ರೋಜ್‌ಗಾರ್ ಮೇಳ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ರೋಜ್‌ಗಾರ್ ಮೇಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮಂಗಳವಾರ ವಾಗ್ದಾಳಿ ನಡೆಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರೋಜ್‌ಗಾರ್ ಮೇಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮಂಗಳವಾರ ವಾಗ್ದಾಳಿ ನಡೆಸಿದೆ.

ಮೋದಿಯವರು ರೋಜ್ ಗಾರ್ ಮೇಳ ಕಾರ್ಯಕ್ರಮವನ್ನು ವೈಯಕ್ತೀಕರಿಸುವ ಮೂಲಕ ಆಡಳಿತವನ್ನು ನಾಶಪಡಿಸುತ್ತಿದ್ದು, ಕೀಳುಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಲಕ್ಷ-ಲಕ್ಷ ಉದ್ಯೋಗಗಳನ್ನು ನಾಶಪಡಿಸಿದ್ದು ಮೋದಿಯವರೇ ಎಂಬುದು ಗೊತ್ತಿದೆ ಎಂದು ಆರೋಪಿಸಿದೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, 9 ವರ್ಷಗಳಲ್ಲಿ ವಾರ್ಷಿಕ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ಮೋದಿಯವರು, ಇದೂವರೆಗೆ 18 ಕೋಟಿ ಯುವಕರ ಕನಸುಗಳನ್ನು ಭಗ್ನಗೊಳಿಸಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ, ಆದರೆ, ಇಂದು ಕೇವಲ 71,000 ನೇಮಕಾತಿ ಪತ್ರಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಯುವಕರೊಂದಿಗೆ ಮಾಡಲಾಗಿರುವ ಈ ದ್ರೋಹಕ್ಕೆ ಕಾಂಗ್ರೆಸ್ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿ, ಹಿಂದೆಂದೂ ಕಾಣದ ರೀತಿಯಲ್ಲಿ ಆಡಳಿತವನ್ನು ವೈಯಕ್ತೀಕರಿಸುವ ಮೂಲಕ ಮೋದಿಯವರು ಆಡಳಿತವನ್ನು "ನಾಶಗೊಳಿಸಿದ್ದಾರೆಂದು ತಿಳಿಸಿದರು.

ಆಡಳಿತವನ್ನು ವೈಯುಕ್ತಿಕಗೊಳಿಸುವ ಮೂಲಕ ಪ್ರಧಾನಿಯವರು ಆಡಳಿತ ವ್ಯವಸ್ಥೆಯನ್ನು ನಾಶ ಮಾಡಿದ್ದಾರೆ. ಈ ಹಿಂದೆಂದೂ ಈ ರೀತಿ ನಡೆದಿಲ್ಲ. ತಮ್ಮ ಉದ್ಯೋಗ ಮೇಳಗಳ ಮೂಲಕ ಆಡಳಿತದ ಮಟ್ಟವನ್ನು ಮತ್ತಷ್ಟು ಕಡಿಮೆ ಮಾಡಿದ್ದಾರೆ. ಅವರೇ ಈ ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ. ಈ ಉದ್ಯೋಗಗಳನ್ನು ಪಡೆಯುವ ಜನರಿಗೆ ಅವರೇ ಹಣ ನೀಡುವಂತೆ ಹೇಳಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಉದ್ಯೋಗಾಕಾಂಕ್ಷಿಗಳು ಅವರಿಗೆ ಮಾತ್ರ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕೆಂದು ಹೇಳುತ್ತಿದ್ದಾರೆ.

ನೋಟು ಅಮಾನ್ಯೀಕರಣ, ಜಿಎಸ್‌ಟಿ, ಎಂಎಸ್‌ಎಂಇಗಳ ನಾಶ ಮತ್ತು ಪಿಎಸ್‌ಯುಗಳ ವಿವೇಚನಾರಹಿತ ಖಾಸಗೀಕರಣದ ಮೂಲಕ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಲಕ್ಷಗಟ್ಟಲೆ ಉದ್ಯೋಗಗಳನ್ನು ನಾಶಪಡಿಸಿದವರು ಇವರೇ ಎಂಬುದು ಯುವಕರಿಗೆ ತಿಳಿದಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com