ಕೇರಳ ಸ್ಫೋಟದಲ್ಲಿ IED ಬಳಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. (ಸಂಗ್ರಹ ಚಿತ್ರ)
ಕೇರಳ ಸ್ಫೋಟದಲ್ಲಿ IED ಬಳಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. (ಸಂಗ್ರಹ ಚಿತ್ರ)

ಕೇರಳ ಸರಣಿ ಬಾಂಬ್ ಸ್ಫೋಟ ಪ್ರಕರಣ: 24 ವರ್ಷದ ಯುವಕ ಸಾವು, ಮೃತರ ಸಂಖ್ಯೆ 6ಕ್ಕೆ ಏರಿಕೆ

ಕೇರಳದ ಕಲಮಸ್ಸೆರಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಸುಟ್ಟಗಾಯಗಳಿಂದ ಬಳಲುತ್ತಿದ್ದ ಯುವಕನೊಬ್ಬ ಸಾವಿಗೀಡಾಗಿದ್ದು, ಸ್ಫೋಟದಲ್ಲಿ ಸಾವಿಗೀಡಾದವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. 
Published on

ತಿರುವನಂತಪುರಂ: ಕೇರಳದ ಕಲಮಸ್ಸೆರಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಸುಟ್ಟಗಾಯಗಳಿಂದ ಬಳಲುತ್ತಿದ್ದ ಯುವಕನೊಬ್ಬ ಸಾವಿಗೀಡಾಗಿದ್ದು, ಸ್ಫೋಟದಲ್ಲಿ ಸಾವಿಗೀಡಾದವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. 

24 ವರ್ಷದ ಪ್ರವೀಣ್ ಪ್ರದೀಪನ್ ಅವರು ಶೇ 50 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದರು. ವೆಂಟಿಲೇಟರ್ ಬೆಂಬಲದಲ್ಲಿಟ್ಟು ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ರಾತ್ರಿ 10.40ರ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ. ಇವರು ಸ್ಫೋಟದಲ್ಲಿ ಮೃತಪಟ್ಟ 12 ವರ್ಷದ ಲಿಬ್ನಾ ಅವರ ಹಿರಿಯ ಸಹೋದರ. ಅವರ ತಾಯಿ ಸಾಲಿ ಪ್ರದೀಪನ್ ಕೂಡ ಶನಿವಾರ ಮೃತಪಟ್ಟರು.

ಸ್ಫೋಟದಲ್ಲಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅವರ ಸಹೋದರ ರಾಹುಲ್ ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಫೋಟದಲ್ಲಿ ಪೆರುಂಬವೂರ್‌ನ ಇರಿಂಗೋಲ್‌ನ ಲಿಯೋನಾ ಪೌಲೋಸ್ (55), ತೊಡುಪುಳದ ಕಲಿಯಾರ್‌ನ ಕುಮಾರಿ (52), ಕಲಮಸ್ಸೇರಿಯ ಮೋಲಿ ಜಾಯ್ (61) ಸಾವಿಗೀಡಾಗಿದ್ದಾರೆ.

ಒಟ್ಟು 11 ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಆರು ಮಂದಿಯನ್ನು ಐಸಿಯುಗೆ ದಾಖಲಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಡೊಮಿನಿಕ್ ಮಾರ್ಟಿನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com