ದಲಿತ ಯುವಕನ ಅಪಹರಣ, ಮೂತ್ರ ವಿಸರ್ಜನೆ ಮಾಡಿದ ಆರೋಪದಡಿ ಆರು ಮಂದಿಯ ಬಂಧನ

ಘಟನೆ ಬುಧವಾರ ರಾತ್ರಿ ನಡೆದಿದ್ದರೂ, ಶುಕ್ರವಾರ ಬೆಳಗ್ಗೆ ಸಂತ್ರಸ್ತ ಕಂದ್ರು ಶ್ಯಾಮ್ ಕುಮಾರ್ ತನ್ನ ಸಹೋದರನೊಂದಿಗೆ ಪ್ರಕಾಶಂ ಜಿಲ್ಲೆಯ ಸಿಂಗಾರೆಡ್ಡಿ ಹರೀಶ್ ರೆಡ್ಡಿ ಮತ್ತು ಆತನ ಇತರ ಐದು ಸ್ನೇಹಿತರು ಸೇರಿ ತನ್ನನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ಕಂಚಿಕಚೆರ್ಲ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ವಿಜಯವಾಡ: ಘಟನೆ ಬುಧವಾರ ರಾತ್ರಿ ನಡೆದಿದ್ದರೂ, ಶುಕ್ರವಾರ ಬೆಳಗ್ಗೆ ಸಂತ್ರಸ್ತ ಕಂದ್ರು ಶ್ಯಾಮ್ ಕುಮಾರ್ ತನ್ನ ಸಹೋದರನೊಂದಿಗೆ ಪ್ರಕಾಶಂ ಜಿಲ್ಲೆಯ ಸಿಂಗಾರೆಡ್ಡಿ ಹರೀಶ್ ರೆಡ್ಡಿ ಮತ್ತು ಆತನ ಇತರ ಐದು ಸ್ನೇಹಿತರು ಸೇರಿ ತನ್ನನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ಕಂಚಿಕಚೆರ್ಲ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ವಿಜಯವಾಡ ನಗರ ಪೊಲೀಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ಟಿಆರ್ ಪೊಲೀಸ್ ಕಮಿಷನರ್ ಕಂಠಿ ರಾಣಾ ಟಾಟಾ, 'ಗುಂಟೂರಿನಲ್ಲಿ ತನ್ನನ್ನು ಅಪಹರಿಸಿದ ನಂತರ ಆರೋಪಿಗಳು ನಾಲ್ಕು ಗಂಟೆಗಳ ಕಾಲ ತನಗೆ ಹೊಡೆದು ಚಿತ್ರಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ಶ್ಯಾಮ್ ಕುಮಾರ್ ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸರು ಎಲ್ಲಾ ಆರೋಪಿಗಳನ್ನು ತ್ವರಿತವಾಗಿ ಬಂಧಿಸಿದ್ದಾರೆ ಎಂದರು.

ಪ್ರಮುಖ ಆರೋಪಿ ಹರೀಶ್ ರೆಡ್ಡಿ ಈ ಹಿಂದೆ ಸಣ್ಣಪುಟ್ಟ ವಿಚಾರಕ್ಕೆ ತನ್ನೊಂದಿಗೆ ವೈಷಮ್ಯ ಹೊಂದಿದ್ದರು. ಹೀಗಾಗಿ ತನ್ನ ವಿರುದ್ಧ ಯೋಜನೆ ರೂಪಿಸಿದ್ದಾರೆ ಮತ್ತು ಅವರ ಮತ್ತೊಬ್ಬ ಸ್ನೇಹಿತನ ತನ್ನನ್ನು ಮೂಲಕ ಶಿವಸಾಯಿ ಕ್ಷೇತ್ರದ ಬಳಿ ಬರುವಂತೆ ಹೇಳಿದರು ಎಂದು ಕಂಚಿಕಚೆರ್ಲ ಅಂಬೇಡ್ಕರ್ ಕಾಲೋನಿ ನಿವಾಸಿ ಶ್ಯಾಮ್ ಕುಮಾರ್ ಆರೋಪಿಸಿದ್ದಾರೆ.

