ಆಂಧ್ರಪ್ರದೇಶದಲ್ಲಿ ಬಸ್ ಅಪಘಾತ (ಸಂಗ್ರಹ ಚಿತ್ರ)
ಆಂಧ್ರಪ್ರದೇಶದಲ್ಲಿ ಬಸ್ ಅಪಘಾತ (ಸಂಗ್ರಹ ಚಿತ್ರ)

ಆಂಧ್ರ ಪ್ರದೇಶ: ಏಕಾಏಕಿ ಚಲಿಸಿದ ಬಸ್; 3 ಸಾವು

ವಿಜಯವಾಡದ ಬಸ್ ನಿಲ್ದಾಣದಲ್ಲಿ ಬಸ್ ಒಂದು ಏಕಾಏಕಿ ಚಲಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. 
Published on

ವಿಜಯವಾಡ: ವಿಜಯವಾಡದ ಬಸ್ ನಿಲ್ದಾಣದಲ್ಲಿ ಬಸ್ ಒಂದು ಏಕಾಏಕಿ ಚಲಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. 

ಪಂಡಿತ್ ನೆಹರು ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 8:20 ರ ವೇಳೆಗೆ ಈ ಘಟನೆ ನಡೆದಿದೆ.

ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗತೊಡಗಿದ್ದು, ನಿಲ್ದಾಣದಲ್ಲಿ ನಿಂತಿದ್ದ ಬಸ್ ಏಕಾಏಕಿ ಚಾಲೆಯಾಗಿದ್ದು, ಪ್ರಯಾಣಿಕರಿಗೆ ಕಲ್ಪಿಸಲಾಗಿದ್ದ ಆಸನ ವ್ಯವಸ್ಥೆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸ್ಟೀಲ್ ರೇಲಿಂಗ್ಸ್ ಗೆ ಢಿಕ್ಕಿ ಹೊಡೆದಿದೆ. ಅದೇ ಪ್ರದೇಶದಲ್ಲಿದ್ದ ಮೆಟಲ್ ಖುರ್ಚಿಗಳು ನಜ್ಜುಗುಜ್ಜಾಗಿದ್ದು, ಪ್ರಯಾಣಿಕರ ಪೈಕಿ ಮೂವರು ಸಾವನ್ನಪ್ಪಿದ್ದಾರೆ.

ಚಾಲಕ ಬಸ್ ನ್ನು ಹಿಂದಕ್ಕೆ ಕೊಂಡೊಯ್ಯುವ ಬದಲು, ಮುಂದಕ್ಕೆ ಚಾಲನೆ ಮಾಡಿದ್ದೇ ಬಸ್ ಪ್ಲಾಟ್ ಫಾರ್ಮ್ ಮೇಲೆ ನುಗ್ಗಲು ಕಾರಣವಾಗಿದೆ ಎಂದು ಹಿರಿಯ ಅಧಿಕಾರಿ ಎಂ ಏಸು ದಾನಮ್ ತಿಳಿಸಿದ್ದಾರೆ.
 
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಜಯವಾಡ ಬಸ್ ನಿಲ್ದಾಣ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಎರಡಕ್ಕೂ ಪ್ರಮುಖ ಸಂಪರ್ಕ ಕೇಂದ್ರವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com