ಉತ್ತರಕಾಶಿ ಸಿಲ್ಕ್ಯಾರಾ ಸುರಂಗ ಕುಸಿತ: ಸಿಕ್ಕಿಹಾಕಿಕೊಂಡಿರುವ ಕಾರ್ಮಿಕರನ್ನು ತಲುಪಲು ಇನ್ನು 18 ಮೀಟರ್ ಬಾಕಿ

ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರಾ ಸುರಂಗ 10 ದಿನಗಳ ಹಿಂದೆ ಕುಸಿದು  ಸಿಕ್ಕಿಬಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಇನ್ನು ಕೇವಲ 18 ಮೀಟರ್ ಕೊರೆಯಬೇಕಾಗಿದೆ ಎಂದು  ಅಧಿಕಾರಿಗಳು ನಿನ್ನೆ ಬುಧವಾರ ತಿಳಿಸಿದ್ದಾರೆ. 
ಉತ್ತರಕಾಶಿಯಲ್ಲಿ ಸುರಂಗದ ಒಂದು ಭಾಗ ಕುಸಿದ ನಂತರ ಕಾರ್ಮಿಕರು ಸಿಕ್ಕಿಬಿದ್ದಿರುವ ಸುರಂಗದ ಪ್ರವೇಶದ್ವಾರದಲ್ಲಿ ರಕ್ಷಣಾ ತಂಡಗಳ ಸದಸ್ಯರು
ಉತ್ತರಕಾಶಿಯಲ್ಲಿ ಸುರಂಗದ ಒಂದು ಭಾಗ ಕುಸಿದ ನಂತರ ಕಾರ್ಮಿಕರು ಸಿಕ್ಕಿಬಿದ್ದಿರುವ ಸುರಂಗದ ಪ್ರವೇಶದ್ವಾರದಲ್ಲಿ ರಕ್ಷಣಾ ತಂಡಗಳ ಸದಸ್ಯರು

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರಾ ಸುರಂಗ 10 ದಿನಗಳ ಹಿಂದೆ ಕುಸಿದು  ಸಿಕ್ಕಿಬಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಇನ್ನು ಕೇವಲ 18 ಮೀಟರ್ ಕೊರೆಯಬೇಕಾಗಿದೆ ಎಂದು  ಅಧಿಕಾರಿಗಳು ನಿನ್ನೆ ಬುಧವಾರ ತಿಳಿಸಿದ್ದಾರೆ. 

ಪರ್ಯಾಯ ಯೋಜನೆಯನ್ನು ಅನುಸರಿಸಿ, ರಕ್ಷಣಾ ಕಾರ್ಯಕರ್ತರು ಉತ್ತರಾಖಂಡದ ಚಾರ್ ಧಾಮ್ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಇನ್ನೊಂದು ತುದಿಯಿಂದ ಸುಮಾರು ಎಂಟು ಮೀಟರ್ ಅಗೆದಿದ್ದಾರೆ. ಸಿಲ್ಕ್ಯಾರಾ ಕೊನೆಯಲ್ಲಿ, 800 ಮೀಲಿ ಮೀಟರ್ ವ್ಯಾಸದ ಉಕ್ಕಿನ ಪೈಪ್‌ಗಳನ್ನು ಅವಶೇಷಗಳ ಮೂಲಕ 39 ಮೀಟರ್‌ಗಳವರೆಗೆ ಅಳವಡಿಸಲಾಗಿದೆ. ಇನ್ನು 18 ಮೀಟರ್‌ಗಳಲ್ಲಿ ರಕ್ಷಕರು ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್ ಹೆಚ್ ಐಡಿಸಿಎಲ್ ಎಂಡಿ ಮಹಮೂದ್ ಅಹ್ಮದ್ ಸಿಲ್ಕ್ಯಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 40 ಮೀಟರ್ ಮತ್ತು 50 ಮೀಟರ್ ನಡುವಿನ ವಿಸ್ತರಣೆಯು ಅತ್ಯಂತ ನಿರ್ಣಾಯಕ ಎಂದು ಹೇಳಿದರು. ಅದನ್ನು ದಾಟಿದ ನಂತರ ಪರಿಸ್ಥಿತಿ ಅನುಕೂಲವಾಗಿದೆ ಎಂದು ವಿಶ್ವಾಸದಿಂದ ಹೇಳಬಹುದು ಎಂದರು. 

