ಉತ್ತರಾಖಂಡದಲ್ಲಿ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರು: ಲಂಬವಾಗಿ ಕೊರೆಯುವ ಸ್ಥಳದ ಗುರುತು

ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ಹೊರತರಲು ಲಂಬವಾಗಿ ಕೊರೆಯಲು ಸ್ಥಳವನ್ನು ಘಟನೆ ಸಂಭವಿಸಿ 11 ದಿನಗಳ ನಂತರ ಗುರುತಿಸಲಾಗಿದೆ.
ಸುರಂಗದೊಳಗೆ ರಕ್ಷಣಾ ಕಾರ್ಯ
ಸುರಂಗದೊಳಗೆ ರಕ್ಷಣಾ ಕಾರ್ಯ

ಉತ್ತರಾಖಂಡ: ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ಹೊರತರಲು ಲಂಬವಾಗಿ ಕೊರೆಯಲು ಸ್ಥಳವನ್ನು ಘಟನೆ ಸಂಭವಿಸಿ 11 ದಿನಗಳ ನಂತರ ಗುರುತಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (NHIDCL) ನಿರ್ದೇಶಕ ಅಂಶು ಮನೀಶ್ ಖುಲ್ಕೊ, ಲಂಬವಾಗಿ ಕೊರೆಯುವ ಸ್ಥಳವನ್ನು ಗುರುತಿಸಲಾಗಿದೆ, ಸುರಂಗದ ಮೇಲಿನ ಬೆಟ್ಟದ ಮೇಲೆ ಲಂಬವಾಗಿ ಕೊರೆಯುವ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. 350 ಮೀಟರ್‌ಗೂ ಹೆಚ್ಚು ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಬಿಆರ್ ಒ ಸಿಲ್ಕ್ಯಾರಾ ಮತ್ತು ಬಾರ್ಕೋಟ್ ಎರಡೂ ಕಡೆಯಿಂದ ರಸ್ತೆಯನ್ನು ನಿರ್ಮಿಸುತ್ತಿದ್ದು ಅದು ಬಹುತೇಕ ಪೂರ್ಣಗೊಂಡಿದೆ ಎಂದಿದ್ದಾರೆ. 

ರಸ್ತೆ ಕಿರಿದಾಗಿರುವ ಕಾರಣ ನಿನ್ನೆ ಸಿಕ್ಕಿಹಾಕಿಕೊಂಡಿದ್ದ ಪೈಲಿಂಗ್ ಯಂತ್ರ ಇದೀಗ ಸಿಲ್ಕ್ಯಾರ ಸುರಂಗ ಮಾರ್ಗಕ್ಕೆ ಬಂದಿದೆ. ನಿನ್ನೆ ರಕ್ಷಕರು ಅಡ್ಡ ಕೊರೆಯಲು ಪ್ರಯತ್ನಿಸಿದರು. ಸಿಕ್ಕಿಬಿದ್ದ ಕಾರ್ಮಿಕರಿಗೆ ಏಕಕಾಲದಲ್ಲಿ ಬೇಯಿಸಿದ ಘನ ಆಹಾರ ನೀಡಲಾಗಿತ್ತು. 

ಒಟ್ಟು ಐದು ಏಜೆನ್ಸಿಗಳು -- ONGC, SJVNL, RVNL, NHIDCL ಮತ್ತು THDCL-- ಭೂಕುಸಿತದ ನಂತರ ನಿರ್ಮಾಣ ಹಂತದಲ್ಲಿರುವ ರಚನೆಯ 2-ಕಿಮೀ-ನಿರ್ಮಿತ ಭಾಗದಲ್ಲಿ ಸಿಕ್ಕಿಬಿದ್ದ 41 ಕಾರ್ಮಿಕರನ್ನು ಸ್ಥಳಾಂತರಿಸಲು ನಿರ್ದಿಷ್ಟ ಜವಾಬ್ದಾರಿಗಳನ್ನು ವಹಿಸಲಾಗಿದೆ.

