ಜಾಮೀನಿನ ಮೇಲೆ ಹೊರಬಂದ ಉಗ್ರರಿಗೆ GPS ಟ್ರಾಕರ್ ಅಳವಡಿಕೆ; ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ವಿನೂತನ ಕ್ರಮ

ಕಣಿವೆ ರಾಜ್ಯದಲ್ಲಿ ಉಗ್ರರ ಹಾವಳಿ ನಿಯಂತ್ರಿಸಲು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯು ವಿನೂತನ ಕ್ರಮಕ್ಕೆ ಮುಂದಾಗಿದ್ದು, ಜಾಮೀನಿನ ಮೇಲೆ ಹೊರಬಂದ ಉಗ್ರರ ಚಲನವಲನಗಳ ಮೇಲೆ ನಿಗಾ ಇರಿಸಲು ಅವರಿಗೆ GPS ಟ್ರಾಕರ್ ಅಳವಡಿಸಿದ್ದಾರೆ. ಆ ಮೂಲಕ ಈ ವಿನೂತನ ಕ್ರಮ ಕೈಗೊಂಡ ದೇಶದ ಮೊದಲ ಪೊಲೀಸ್ ಇಲಾಖೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಉಗ್ರರಿಗೆ GPS ಟ್ರಾಕರ್ ಅಳವಡಿಕೆ
ಉಗ್ರರಿಗೆ GPS ಟ್ರಾಕರ್ ಅಳವಡಿಕೆ
Updated on

ಶ್ರೀನಗರ: ಕಣಿವೆ ರಾಜ್ಯದಲ್ಲಿ ಉಗ್ರರ ಹಾವಳಿ ನಿಯಂತ್ರಿಸಲು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯು ವಿನೂತನ ಕ್ರಮಕ್ಕೆ ಮುಂದಾಗಿದ್ದು, ಜಾಮೀನಿನ ಮೇಲೆ ಹೊರಬಂದ ಉಗ್ರರ ಚಲನವಲನಗಳ ಮೇಲೆ ನಿಗಾ ಇರಿಸಲು ಅವರಿಗೆ GPS ಟ್ರಾಕರ್ ಅಳವಡಿಸಿದ್ದಾರೆ. ಆ ಮೂಲಕ ಈ ವಿನೂತನ ಕ್ರಮ ಕೈಗೊಂಡ ದೇಶದ ಮೊದಲ ಪೊಲೀಸ್ ಇಲಾಖೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ, ಒಳನುಸುಳುವಿಕೆ ಯಾವಾಗಲೂ ಸೇನೆಯನ್ನು, ಜನರನ್ನು ಬಾಧಿಸುತ್ತಿದ್ದು, ಶಂಕಿತ ಉಗ್ರರ ಮೇಲೆ ನಿಗಾ ಇರಿಸಲು, ಆ ಮೂಲಕ ಮುಂದೆ ಎದುರಾಗಬಹುದಾದ ಅಪಾಯವನ್ನು ತಡೆಯಲು ಜಮ್ಮು-ಕಾಶ್ಮೀರ ಪೊಲೀಸರು ಜಿಪಿಎಸ್‌ ಟ್ರ್ಯಾಕರ್‌ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಆ ಮೂಲಕ ದೇಶದಲ್ಲಿಯೇ ಮೊದಲ ಬಾರಿಗೆ ಶಂಕಿತ ಉಗ್ರರ ಮೇಲೆ ನಿಗಾ ಇರಿಸಲು ಜಿಪಿಎಸ್‌ ಟ್ರ್ಯಾಕರ್‌ (GPS Tracker) ಬಳಿಸಿದ ಮೊದಲ ಪೊಲೀಸ್‌ ಇಲಾಖೆ ಎಂಬ ಖ್ಯಾತಿಗೆ ಪಾತ್ರವಾಗಿದೆ. 

ಬಂಧಿತರಾಗಿರುವ ಶಂಕಿತ ಉಗ್ರರು ಜಾಮೀನು ಪಡೆದು ಜೈಲಿನಿಂದ ಹೊರಗೆ ಬಿಡುವಾಗ ಅವರ ಪಾದಕ್ಕೆ ಜಿಪಿಎಸ್‌ ಟ್ರ್ಯಾಕರ್‌ ಅಳವಡಿಸಲಾಗುತ್ತದೆ. ಇದರಿಂದ ಶಂಕಿತ ಉಗ್ರರು ಜೈಲಿನ ಹೊರಗೆ ಕೈಗೊಳ್ಳುವ ಚಟುವಟಿಕೆಗಳು, ಚಲನವಲನಗಳ ಮೇಲೆ ನಿಗಾ ಇರಿಸಲು ಸಾಧ್ಯವಾಗುತ್ತದೆ. ಜಾಮೀನಿಗೆ ಅರ್ಜಿ ಸಲ್ಲಿಸಿರುವ ಗುಲಾಂ ಮೊಹಮ್ಮದ್‌ ಭಟ್‌ ಎಂಬ ಶಂಕಿತ ಉಗ್ರನಿಗೆ ಜಿಪಿಎಸ್‌ ಅಳವಡಿಸುವ ಮೂಲಕ ಜಮ್ಮು-ಕಾಶ್ಮೀರ ಪೊಲೀಸರು ತಂತ್ರಜ್ಞಾನದ ಬಳಕೆ ಆರಂಭಿಸಿದ್ದಾರೆ. 