ಶ್ಯಾಮ್ ಕುಮಾರ್ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಅಲ್ಲಿಗೆ ಹೋದಾಗ ಹರೀಶ್ ರೆಡ್ಡಿ ಮತ್ತು ಇತರ ಐವರು ಯುವಕರು ಬಲವಂತವಾಗಿ ಬಾಡಿಗೆಗೆ ಪಡೆದಿದ್ದ ಕಾರಿಗೆ ಹತ್ತಿಸಿದ್ದರು. ಕುಡಿಯುವ ನೀರು ಕೇಳಿದಾಗ ತನ್ನ ಮೇಲೆ ಹರೀಶ್ ರೆಡ್ಡಿ ಅವರು ಮೂತ್ರ ವಿಸರ್ಜನೆ ಮಾಡಿದ್ದಾರೆ. ತನ್ನ ಚಿನ್ನದ ಸರ ಮತ್ತು 7 ಸಾವಿರ ನಗದನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪಿಗಳು ತಮ್ಮ ಜಾತಿ ನಿಂದನೆ ಮಾಡಿದ್ದಾರೆ ಮತ್ತು ಪೊಲೀಸರಿಗೆ ದೂರು ನೀಡಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ್ದಾರೆ. 

ಆರೋಪಿಗಳು ಸಂತ್ರಸ್ತನನ್ನು ಕಾರಿನಲ್ಲಿ ಗುಂಟೂರಿನ ಟೋಲ್‌ಗೇಟ್ ಬಳಿ ಬಿಟ್ಟು ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ. ಶ್ಯಾಮ್ ಕುಮಾರ್ ತನ್ನ ಸಹೋದರನಿಗೆ ಕರೆ ಮಾಡಿ ದಾಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ರೆಡ್ಡಿ ತಮ್ಮ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂಬ ಶ್ಯಾಮ್ ಕುಮಾರ್ ಆರೋಪವನ್ನು ಉನ್ನತ ಪೊಲೀಸರು ತಳ್ಳಿಹಾಕಿದ್ದಾರೆ.

ಸಿಂಗಾರೆಡ್ಡಿ ಹರೀಶ್ ರೆಡ್ಡಿ (23), ಗುರುಗು ಅನಿಲ್ ಕುಮಾರ್ (22), ಭವನಂ ಶ್ರೀಕಾಂತ್ ರೆಡ್ಡಿ (26), ಸಿಂಗಾರೆಡ್ಡಿ ವಿಷ್ಣುವರ್ಧನ್ ರೆಡ್ಡಿ (21), ಮಣಿಕೊಂಡ ನಾಗಾರ್ಜುನ ರೆಡ್ಡಿ (22) ಮತ್ತು ದೀನಕೊಂಡ ವಿ ನಾರಾಯಣ (24) ಸೇರಿದಂತೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಶ್ಯಾಮ್ ಕುಮಾರ್ ಅವರನ್ನು ನಾಲ್ಕು ಗಂಟೆಗಳ ಕಾಲ ರಸ್ತೆಯಲ್ಲಿ ಎಳೆದೊಯ್ದು, ತೀವ್ರವಾಗಿ ಥಳಿಸಿದ್ದಾರೆ. ಬಾಯಾರಿಕೆಯಾಗಿದೆ ಎಂದು ಮನವಿ ಮಾಡಿಕೊಂಡಾಗ ಒಂದು ಸ್ಥಳದಲ್ಲಿ ಕಾರು ನಿಲ್ಲಿಸಿ, ನಡುರಸ್ತೆಯಲ್ಲಿ ಅವರನ್ನು ಕೂರಿಸಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ಸಂತ್ರಸ್ತನನ್ನು ಜಾತಿ ಹೆಸರಲ್ಲಿ ಅಣಕಿಸಿ, ಇದುವೇ ನಿಮ್ಮ ಬದುಕು ಎಂದಿದ್ದಾರೆ. ಬಳಿಕ ಸಂತ್ರಸ್ತನಿಂದ ಚಿನ್ನದ ಸರ ಹಾಗೂ 7,000 ನಗದು ದೋಚಿದ್ದಾರೆ. ಬಳಿಕ ಕಾರಿನಲ್ಲಿ ದೂರದವರೆಗೆ ಕರೆದೊಯ್ದು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಅವರನ್ನು ಗುಂಟೂರು ಟೋಲ್‌ಗೇಟ್ ಬಳಿ ಕಾರಿನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಸಂತ್ರಸ್ತ ಕಾರು ಚಲಾಯಿಸಿಕೊಂಡು ವಿಜಯವಾಡ ಬಸ್ ನಿಲ್ದಾಣಕ್ಕೆ ಬಂದು ತನ್ನ ಸಹೋದರನಿಗೆ ಕರೆ ಮಾಡಿದ್ದಾರೆ. ನಂತರ ಅಲ್ಲಿಗೆ ಬಂದ ಸಹೋದರ ಸಂತ್ರಸ್ತನನ್ನು ಕಾರಿನಲ್ಲಿ ಕರೆದುಕೊಂಡು ರಾತ್ರಿ 2 ಗಂಟೆಗೆ ಕಂಚಿಕಚೆರ್ಲ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅಲ್ಲಿಂದ ಸಂತ್ರಸ್ತನನ್ನು ನಂದಿಗಮ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com