ಹಲಾಲ್‌ ಪ್ರಮಾಣಿಕೃತ ಉತ್ಪನ್ನಗಳ ನಿಷೇಧಿಸಿದ ಉತ್ತರ ಪ್ರದೇಶ ಸರ್ಕಾರ!

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯಾನಾಥ್ ಸರ್ಕಾರ ಹಲಾಲ್‌ ಪ್ರಮಾಣಿಕೃತ ಉತ್ಪನ್ನಗಳ ನಿಷೇಧಿಸಿದೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್
Updated on

ಲಖನೌ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯಾನಾಥ್ ಸರ್ಕಾರ ಹಲಾಲ್‌ ಪ್ರಮಾಣಿಕೃತ ಉತ್ಪನ್ನಗಳ ನಿಷೇಧಿಸಿದೆ.

ಹೌದು.. ಹಲಾಲ್‌ ಪ್ರಮಾಣಿಕೃತ ಉತ್ಪನ್ನಗಳ ಮಾರಾಟಕ್ಕೆ ಉತ್ತರಪ್ರದೇಶ ಸರ್ಕಾರ ಶನಿವಾರ ನಿಷೇಧ ಹೇರಿದ್ದು, ಖಾದ್ಯ ಮತ್ತು ಸೌಂದರ್ಯವರ್ಧಕ ವಸ್ತುಗಳ ಮಾರಾಟಕ್ಕಾಗಿ ನಕಲಿ ಹಲಾಲ್‌ ಪ್ರಮಾಣಪತ್ರಗಳನ್ನು ನೀಡುವ ಮೂಲಕ ನಿರ್ದಿಷ್ಟ ಸಮುದಾಯದ ಗ್ರಾಹಕರ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದಲ್ಲಿ ವಿವಿಧ ಸಂಸ್ಥೆಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಳಿಕ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ನಿಷೇಧವು ಔಷಧ ಸೇರಿದಂತೆ ಹಲಾಲ್‌ ಪ್ರಮಾಣಿಕೃತ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟಕ್ಕೆ ಅನ್ವಯವಾಗಲಿದೆ. ರಫ್ತು ಮಾಡುವ ಉತ್ಪನ್ನಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲಖನೌನ ಐಶ್‌ಭಾಗ್‌ ನಿವಾಸಿ ಶೈಲೇಂದ್ರ ಕುಮಾರ್‌ ಶರ್ಮಾ ಎಂಬುವವರು ನೀಡಿರುವ ದೂರಿನ ಆಧಾರದಲ್ಲಿ ಚೆನ್ನೈನ ಹಲಾಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ದೆಹಲಿಯ ಜಮಿಯತ್ ಉಲಮಾ-ಇ-ಹಿಂದ್ ಹಲಾಲ್ ಟ್ರಸ್ಟ್, ಮುಂಬೈನ ಹಲಾಲ್‌ ಕೌನ್ಸಿಲ್‌ ಆಫ್‌ ಇಂಡಿಯಾ, ಮಹಾರಾಷ್ಟ್ರದ ಜಮಿಯತ್‌ ಉಲಮಾ ಸಂಸ್ಥೆಗಳ ವಿರುದ್ಧ ಹಜರತ್‌ಗಂಜ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವಿವರಿಸಿವೆ. 

ಆದಾಗ್ಯೂ, 2006 ರಲ್ಲಿ, ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯಿದೆಯನ್ನು ಔಪಚಾರಿಕಗೊಳಿಸಲಾಗಿದ್ದು, ಇದರಲ್ಲಿ ಒಂದು FSSAI ಮತ್ತು ISI ಆಹಾರದ ಗುಣಮಟ್ಟವನ್ನು ಪರಿಶೀಲಿಸುತ್ತದೆ ಮತ್ತು ಅದಕ್ಕಾಗಿ ವ್ಯವಹರಿಸುವ ನಿರ್ದಿಷ್ಟ ಕಾಯಿದೆ 3 (1) ಎಂದು ಮಾನ್ಯತೆ ನೀಡಲಾಯಿತು. ಆಹಾರ ಉತ್ಪನ್ನಗಳು ಮತ್ತು ಇತರರ ಮೇಲೆ ಹಲಾಲ್ ಪ್ರಮಾಣೀಕರಣವು ರಾಜ್ಯದಲ್ಲಿ ಕಾನೂನುಬಾಹಿರವಾಗಿದೆ.

ಈ ಸಂಸ್ಥೆಗಳು  ಹಣಕ್ಕಾಗಿ ವಿವಿಧ ಕಂಪನಿಗಳಿಗೆ ನಕಲಿ ಹಲಾಲ್‌ ಪ್ರಮಾಣ ಪತ್ರಗಳನ್ನು ನೀಡುತ್ತಿವೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದಿವೆ. ಈ ಸಂಸ್ಥೆಗಳಿಗೆ ಇಂತಹ ಪ್ರಮಾಣಪತ್ರ ನೀಡುವ ಯಾವುದೇ ಅಧಿಕಾರವಿಲ್ಲ ಎಂದೂ ಹೇಳಿವೆ. ಆರೋಪಗಳನ್ನು ಅಲ್ಲಗಳೆದಿರುವ ಜಮಿಯತ್ ಉಲಮಾ-ಇ-ಹಿಂದ್ ಹಲಾಲ್ ಟ್ರಸ್ಟ್, ತಪ್ಪು ಮಾಹಿತಿ ಪ್ರಚಾರ ಮಾಡಿರುವುದರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಹೇಳಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧಿಸೂಚನೆಯಂತೆ ನಾವು ಸರ್ಕಾರದ ನಿಯಮಗಳನ್ನು ಪಾಲಿಸಿದ್ದೇವೆ. ಹಲಾಲ್‌ ಉತ್ಪನ್ನಗಳು ಅಗತ್ಯವಿಲ್ಲದ ಗ್ರಾಹಕರಿಗೆ ಅದನ್ನು ನಿರಾಕರಿಸುವ ಸ್ವಾತಂತ್ರ್ಯವಿದೆ ಎಂದು ತಿಳಿಸಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com