ಆಗ್ರಾ: ಹೋಂಸ್ಟೇ ಉದ್ಯೋಗಿ ಮೇಲೆ ಸಾಮೂಹಿಕ ಅತ್ಯಾಚಾರ, 5 ಮಂದಿ ಬಂಧನ

ಇಡೀ ದೇಶ ದೀಪಾವಳಿಯನ್ನು ಆಚರಿಸುತ್ತಿತ್ತು. ಆಗ್ರಾದಲ್ಲಿ ಐವರು ಸೇರಿ ಮಹಿಳೆಯೊಬ್ಬರ ಮಾನ ದೋಚುತ್ತಿದ್ದರು. ಆಗ್ರಾದ ಹೋಂ ಸ್ಟೇಯಲ್ಲಿ ಮಹಿಳಾ ಉದ್ಯೋಗಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಆಗ್ರಾ(ಉತ್ತರಪ್ರದೇಶ): ಇಡೀ ದೇಶ ದೀಪಾವಳಿಯನ್ನು ಆಚರಿಸುತ್ತಿತ್ತು. ಆಗ್ರಾದಲ್ಲಿ ಐವರು ಸೇರಿ ಮಹಿಳೆಯೊಬ್ಬರ ಮಾನ ದೋಚುತ್ತಿದ್ದರು. ಆಗ್ರಾದ ಹೋಂ ಸ್ಟೇಯಲ್ಲಿ ಮಹಿಳಾ ಉದ್ಯೋಗಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.

ಈ ವೇಳೆ ಯುವತಿ ಪ್ರತಿಭಟಿಸಿದಾಗ ಆಕೆಗೆ ಥಳಿಸಿದ್ದಾರೆ. ಮಹಿಳೆಯ ಕಿರುಚಾಟ ಕೇಳಿ ಅಕ್ಕಪಕ್ಕದಲ್ಲಿದ್ದವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ಆಕೆಯ ಸ್ಥಿತಿ ಶೋಚನೀಯವಾಗಿತ್ತು. ಪೊಲೀಸರನ್ನು ಕಂಡ ಆಕೆ ಅಳಲು ತೋಡಿಕೊಂಡಳು. ತಾಜ್‌ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 

ಸಂತ್ರಸ್ತೆಯ ದೂರಿನ ಮೇರೆಗೆ ಸಾಮೂಹಿಕ ಅತ್ಯಾಚಾರದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಸೂರಜ್ ಕುಮಾರ್ ರೈ ತಿಳಿಸಿದ್ದಾರೆ. ಸಂತ್ರಸ್ತೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಹೋಮ್ ಸ್ಟೇಯನ್ನು ಸೀಲ್ ಮಾಡಲಾಗಿದೆ. ಮಹಿಳೆ ಆಗ್ರಾದವಳಲ್ಲ. ಘಟನೆಯ ಬಗ್ಗೆ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದರು.

ಹೋಂ ಸ್ಟೇಯಲ್ಲಿ ಐವರು ಯುವಕರು ತನಗೆ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ. ಪ್ರಮುಖ ಆರೋಪಿ ಜಿತೇಂದ್ರ ರಾಥೋಡ್. ಉಳಿದ 4 ಮಂದಿ ಆತನ ಸ್ನೇಹಿತರಾಗಿದ್ದರು. ಅವರ ಹೆಸರು ರವಿ ರಾಥೋಡ್, ಮನೀಶ್ ಕುಮಾರ್, ದೇವ್ ಕಿಶೋರ್. ಒಬ್ಬರ ಹೆಸರು ತಿಳಿದುಬಂದಿಲ್ಲ. ಎಲ್ಲಾ ಆರೋಪಿಗಳು ತಾಜ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯವರಾಗಿದ್ದಾರೆ. 

ಮಹಿಳೆ ಎರಡು ವರ್ಷಗಳಿಂದ ಹೋಂ ಸ್ಟೇಯಲ್ಲಿ ಕೆಲಸ ಮಾಡುತ್ತಿದ್ದಳು. ಶನಿವಾರ ತಡರಾತ್ರಿ ಅವರು ಹೋಂ ಸ್ಟೇಯಲ್ಲಿದ್ದರು. ಹೋಮ್ ಸ್ಟೇ ಇರುವ ಕಟ್ಟಡದ ಮಾಲೀಕರು ಬೇರೊಬ್ಬರು, ವ್ಯಕ್ತಿಯೊಬ್ಬರು ಬಾಡಿಗೆಗೆ ಹೋಂ ಸ್ಟೇ ನಡೆಸುತ್ತಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ನನಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ ಎಂದು ಅಲವತ್ತುಕೊಂಡರು. ಅವರು ನನ್ನನ್ನು ಬಿಟ್ಟಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com