ಸ್ಥಳಕ್ಕೆ ಪೊಲೀಸರು, ಅಧಿಕಾರಿಗಳು: ಕುಸಿದ ಸಿಕ್ಯಾರಾ ಸುರಂಗದ ಸ್ಥಳಕ್ಕೆ ಮೊದಲು ತಲುಪಿದ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಧಾರಾಸು ಪೊಲೀಸ್ ಠಾಣೆ ವ್ಯಾಪ್ತಿಯ ಗೆನ್ವಾಲಾ ಹೆಡ್ ಕಾನ್‌ಸ್ಟೆಬಲ್ ಸುರೇಶ್ ಕುಮಾರ್, ಸೈಟ್ ಇಂಜಿನಿಯರ್ ಸ್ಥಳದ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದರು. ಬೆಳಿಗ್ಗೆ 8 ಗಂಟೆ ಸುಮಾರಿಗೆ ನಾನು ಸ್ನಾನ ಮಾಡುತ್ತಿದ್ದೆ, ನನಗೆ ಕರೆ ಬಂದಾಗ ನಾನು ತಕ್ಷಣ ನನ್ನೊಂದಿಗೆ ಜೂನಿಯರ್ ಸಿಬ್ಬಂದಿಯನ್ನು ಕರೆದುಕೊಂಡು ನನ್ನ ಬೈಕ್ ನಲ್ಲಿ ಸ್ಥಳಕ್ಕೆ ತಲುಪಿದೆ ಎಂದು ಪೌರಿ ಗರ್ವಾಲ್‌ನ ಸ್ಥಳೀಯ ಕುಮಾರ್ ಹೇಳಿದರು.

ಎರಡು ಕಿ.ಮೀ.ವರೆಗೆ ಸುರಂಗ ತೋಡಲಾಗಿದ್ದು ಕಾಮಗಾರಿ ಸುಸೂತ್ರವಾಗಿ ನಡೆಯುತ್ತಿದೆ. ಇಂತಹ ಘಟನೆಯನ್ನು ನಾನು ಊಹಿಸಿರಲಿಲ್ಲ. ಸುರಂಗದೊಳಗೆ 200 ಮೀಟರ್‌ಗಳಷ್ಟು ಅವಶೇಷಗಳು ಬಿದ್ದಿದ್ದು, 41 ಕಾರ್ಮಿಕರಿಗೆ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಪಡಿಸಲು ಅಮೆರಿಕನ್ ಆಗರ್ ಯಂತ್ರದೊಂದಿಗೆ ಕೊರೆಯುವಿಕೆಯನ್ನು ರಾತ್ರಿಯಿಡೀ ಪುನರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಾರ್ಮಿಕರಿಗೆ ಆಹಾರ ಪೂರೈಕೆ: 800 ವ್ಯಾಸದ ಉಕ್ಕಿನ ಪೈಪ್‌ಗಳನ್ನು ಇದುವರೆಗೆ 32 ಮೀಟರ್‌ವರೆಗೆ ಅವಶೇಷಗಳ ಮೂಲಕ ಅಳವಡಿಸಲಾಗಿದೆ. ಕಟ್ಟಡದ ಕುಸಿದ ಭಾಗದ ಮೂಲಕ ಅಂಟಿಕೊಂಡಿರುವ ಆಹಾರ ಪೈಪ್ ಮೂಲಕ ಒಳಗೆ ಸಿಕ್ಕಿಬಿದ್ದಿರುವ ಕಾರ್ಮಿಕರಿಗೆ ಸಸ್ಯಾಹಾರಿ ಪುಲಾವ್, ಮಟರ್-ಪನೀರ್ ಮತ್ತು ಬೆಣ್ಣೆಯೊಂದಿಗೆ ಚಪಾತಿಗಳನ್ನು ನೀಡಲಾಯಿತು. ಸುಲಭವಾಗಿ ಜೀರ್ಣವಾಗುವಂತೆ ಕಡಿಮೆ ಎಣ್ಣೆ, ಸಾಂಬಾರ ಪದಾರ್ಥಗಳೊಂದಿಗೆ ವೈದ್ಯರ ಮೇಲ್ವಿಚಾರಣೆಯಲ್ಲಿ ತಯಾರಿಸಿದ ಭೋಜನವನ್ನು 150 ಪ್ಯಾಕೆಟ್ ಗಳಲ್ಲಿ ಕಾರ್ಮಿಕರಿಗೆ ಪೂರೈಸಲಾಗಿದೆ.

ಆಗರ್ ಯಂತ್ರವು ಗಟ್ಟಿಯಾದ ವಸ್ತುವಿಗೆ ಬಡಿದಾಗ ಶುಕ್ರವಾರದಿಂದ ಸುರಂಗದಲ್ಲಿ ಕೊರೆಯುವಿಕೆಯನ್ನು ಸ್ಥಗಿತಗೊಳಿಸಲಾಗಿತ್ತು, ಇದೀಗ ಮತ್ತೆ ಆರಂಭಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com