ಮಸೂದೆಗಳಿಗೆ ಅಂಕಿತ ನೀಡಲು ವಿಳಂಬ: 3 ವರ್ಷಗಳ ಕಾಲ ಏನು ಮಾಡುತ್ತಿದ್ದರು?; ತಮಿಳುನಾಡು ರಾಜ್ಯಪಾಲಗೆ ಸುಪ್ರೀಂ‌ ಕೋರ್ಟ್ ಪ್ರಶ್ನೆ

ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ನೀಡಲು ಅಲ್ಲಿನ ರಾಜ್ಯಪಾಲರು ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ಇಂದು ತಮಿಳುನಾಡು ರಾಜ್ಯಪಾಲರ ಮುಂದೆ ಕೆಲ ಮಹತ್ವದ ಪ್ರಶ್ನೆಗಳನ್ನಿಟ್ಟಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ನೀಡಲು ಅಲ್ಲಿನ ರಾಜ್ಯಪಾಲರು ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ಇಂದು ತಮಿಳುನಾಡು ರಾಜ್ಯಪಾಲರ ಮುಂದೆ ಕೆಲ ಮಹತ್ವದ ಪ್ರಶ್ನೆಗಳನ್ನಿಟ್ಟಿದೆ.

ಈ ಮಸೂದೆಗಳು 2020ರಿಂದ ಬಾಕಿ ಇವೆ. ಮೂರು ವರ್ಷ ಅವರೇನು ಮಾಡುತ್ತಿದ್ದರು? ಎಂದು ತಮಿಳುನಾಡು ರಾಜ್ಯಪಾಲರನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ರಾಜ್ಯಪಾಲ ಸಿ ಎನ್‌ ರವಿ ಅವರು ತಮ್ಮ ಬಳಿ ಬಾಕಿ ಇದ್ದ 10 ಮಸೂದೆಗಳನ್ನು ವಾಪಸ್‌ ಕಳುಹಿಸಿದ ವಿದ್ಯಮಾನದ ಕುರಿತಂತೆ ಸುಪ್ರೀಂ ಕೋರ್ಟ್‌ ಈ ಪ್ರಶ್ನೆಯನ್ನೆತ್ತಿದೆ. ಈ 10 ಮಸೂದೆಗಳಲ್ಲಿ ಎರಡು ಮಸೂದೆಗಳನ್ನು ರಾಜ್ಯದಲ್ಲಿ ಈ ಹಿಂದೆ ಆಡಳಿತದಲ್ಲಿದ್ದ ಎಐಎಡಿಎಂಕೆ ಸರ್ಕಾರದ ಅವಧಿಯ ವೇಳೆ ವಿಧಾನಸಭೆ ಅಂಗೀಕರಿಸಿತ್ತು.

ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ ಪರ್ಡಿವಾಲ ಹಾಗೂ ಮಜೋಜ್‌ ಮಿಶ್ರಾ ಅವರಿದ್ದ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಕೇರಳ ಸರ್ಕಾರದ ಪರ ಹಿರಿಯ ವಕೀಲ ಕೆ.ಕೆ ವೇಣುಗೋ‍‍ಪಾಲ್ ಅವರು ಹಾಜರಾದರು.

ಇದೊಂದು ವ್ಯಾಧಿಯಾಗಿಬಿಟ್ಟಿದೆ. ಸಂವಿಧಾನದ 168 ನೇ ವಿಧಿಯ ಅಡಿಯಲ್ಲಿ ಶಾಸಕಾಂಗದ ಭಾಗವಾಗಿದ್ದಾರೆಂದು ರಾಜ್ಯಪಾಲರು ತಿಳಿದುಕೊಂಡಿರುವುದಿಲ್ಲ ಎಂದು ವೇಣುಗೋಪಾಲ್ ಹೇಳಿದರು. ಸಂವಿಧಾನದ 162ನೇ ವಿಧಿಯನ್ವಯ ರಾಜ್ಯಪಾಲರು ಶಾಸಕಾಂಗ ಭಾಗ. ಮೂರು ಸುಗ್ರೀವಾಜ್ಞೆಗಳಿಗೆ ಒಪ್ಪಿಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಬಳಿಕ ಅದರ ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ. ಸುಮಾರು 8 ಮಸೂದೆಗಳು ಕಳೆದ 7–21 ತಿಂಗಳಿನಿಂದ ರಾಜ್ಯಪಾಲರ ಬಳಿಯೇ ಇದೆ ಎಂದು ಕೆ.ಕೆ ವೇಣುಗೋಪಾಲ್ ಕೋರ್ಟ್‌ನ ಗಮನಕ್ಕೆ ತಂದರು.

ಕೇಂದ್ರ ಹಾಗೂ ರಾಜ್ಯಪಾಲರ ಕಚೇರಿಯ ಜತೆಗೆ, ವಿಚಾರಣೆ ಸಂಬಂಧ ನೀವು ಅಥವಾ ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ಅವರು ಸಹಾಯ ಮಾಡಬೇಕು ಎಂದು ಅಟಾರ್ನಿ ಜನರಲ್ ವಿ. ವೆಂಕಟರಮಣಿ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್‌ ಜಾರಿ ಮಾಡಿತು. ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು. ಮಸೂದೆಗಳಿಗೆ ಒಪ್ಪಿಗೆ ನೀಡಲು ವಿಳಂಬ ಮಾಡುವ ಮೂಲಕ ರಾಜ್ಯಪಾಲರು ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಕೇರಳ ಸರ್ಕಾರ ಆರೋಪಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com