ಶಾಲೆಗೆ ಬಂದು ಯುವಕನ ಹುಚ್ಚಾಟ: ಗಾಳಿಯಲ್ಲಿ ಗುಂಡು; ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಆತಂಕ!

ತ್ರಿಶೂರ್‌ನ ಖಾಸಗಿ ಶಾಲೆಯೊಂದಕ್ಕೆ ಏರ್‌ಗನ್‌ನೊಂದಿಗೆ ಅತಿಕ್ರಮ ಪ್ರವೇಶ ಮಾಡಿದ ಯುವಕ ಗಾಳಿಯಲ್ಲಿ ಗುಂಡು ಹಾರಿಸಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ನಡುಕ ಹುಟ್ಟಿಸಿದೆ.
ಏರ್ ಗನ್ ನೊಂದಿಗೆ ಬಂದ ಯುವಕ(ಸಿಸಿಟಿವಿ ದೃಶ್ಯ)
ಏರ್ ಗನ್ ನೊಂದಿಗೆ ಬಂದ ಯುವಕ(ಸಿಸಿಟಿವಿ ದೃಶ್ಯ)

ತ್ರಿಸೂರು: ತ್ರಿಶೂರ್‌ನ ಖಾಸಗಿ ಶಾಲೆಯೊಂದಕ್ಕೆ ಏರ್‌ಗನ್‌ನೊಂದಿಗೆ ಅತಿಕ್ರಮ ಪ್ರವೇಶ ಮಾಡಿದ ಯುವಕ ಗಾಳಿಯಲ್ಲಿ ಗುಂಡು ಹಾರಿಸಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ನಡುಕ ಹುಟ್ಟಿಸಿದೆ.

ತ್ರಿಶೂರ್ ನ ನಾಯ್ಕನಾಲ್ ವಿವೇಕೋದಯಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸರು ಶಾಲೆಗೆ ತೆರಳಿ ಯುವಕನನ್ನು ಬಂಧಿಸಿದ್ದಾರೆ.

ತ್ರಿಶೂರ್ ಬಳಿಯ ಮುಲಾಯಂ ಮೂಲದ ಜಗನ್ (19) ಎಂದು ಗುರುತಿಸಲಾಗಿದೆ. ಈತ ಶಾಲೆಯ ಹಳೆ ವಿದ್ಯಾರ್ಥಿ. ಆತನ ಹುಚ್ಚಾಟದಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಶಾಲಾ ದಿನಗಳಲ್ಲಿಯೇ ಯುವಕ ಮಾದಕ ವ್ಯಸನಿಯಾಗಿದ್ದ ಎನ್ನಲಾಗಿದೆ. ಆತ ಮೊದಲು ಶಾಲೆಯ ಪ್ರಾಂಶುಪಾಲರ ಕೊಠಡಿಗೆ ಭೇಟಿ ನೀಡಿದ್ದಾನೆ.  ಸಿಸಿಟಿವಿ ದೃಶ್ಯಗಳ ಪ್ರಕಾರ ಶಾಲೆಯ ಸಿಬ್ಬಂದಿ ಕೊಠಡಿ ಮತ್ತು ತರಗತಿ ಕೊಠಡಿಗಳಿಗೆ ಭೇಟಿ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ಶಾಲೆಯ ಸ್ಟಾಫ್ ರೂಮಿನೊಳಗೆ ಕುಳಿತ ಆರೋಪಿ ತನ್ನ ಬ್ಯಾಗ್‌ನಿಂದ ಹೊರತೆಗೆದ ಬಂದೂಕನ್ನು ಝಳಪಿಸುತ್ತಿರುವ ದೃಶ್ಯಗಳು ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿವೆ. ಬೆದರಿಕೆಯ ಹಿಂದಿನ ಉದ್ದೇಶ ಇನ್ನೂ ತಿಳಿದಿಲ್ಲ. ತ್ರಿಶೂರ್ ಟೌನ್ ಪೂರ್ವ ಪೊಲೀಸರು ಯುವಕನ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ,  ಆತ ಮಾದಕ ದ್ರವ್ಯ ಅಥವಾ ಮದ್ಯದ ಅಮಲಿನಲ್ಲಿದ್ದಾನೆಯೋ ಎಂಬ ತಿಳಿದು ಕೊಳ್ಳಲು ವೈದ್ಯಕೀಯ ಪರೀಕ್ಷೆ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com