ಕಾರ್ಯಾಚರಣೆಗೆ ಇನ್ನು ಎಷ್ಟು ಸಮಯ ತೆಗೆದುಕೊಳ್ಳಬಹುದು ಎಂದು ಕೇಳಿದಾಗ ನಾವು ಯಾವುದೇ ಅಡಚಣೆಯನ್ನು ಎದುರಿಸದಿದ್ದರೆ, ಇದೇ ವೇಗದಲ್ಲಿ ಸಾಗಿದರೆ ಇಂದು ಗುರುವಾರ ಬೆಳಿಗ್ಗೆ ಸಿಹಿಸುದ್ದಿ ನಿರೀಕ್ಷಿಸಬಹುದು ಎಂದರು. 

ಸುರಂಗದ ಬಾರ್ಕೋಟ್ ಕಡೆಯಿಂದ ಅಡ್ಡಲಾಗಿ ಕೊರೆಯುತ್ತಿದ್ದೇವೆ. ಮೂರು ಸ್ಫೋಟಗಳನ್ನು ಮಾಡಲಾಗಿದೆ. ಈಗಾಗಲೇ ಆ ತುದಿಯಿಂದ ಸುಮಾರು ಎಂಟು ಮೀಟರ್ ಪ್ರವೇಶಿಸಿದ್ದೇವೆ. ಬಾರ್ಕೋಟ್ ತುದಿಯಿಂದ ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ಮೊದಲೇ ತಿಳಿಸಿದ್ದರು. ಸಿಲ್ಕ್ಯಾರಾ ತುದಿಯಿಂದ ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು ತಲಾ ಆರು ಮೀಟರ್ ಉದ್ದದ ಕನಿಷ್ಠ ಮೂರು ಉಕ್ಕಿನ ಪೈಪ್‌ಗಳನ್ನು ಅವಶೇಷಗಳ ಮೂಲಕ ಹಾಕಬೇಕಾಗಿದೆ ಎಂದು ಅಹ್ಮದ್ ಹೇಳಿದರು.

ಸಿಕ್ಕಿಬಿದ್ದ ಕಾರ್ಮಿಕರಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ತಲುಪಿಸಲು ಸೋಮವಾರ ಹಾಕಲಾದ ಆರು ಇಂಚು ವ್ಯಾಸದ ಆಹಾರ ಪೈಪ್‌ಲೈನ್ 57 ಮೀಟರ್‌ಗೆ ತಳ್ಳಲ್ಪಟ್ಟ ನಂತರ ಅವಶೇಷಗಳ ಈ ಭಾಗದಿಂದ ಇನ್ನೊಂದು ಕಡೆಗೆ ಹೋಗಿದೆ. ಕೊರೆಯುವಿಕೆಯು ಪೂರ್ಣಗೊಂಡ ನಂತರ, ಕಾರ್ಮಿಕರು ಒಟ್ಟಿಗೆ ಬೆಸುಗೆ ಹಾಕಿದ 800-ಮಿಮೀ ವ್ಯಾಸದ ಉಕ್ಕಿನ ಕೊಳವೆಗಳ ಮೂಲಕ ಸುರಕ್ಷಿತವಾಗಿ ತೆವಳಬೇಕಾಗುತ್ತದೆ.

