರ ಮುಂಬೈ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತು. ರಾಜಕೀಯ ಕಾರಣಗಳಿಗಾಗಿ ನನ್ನನ್ನು ನಕಲಿ ಪ್ರಕರಣದಲ್ಲಿ ಸಿಲುಕಿಸಲಾಗಿತ್ತು ಎಂದು ತನ್ನ ತೀರ್ಪಿನಲ್ಲಿ ಹೇಳಿದೆ. ಆದರೆ ನಾವು ಎಂದಿಗೂ ಪ್ರತಿಭಟನೆಯನ್ನು ಆಶ್ರಯಿಸಲಿಲ್ಲ. ಮತ್ತೊಂದೆಡೆ ಇಂದು ಪ್ರತಿಪಕ್ಷ ನಾಯಕರ ವಿರುದ್ಧ ಸಾಕ್ಷ್ಯಾಧಾರಗಳಿವೆ, ಅದರ ಮೇಲೆ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತಿವೆ ಎಂದು ಗೃಹ ಸಚಿವರು ಹೇಳಿದರು. ಕೇಜ್ರಿವಾಲ್ ಅವರು ಸ್ವಚ್ಛ ಎಂದು ಹೇಳಿಕೊಳ್ಳುತ್ತಿದ್ದಾರೆ, ಆದರೆ ಸತ್ಯೇಂದ್ರ ಜೈನ್ ಮತ್ತು ಮನೀಶ್ ಸಿಸೋಡಿಯಾ ಅವರು ದೀರ್ಘಕಾಲ ಜೈಲಿನಲ್ಲಿದ್ದಾರೆ. ಅವರು ನಿರಪರಾಧಿಗಳಾಗಿದ್ದರೆ ಜಾಮೀನು ಏಕೆ ಸಿಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಲೋಕಸಭೆ ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ರಾಹುಲ್ ಗಾಂಧಿ ಅವರನ್ನು ಹೀರೋ ಮಾಡಲು ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಯನ್ನು 'ರಾಹುಲ್ ವರ್ಸಸ್ ಮೋದಿ' ಮಾಡಲು ಕಾಂಗ್ರೆಸ್‌ನ ಸಂಭವನೀಯ ಕ್ರಮದ ಬಗ್ಗೆ ಕೇಳಿದ ಪ್ರಶ್ನೆಗೆ, ಶಾ, ಬಿಜೆಪಿಗೆ ಇದಕ್ಕಿಂತ ಉತ್ತಮ ಅವಕಾಶ ಇರಲಿಲ್ಲ ಎಂದು ಹೇಳಿದರು. ಸಂಸದರ ಅನರ್ಹತೆಯ ಕಾನೂನು ಸ್ಪಷ್ಟವಾಗಿದೆ. ಸಂಸದರ ಅನರ್ಹತೆ ಕುರಿತ ಸುಗ್ರೀವಾಜ್ಞೆಯನ್ನು ಹರಿದು ಹಾಕದಿದ್ದರೆ ರಾಹುಲ್ ಉಳಿಯುತ್ತಿದ್ದರು. 

ರಾಹುಲ್ ಗಾಂಧಿಯವರ ದುರಹಂಕಾರವನ್ನು ಟೀಕಿಸಿದ ಶಾ, ತಮ್ಮ ಶಿಕ್ಷೆಯನ್ನು ತಡೆಹಿಡಿಯಲು ರಾಹುಲ್ ಇನ್ನೂ ಏಕೆ ಮನವಿ ಮಾಡಿಲ್ಲ ಎಂದು ಪ್ರಶ್ನಿಸಿದರು. 'ಈ ಅಹಂಕಾರ ಎಲ್ಲಿಂದ ಬಂತು' ಎಂದು ಕೇಳಿದರು. ಸದಸ್ಯತ್ವ ಕಳೆದುಕೊಂಡ 17 ಜನರಲ್ಲಿ ಲಾಲು ಪ್ರಸಾದ್, ಜೆ ಜಯಲಲಿತಾ ಮತ್ತು ರಶೀದ್ ಅಲ್ವಿ ಸೇರಿದ್ದಾರೆ ಎಂದು ಅಮಿತ್ ಶಾ ಹೇಳಿದರು. ಆದರೆ ಯಾರೂ ಗಲಾಟೆ ಮಾಡಲಿಲ್ಲ. ಗಾಂಧಿ ಕುಟುಂಬದವರು ತಮಗಾಗಿ ಪ್ರತ್ಯೇಕ ಕಾನೂನು ಏಕೆ ಬಯಸುತ್ತಾರೆ? ಒಂದು ಕುಟುಂಬಕ್ಕೆ ಪ್ರತ್ಯೇಕ ಕಾನೂನು ಬೇಕೇ ಎಂಬುದನ್ನು ಭಾರತದ ಜನರು ನಿರ್ಧರಿಸಬೇಕು ಎಂದರು.

ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, 'ಇತರ ಸಂಸದರನ್ನು ಅನರ್ಹಗೊಳಿಸಿದಾಗ ಪ್ರಜಾಪ್ರಭುತ್ವಕ್ಕೆ ಏಕೆ ಅಪಾಯವಾಗಲಿಲ್ಲ? ಶಿಕ್ಷೆಗೊಳಗಾದ ಸಂಸದರಿಗೆ ಪರಿಹಾರ ನೀಡುವ ಸುಗ್ರೀವಾಜ್ಞೆಯನ್ನು ಹರಿದು ಹಾಕಿದಾಗ ಅವರೇಕೆ ಈಗ ಎದೆಬಡಿದುಕೊಳ್ಳುತ್ತಿದ್ದಾರೆ? ಏನೇ ನಡೆದರೂ ಪ್ರಧಾನಿ ಮೋದಿ ಅವರನ್ನು ದೂಷಿಸಲಾಗುತ್ತಿತ್ತು, ಆದರೆ ಲೋಕಸಭೆಯ ಸ್ಪೀಕರ್‌ಗೆ ಯಾವುದೇ ಸಂಸದರ ಅನರ್ಹತೆಯನ್ನು ತಡೆಯುವ ಅಧಿಕಾರವಿಲ್ಲ ಎಂದು ಶಾ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com