ಬಿಹಾರ: ಶೇ.34 ರಷ್ಟು ಕುಟುಂಬಗಳ ಮಾಸಿಕ ವರಮಾನ ಕೇವಲ 6,000 ರೂ.!

ಬಿಹಾರದಲ್ಲಿರುವ ಕುಟುಂಬಗಳ ಪೈಕಿ ಶೇ.34.13 (94,12,786 ಕುಟುಂಬಗಳು) ರಾಷ್ಟು ಕುಟುಂಬಗಳ ಮಾಸಿಕ ಆದಾಯ ಕೇವಲ 6,000 ರೂಪಾಯಿ ಎಂಬ ಮಾಹಿತಿ ಅಲ್ಲಿನ ಜಾತಿ-ಆರ್ಥಿಕ ಸಮೀಕ್ಷೆ ವರದಿ ಮೂಲಕ ಬಹಿರಂಗವಾಗಿದೆ. 
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)

ಪಾಟ್ನ: ಬಿಹಾರದಲ್ಲಿರುವ ಕುಟುಂಬಗಳ ಪೈಕಿ ಶೇ.34.13 (94,12,786 ಕುಟುಂಬಗಳು) ರಾಷ್ಟು ಕುಟುಂಬಗಳ ಮಾಸಿಕ ಆದಾಯ ಕೇವಲ 6,000 ರೂಪಾಯಿ ಎಂಬ ಮಾಹಿತಿ ಅಲ್ಲಿನ ಜಾತಿ-ಆರ್ಥಿಕ ಸಮೀಕ್ಷೆ ವರದಿ ಮೂಲಕ ಬಹಿರಂಗವಾಗಿದೆ. 

ವಿಧಾನಸಭೆಯ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಈ ವರದಿಯ ಪ್ರತಿಗಳನ್ನು ಶಾಸಕರಿಗೆ ಲಭ್ಯ ಮಾಡಲಾಗಿದೆ. 

ವರದಿಯ ಪ್ರಕಾರ ಮಾಸಿಕ 6,000-10,000 ರೂಪಾಯಿ ಸಂಪಾದಿಸುವ ಕುಟುಂಬಗಳು ಶೇ.29.61 ರಷ್ಟಿವೆ (81,91,390 ಕುಟುಂಬಗಳು) ಅಂದರೆ ಮಾಸಿಕ 10,000 ರೂಪಾಯಿ ಗಳಿಸುವ ಶೇ.63 ರಷ್ಟು ಕುಟುಂಬಗಳು ರಾಜ್ಯದಲ್ಲಿವೆ.

10,000 ರೂಪಾಯಿಗಳಿಗಿಂತಲೂ ಹೆಚ್ಚಿನ, 20,000  ವರೆಗಿನ ಆದಾಯವನ್ನು ಶೇ.18.06 ರಷ್ಟು ಕುಟುಂಬಗಳು ಮಾತ್ರ ಹೊಂದಿದ್ದರೆ, ಶೇ.9.83 ರಷ್ಟು ಕುಟುಂಬಗಳು 20,000 ಕ್ಕಿಂತ ಹೆಚ್ಚಿನ, 50,000 ಒಳಗಿನ ಆದಾಯವನ್ನು ಹೊಂದಿವೆ. 

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಒತ್ತಡದಿಂದ ಉದ್ದೇಶಪೂರ್ವಕವಾಗಿ ಮುಸ್ಲಿಮರು ಮತ್ತು ಯಾದವರ ಜನಸಂಖ್ಯೆಯನ್ನು ಜಾತಿ ಗಣತಿ ವರದಿಯಲ್ಲಿ ಹೆಚ್ಚಾಗಿ ತೋರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದರು.

ಬಿಹಾರದಲ್ಲಿ ಬಿಜೆಪಿ ಎನ್‌ಡಿಎ ಸರ್ಕಾರದ ಭಾಗವಾಗಿದ್ದಾಗ ಬಿಹಾರದಲ್ಲಿ ಜಾತಿ ಆಧಾರಿತ ಸಮೀಕ್ಷೆ ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಮಿತ್ ಶಾ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com