ಸಿಕ್ಕಿಬಿದ್ದ ಕಾರ್ಮಿಕರೊಂದಿಗೆ ಸಂವಹನವನ್ನು ಸುಲಭಗೊಳಿಸಲು ಆಹಾರ ಪೈಪ್‌ಲೈನ್ ಬಳಸಿ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಅವರೊಂದಿಗೆ ಆಡಿಯೊ ಸಂವಹನ ಚಾನೆಲ್ ನ್ನು ಸಹ ಸ್ಥಾಪಿಸಿವೆ ಎಂದು ರಕ್ಷಣಾ ಕಾರ್ಯಾಚರಣೆಗಾಗಿ ರಾಜ್ಯ ಸರ್ಕಾರ ನೇಮಿಸಿರುವ ನೋಡಲ್ ಅಧಿಕಾರಿ ನೀರಜ್ ಖೈರ್‌ವಾಲ್ ಹೇಳಿದ್ದಾರೆ.

<strong>ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ 41 ಕಾರ್ಮಿಕರು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ</strong>
ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ 41 ಕಾರ್ಮಿಕರು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ

ಸ್ಥಳದಲ್ಲಿ ಆಂಬ್ಯುಲೆನ್ಸ್, ತುರ್ತು ವೈದ್ಯಕೀಯ ಚಿಕಿತ್ಸೆ: ಆಂಬ್ಯುಲೆನ್ಸ್‌ಗಳು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಬಿದ್ದ 41 ಜನರನ್ನು ರಕ್ಷಿಸಲು ನಿನ್ನೆ ಸಂಜೆ ಯಶಸ್ಸಿನ ಸಮೀಪ ಕಾಣಿಸಿಕೊಂಡಿದ್ದರಿಂದ ವೈದ್ಯರನ್ನು ವಿಪತ್ತು ಸ್ಥಳಕ್ಕೆ ಕರೆಸಲಾಯಿತು.

ಸಂಜೆ 6 ಗಂಟೆಯವರೆಗೆ, ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಸುರಂಗದ ಕುಸಿದ ವಿಸ್ತರಣೆಯ ಅವಶೇಷಗಳೊಳಗೆ 44 ಮೀಟರ್ ವರೆಗೆ ಎಸ್ಕೇಪ್ ಪೈಪ್ ನ್ನು ಸೇರಿಸಲಾಗಿದೆ ಎಂದು ದೆಹಲಿಯಲ್ಲಿ ಅಧಿಕೃತ ನವೀಕರಣ ತಿಳಿಸಿದೆ.

10 ದಿನಗಳ ಹಿಂದೆ ನಿರ್ಮಾಣ ಹಂತದಲ್ಲಿದ್ದ ಸುರಂಗದ ಒಂದು ಭಾಗ ಕುಸಿದು ಬಿದ್ದಾಗ ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು ಅಮೆರಿಕ ನಿರ್ಮಿತ ಆಗರ್ ಯಂತ್ರವು 57 ಮೀಟರ್‌ಗಳಷ್ಟು ಅವಶೇಷಗಳ ಮೂಲಕ ಕೊರೆಯಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಲೆಕ್ಕಾಚಾರದ ಪ್ರಕಾರ, ಕೇವಲ 13 ಇನ್ನು ಕೊರೆಯಲು ಉಳಿದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡವು ಸಂಜೆ ಸುರಂಗವನ್ನು ಪ್ರವೇಶಿಸುತ್ತಿರುವುದನ್ನು ಗುರುತಿಸಲಾಗಿದೆ. ಸ್ಥಳಾಂತರದ ಪೂರ್ವಭಾವಿಯಾಗಿ ಹೃದ್ರೋಗ ತಜ್ಞರು ಸೇರಿದಂತೆ 15 ವೈದ್ಯರ ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಹನ್ನೆರಡು ಆಂಬ್ಯುಲೆನ್ಸ್‌ಗಳು ಸ್ಥಳದಲ್ಲಿದ್ದು, ಕಾರ್ಯಾಚರಣೆಗೆ ಹೆಲಿಕಾಪ್ಟರ್ ಕೂಡ ಮೀಸಲಿಡುವ ನಿರೀಕ್ಷೆ ಇತ್ತು. ಚಾರ್  ಧಾಮ್ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಸಮೀಪದಲ್ಲಿ ಎಂಟು ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com