ಮೆಹುಲ್ ಚೋಕ್ಸಿಗೆ ರೂ 5.35 ಕೋಟಿ ಡಿಮ್ಯಾಂಡ್ ನೋಟಿಸ್ ನೀಡಿದ ಸೆಬಿ

ಮಹತ್ವದ ಬೆಳವಣಿಗೆಯಲ್ಲಿ ವಂಚನೆಯ ವಹಿವಾಟಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸೆಬಿ ಉದ್ಯಮಿ ಮೆಹುಲ್ ಚೋಕ್ಸಿಗೆ ಬಹುಕೋಟಿ ರೂಗಳ ಡಿಮ್ಯಾಂಡ್ ನೋಟಿಸ್ ನೀಡಿದೆ.
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ವಂಚನೆಯ ವಹಿವಾಟಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸೆಬಿ ಉದ್ಯಮಿ ಮೆಹುಲ್ ಚೋಕ್ಸಿಗೆ ಬಹುಕೋಟಿ ರೂಗಳ ಡಿಮ್ಯಾಂಡ್ ನೋಟಿಸ್ ನೀಡಿದೆ.

ಮೂಲಗಳ ಪ್ರಕಾರ ಗೀತಾಂಜಲಿ ಜೆಮ್ಸ್ ಲಿಮಿಟೆಡ್‌ನ ಷೇರುಗಳಲ್ಲಿ ವಂಚನೆಯ ವಹಿವಾಟಿಗೆ ಸಂಬಂಧಿಸಿದ ಪ್ರಕರಣದಲ್ಲಿ 5.35 ಕೋಟಿ ರೂಪಾಯಿ ಪಾವತಿಸುವಂತೆ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿಗೆ ಸೆಬಿ ಗುರುವಾರ ನೋಟಿಸ್ ನೀಡಿದೆ.. ಪಾವತಿಗೆ 15 ದಿನಗಳ ಗಡುವು ನೀಡಿದ್ದು, ಒಂದು ವೇಳೆ ಅವರು ವಿಫಲವಾದರೆ ಬಂಧಿಸಿ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡುವುದಾಗಿ ಸೆಬಿ ಎಚ್ಚರಿಸಿದೆ.

 ಚೋಕ್ಸಿಗೆ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ವಿಧಿಸಿದ ದಂಡವನ್ನು ಪಾವತಿಸಲು ವಿಫಲವಾದ ನಂತರ ಈ ಬೇಡಿಕೆ ನೋಟಿಸ್ ಬಂದಿದೆ. 

ಏನಿದು ಪ್ರಕರಣ?
ಗೀತಾಂಜಲಿ ಜೆಮ್ಸ್‌ನ ಪ್ರವರ್ತಕರ ಗುಂಪಿನ ಭಾಗವಾಗಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಚೋಕ್ಸಿ, ಈ ಹಿಂದೆ ಪರಾರಿಯಾಗಿರುವ ನೀರವ್ ಮೋದಿಯವರ ತಾಯಿಯ ಚಿಕ್ಕಪ್ಪ. ಇವರಿಬ್ಬರೂ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) 14,000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಸಾಲವಾಗಿ ಪಡೆದು ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ.

2018 ರ ಆರಂಭದಲ್ಲಿ PNB ಹಗರಣ ಬೆಳಕಿಗೆ ಬಂದ ನಂತರ ಚೋಕ್ಸಿ ಮತ್ತು ಮೋದಿ ಇಬ್ಬರೂ ಭಾರತದಿಂದ ಪಲಾಯನ ಮಾಡಿದ್ದಾರೆ. ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದು, ನೀರವ್ ಮೋದಿ ಬ್ರಿಟನ್ ಜೈಲಿನಲ್ಲಿದ್ದು, ಭಾರತದ ಹಸ್ತಾಂತರ ಕೋರಿಕೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com