ಗುಜರಾತ್ ಬಿಜೆಪಿ ನಾಯಕನ ಗುಂಡಿಟ್ಟು ಹತ್ಯೆ
ಅಹಮದಾಬಾದ್: ಭಾರತೀಯ ಜನತಾ ಪಕ್ಷದ ವಾಪಿ ತಾಲೂಕಾ ಉಪಾಧ್ಯಕ್ಷ ಶೈಲೇಶ್ ಪಟೇಲ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಸೋಮವಾರ ನಡೆದಿದೆ.
ಶೈಲೇಶ್ ಪಟೇಲ್ ಗುಜರಾತ್‌ನ ವಲ್ಸಾದ್ ಜಿಲ್ಲೆಯ ವಾಪಿಯ ಕೊಚಾರ್ವಾ ಗ್ರಾಮದವರಾಗಿದ್ದಾರೆ. ವಾಪಿ ಪಟ್ಟಣದ ಸಮೀಪವಿರುವ ದೇವಸ್ಥಾನಕ್ಕೆ ತೆರಳಿದ್ದ ಪತ್ನಿ ಹಿಂದಿರುಗುವಿಕೆಗಾಗಿ ಶೈಲೇಶ್ ಅವರು ಎಸ್‌ಯುವಿಯಲ್ಲಿ ಕಾದು ಕುಳಿತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದಿರುವ ಅಪರಿಚಿತ ವ್ಯಕ್ತಿಗಳು ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಸ್ಥಳಕ್ಕೆ ಬಂದಿರುವ ದುಷ್ಕರ್ಮಿಗಳು ಶೈಲೇಶ್ ಅವರ ಮೇಲೆ 3-4 ಗುಂಡುಗಳನ್ನು ಹಾರಿಸಿದ್ದಾರೆಂದು ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ: ಹಾಡಹಗಲೇ ಕಾರ್ಪೊರೇಟರ್ ಪತಿಯ ಬರ್ಬರ ಹತ್ಯೆ
ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಶೈಲೇಶ್ ಅವರ ಪತ್ನಿ ದೇಗುಲದಿಂದ ಹೊರಬಂದಿದ್ದು, ಈ ವೇಳೆ ಇಬ್ಬರು ಮುಸುಕುಧಾರಿ ಯುವಕರು ಬೈಕ್‌ನಲ್ಲಿ ಪರಾರಿಯಾಗುತ್ತಿರುವುದನ್ನು ನೋಡಿಸಿದ್ದಾರೆ. ಬಳಿಕ ಪತಿ ರಕ್ತದ ಮಡುವಿನಲ್ಲಿ ಬಿದ್ದಿಸುವುದನ್ನು ಕಂಡು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶೈಲೇಶ್ ಮೃತಪಟ್ಟಿದ್ದಾರೆ.
ಎಲ್ಲಾ ಗಡಿ ಹಾಗೂ ಪೊಲೀಸ್ ಠಾಣೆಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಜಿಲ್ಲೆಯ ಎಲ್ಲಾ ಪ್ರವೇಶ ಹಾಗೂ ನಿರ್ಗಮನದ ಪ್ರದೇಶಗಳನ್ನು ಸೀಲ್ ಮಾಡಲಾಗಿದೆ. ಹೀಗಾಗಿ ದಾಳಿಕೋರರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ದೂರಿನಲ್ಲಿ ಶೈಲೇಶ್ ಅವರ ಪತ್ನಿ ಕೆಲವಸ ಹೆಸರುಗಳನ್ನು ಹೇಳಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಉಪ ಅಧೀಕ್ಷಕ ಬಿಎನ್ ದಾವೆ ಅವರು ಹೇಳಿದ್ದಾರೆ.
ಈ ನಡುವೆ ಘಟನೆಗೆ ಸ್ಥಳೀಯ ಬಿಜೆಪಿ ಮುಖಂಡರು ಆಘಾತ ಹಾಗೂ ಸಂತಾಪವನ್ನು ಸೂಚಿಸಿದ್ದಾರೆ. ಅಲ್ಲದೆ, ತನಿಖೆಗೆ ಆಗ್ರಹಿಸಿದ್ದಾರೆ.
ವಲ್ಸಾದ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೇಮಂತ್ ಕಂಸಾರ ಮಾತನಾಡಿ, ಶೈಲೇಶ್ ಪಟೇಲ್ ಹತ್ಯೆ ಅತ್ಯಂತ ದುರಂತ. ಅವರು ಬದ್ಧತೆಯಳ್ಳ ಪಕ್ಷದ ಕಾರ್ಯಕರ್ತರಾಗಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