ಪಂಜಾಬ್: ಗುರುದ್ವಾರದಲ್ಲಿ ಮದ್ಯ ಸೇವನೆ ಮಾಡಿದ್ದಕ್ಕೆ ಮಹಿಳೆಗೆ ಗುಂಡೇಟು: ಸಾವು!

ಮದ್ಯ ವ್ಯಸನದಿಂದ ಮುಕ್ತಳಾಗಲು ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ, ಗುರುದ್ವಾರದ ಆವರಣದಲ್ಲಿ ಮದ್ಯ ಸೇವನೆ ಮಾಡಿದ್ದಕ್ಕಾಗಿ ಆಕೆಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. 
ಪಂಜಾಬ್ ಪೊಲೀಸರು (ಸಂಗ್ರಹ ಚಿತ್ರ)
ಪಂಜಾಬ್ ಪೊಲೀಸರು (ಸಂಗ್ರಹ ಚಿತ್ರ)
Updated on

ಪಂಜಾಬ್: ಮದ್ಯ ವ್ಯಸನದಿಂದ ಮುಕ್ತಳಾಗಲು ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ, ಗುರುದ್ವಾರದ ಆವರಣದಲ್ಲಿ ಮದ್ಯ ಸೇವನೆ ಮಾಡಿದ್ದಕ್ಕಾಗಿ ಆಕೆಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. 

ಆರೋಪಿಯನ್ನು ಬಂಧಿಸಲಾಗಿದ್ದು, ಆತ ತನ್ನ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಯಿತು ಎಂದು ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾನೆ.

30 ರ ಹರೆಯದ ಪರ್ವಿಂದರ್ ಕೌರ್ ಅವರು ಭಾನುವಾರ ಸಂಜೆ ದುಖನಿವಾರನ್ ಸಾಹಿಬ್ ಗುರುದ್ವಾರದ 'ಸರೋವರ' (ಪವಿತ್ರ ಕೊಳ) ಬಳಿ ಮದ್ಯ ಸೇವಿಸುತ್ತಿದ್ದರು. ಗುರುದ್ವಾರಕ್ಕೆ ನಿತ್ಯ ಭೇಟಿ ನೀಡುವ ನಿರ್ಮಲಜಿತ್ ಸಿಂಗ್ ಸೈನಿ ಅವರು ತಮ್ಮ ಪರವಾನಗಿ ಪಡೆದ ರಿವಾಲ್ವರ್ ಬಳಸಿ ಕೌರ್ ಮೇಲೆ ಹಲವು ಬಾರಿ ಗುಂಡು ಹಾರಿಸಿದ್ದಾರೆ ಎಂದು ಪಟಿಯಾಲದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ವರುಣ್ ಶರ್ಮಾ ತಿಳಿಸಿದ್ದಾರೆ.

ಹಿಂದಿನ ಯಾವುದೇ ಕ್ರಿಮಿನಲ್ ದಾಖಲೆಗಳಿಲ್ಲದ ಆಸ್ತಿ ಡೀಲರ್ ಸೈನಿ ಅವರು ಮೊರಿಂಡಾ ಗುರುದ್ವಾರದಲ್ಲಿ ನಡೆದ ಘಟನೆ  ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com