ಮಾಲಿವುಡ್‌ನಲ್ಲಿ ಡ್ರಗ್ಸ್ ಹಾವಳಿ: ಸೇವನೆ- ಮಾರಾಟ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ; ಪೊಲೀಸರು

ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಬಳಿಕ ಇದೀಗ ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ಹಾವಳಿ ಸದ್ದು ಮಾಡುತ್ತಿದೆ. ಮಲಯಾಳಂ ಚಲನಚಿತ್ರೋದ್ಯಮದ ಪ್ರಮುಖರು ಚಿತ್ರರಂಗಕ್ಕೆ ಡ್ರಗ್ಸ್‌ ಒಳಹರಿವಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನಂತರ, ಕೇರಳ ಪೊಲೀಸರು ಕಾನೂನು ಉಲ್ಲಂಘಿಸುವವರನ್ನು ಮುಲಾಜಿಲ್ಲದೆ ಮಟ್ಟಹಾಕಲು ನಿರ್ಧರಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೊಚ್ಚಿ: ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಬಳಿಕ ಇದೀಗ ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ಹಾವಳಿ ಸದ್ದು ಮಾಡುತ್ತಿದೆ. ಮಲಯಾಳಂ ಚಲನಚಿತ್ರೋದ್ಯಮದ ಪ್ರಮುಖರು ಚಿತ್ರರಂಗಕ್ಕೆ ಡ್ರಗ್ಸ್‌ ಒಳಹರಿವಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನಂತರ, ಕೇರಳ ಪೊಲೀಸರು ಕಾನೂನು ಉಲ್ಲಂಘಿಸುವವರನ್ನು ಮುಲಾಜಿಲ್ಲದೆ ಮಟ್ಟಹಾಕಲು ನಿರ್ಧರಿಸಿದ್ದಾರೆ.

ಕೊಚ್ಚಿ ಮಲಯಾಳಂ ಚಿತ್ರರಂಗದ ಪ್ರಧಾನ ಕಛೇರಿಯಾಗಿರುವುದರಿಂದ, ಕೊಚ್ಚಿ ನಗರ ಪೊಲೀಸ್ ಕಮಿಷನರ್ ಕೆ. ಸೇತುರಾಮನ್ ಮಾತನಾಡಿ, 'ಇದರಲ್ಲಿ ತೊಡಗಿರುವವರು ಯಾರು ಎಂದು ನಮಗೆ ತಿಳಿದಿದೆ ಮತ್ತು ಸಮಸ್ಯೆಯೆಂದರೆ ನಾವು ಹೋಗಿ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರು ಅದನ್ನು (ಡ್ರಗ್ಸ್) ಬಳಸುವಾಗ ಅಥವಾ ಅದನ್ನು ಹೊಂದಿರುವಾಗ ನಾವು ಅವರನ್ನು ಬಂಧಿಸಬಹುದು. ಸಾಮಾನ್ಯವಾಗಿ, ಅವರಿಗೆ ಅವರ ಆಪ್ತ ಸಹಾಯಕರು ಡ್ರಗ್ಸ್ ಅನ್ನು ಪೂರೈಸುತ್ತಾರೆ. ಇಂದಲ್ಲ ನಾಳೆ ನಾವು ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ' ಎಂದು ಹೇಳಿದರು.

ಚಿತ್ರರಂಗದ ಪ್ರಮುಖರು ಈ ಅಭ್ಯಾಸವನ್ನು ಬೇರುಸಮೇತ ಕಿತ್ತೊಗೆಯಲು ತಮ್ಮೊಂದಿಗೆ ಇದ್ದಾರೆ. ಉದ್ಯಮದಲ್ಲಿರುವ ಈಗಿನ ದಿಗ್ಗಜರು ಡ್ರಗ್ಸ್ ಬಳಸಿ ಈ ಮಟ್ಟಕ್ಕೆ ಬಂದಿಲ್ಲ. ನಾವು ಉದ್ಯಮವನ್ನು ಸ್ವಚ್ಛಗೊಳಿಸುತ್ತೇವೆ ಮತ್ತು ಪೊಲೀಸರು ಆ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಸೇತುರಾಮನ್ ಹೇಳಿದರು.

ಮಾಲಿವುಡ್‌ನಲ್ಲಿ ಡ್ರಗ್ಸ್ ಸೇವನೆ ಹೇರಳವಾಗಿದೆ ಎಂದು ಚಿತ್ರರಂಗದ ಕೆಲವು ನಟರು ಇತ್ತೀಚೆಗೆ ಹೇಳಿಕೆ ನೀಡಿದ ಹಾಗೂ ಸ್ವತ ಚಿತ್ರರಂಗ ಸಂಸ್ಥೆಯೇ ಈ ವಿಷಯವನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ಈ ಹೇಳಿಕೆ ನೀಡಿದ್ದಾರೆ. 

ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆ ಇದೆ ಎಂಬುದನ್ನು ಮಲಯಾಳಂ ಚಿತ್ರರಂಗ ಒಕ್ಕೂಟ (ಅಮ್ಮಾ)ವೇ ಒಪ್ಪಿಕೊಂಡಿದ್ದು, ಸೂಕ್ತ ತನಿಖೆ ಹಾಗೂ ಕ್ರಮಕ್ಕೆ ಸರ್ಕಾರಕ್ಕೆ ಮನವಿ ಮಾಡಿದೆ.

ತಕ್ಷಣ ಪ್ರತಿಕ್ರಿಯಿಸಿದ ಸಂಸ್ಕೃತಿ ಮತ್ತು ಚಲನಚಿತ್ರಗಳ ರಾಜ್ಯ ಸಚಿವ ಸಾಜಿ ಚೆರಿಯನ್ ಅವರು, ತೀವ್ರ ಆಘಾತ ವ್ಯಕ್ತಪಡಿಸಿದರು ಮತ್ತು ಸರ್ಕಾರವು ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಈ ಬಗ್ಗೆ ಚರ್ಚಿಸಲು ಚಿತ್ರೋದ್ಯಮದ ಎಲ್ಲಾ ಪಾಲುದಾರರನ್ನು ಆಹ್ವಾನಿಸುವ ಮೂಲಕ ಸಭೆ ನಡೆಸುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com