ಗುಲಾಂ ಮೊಹಮ್ಮದ್‌ ಭಟ್‌ ವಿರುದ್ಧ 2.5 ಲಕ್ಷ ರೂ. ಹಣ ಸಾಗಿಸುತ್ತಿದ್ದಾಗ ಬಂಧಿಸಿ ಆತನ ವಿರುದ್ಧ ಟೆರರ್ ಫಂಡಿಂಗ್ ಕೇಸ್ ದಾಖಲಿಸಲಾಗಿತ್ತು. ಈತ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಮತ್ತು ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ್ದಕ್ಕಾಗಿ ಮತ್ತೊಂದು ಪ್ರಕರಣದಲ್ಲಿ ದೆಹಲಿಯ ಎನ್‌ಐಎ ಕೋರ್ಟ್ ಪಟಿಯಾಲಾ ಹೌಸ್ ನಿಂದ ಶಿಕ್ಷೆಗೊಳಗಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಮಾತ್ರವಲ್ಲ ಇತರೆ ದೇಶಗಳಲ್ಲೂ ಇದೆ ಈ ತಂತ್ರಜ್ಞಾನ
ಇನ್ನು ಈ ತಂತ್ರಜ್ಞಾನ ಭಾರತ ಮಾತ್ರವಲ್ಲ.. ಜಗತ್ತಿನ ಇತರೆ ದೇಶಗಳಲ್ಲೂ ಇದೆ. ಶಂಕಿತ ಉಗ್ರರು ಸೇರಿ ಯಾವುದೇ ಅಪರಾಧದ ಆರೋಪ ಹೊತ್ತಿರುವವರ ಮೇಲೆ ನಿಗಾ ಇರಿಸಲು ಬೇರೆ ದೇಶಗಳಲ್ಲಿ ಈಗಾಗಲೇ ಜಿಪಿಎಸ್‌ ಟ್ರ್ಯಾಕರ್‌ ತಂತ್ರಜ್ಞಾನದ ಬಳಕೆ ಮಾಡಲಾಗುತ್ತಿದೆ. ಅಮೆರಿಕ, ಬ್ರಿಟನ್‌, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ ಸೇರಿ ಹಲವು ದೇಶಗಳಲ್ಲಿ ಜಾಮೀನು ಪಡೆದು, ಪರೋಲ್‌ ಮೇಲೆ ಜೈಲಿನಿಂದ ಹೊರಬಂದವರ ಮೇಲೆ ಜಿಪಿಎಸ್‌ ಟ್ರ್ಯಾಕರ್‌ ಮೂಲಕವೇ ನಿಗಾ ಇರಿಸಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಎಸಗಬಹುದಾದ ದಾಳಿ, ಅಪರಾಧಗಳನ್ನು ನಿಗ್ರಹಿಸಲು ಸಾಧ್ಯವಾಗಿದೆ.

ಪೊಲೀಸರಿಗೆ ತಲೆನೋವಾದ ಸಕ್ರಿಯ ಉಗ್ರರು
ಮೂಲಗಳ ಪ್ರಕಾರ ಜಮ್ಮು-ಕಾಶ್ಮೀರದಲ್ಲಿ 100ಕ್ಕೂ ಉಗ್ರರು ಸಕ್ರಿಯರಾಗಿದ್ದಾರೆ ಎಂದು ಕಣಿವೆ ಪೊಲೀಸರು ತಿಳಿಸಿದ್ದಾರೆ. ಇವರಲ್ಲಿ 40 ಉಗ್ರರು ಸ್ಥಳೀಯರಾದರೆ, 71 ಉಗ್ರರು ವಿದೇಶದವರಾಗಿದ್ದಾರೆ. ಅಂದ ಹಾಗೆ 2022ರಲ್ಲಿ 137 ಉಗ್ರರು ಸಕ್ರಿಯರಾಗಿದ್ದರು. ಇದನ್ನು ಸೇನೆಯು 111ಕ್ಕೆ ಇಳಿಸಿದೆ. ಕಾಶ್ಮೀರದಲ್ಲಿ ಜನವರಿಯಿಂದ ಸೆಪ್ಟೆಂಬರ್‌ ಅವಧಿಯಲ್ಲಿ 31 ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಳೆದ ವರ್ಷ ಕಣಿವೆಯಲ್ಲಿ 187 ಉಗ್ರರನ್ನು ಹತ್ಯೆ ಮಾಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com