ವಿದೇಶಗಳಿಗೆ ಹೋಗಿ ಮದುವೆಯಾಗುವ ಟ್ರೆಂಡ್ ಸರಿಯೇ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

1949 ರಲ್ಲಿ ಮತ್ತೊಂದು ಕಾರಣಕ್ಕಾಗಿ ನವೆಂಬರ್ 26 ಸಹ ಮುಖ್ಯವಾಗಿದೆ ಎಂದು ಪ್ರಧಾನಿ ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿದರು. ಈ ದಿನದಂದು ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿತು. 2015ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯನ್ನು ಆಚರಿಸುವಾಗ ನವೆಂಬರ್ 26ನ್ನು ಸಂವಿಧಾನ ದಿನವನ್ನಾಗಿ ಆಚರಿಸಬೇಕೆಂಬ ಆಲೋಚನೆ ಬಂದಿದ್ದು, ಎಲ್ಲರಿಗ
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ನವದೆಹಲಿ: 1949 ರಲ್ಲಿ ಮತ್ತೊಂದು ಕಾರಣಕ್ಕಾಗಿ ನವೆಂಬರ್ 26 ಸಹ ಮುಖ್ಯವಾಗಿದೆ ಎಂದು ಪ್ರಧಾನಿ ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿದರು. ಈ ದಿನದಂದು ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿತು. 2015ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯನ್ನು ಆಚರಿಸುವಾಗ ನವೆಂಬರ್ 26ನ್ನು ಸಂವಿಧಾನ ದಿನವನ್ನಾಗಿ ಆಚರಿಸಬೇಕೆಂಬ ಆಲೋಚನೆ ಬಂದಿದ್ದು, ಎಲ್ಲರಿಗೂ ಸಂವಿಧಾನ ದಿನದ ಶುಭಾಶಯಗಳನ್ನು ಕೋರುತ್ತೇನೆ ಎಂದು ಅವರು ಹೇಳಿದರು.

ನಾವೆಲ್ಲರೂ ಒಟ್ಟಾಗಿ, ನಾಗರಿಕರ ಕರ್ತವ್ಯಗಳಿಗೆ ಆದ್ಯತೆ ನೀಡುವ ಮೂಲಕ, ದೇಶವನ್ನು ಅಭಿವೃದ್ಧಿಪಡಿಸುವ ಸಂಕಲ್ಪವನ್ನು ಖಂಡಿತವಾಗಿಯೂ ಈಡೇರಿಸುತ್ತೇವೆ ಎಂದು ಮೋದಿ ಹೇಳಿದರು.

ವೋಕಲ್‌ ಫಾರ್‌ ಲೋಕಲ್‌ಗೆ ಕರೆ: ದಸರಾ ಹಾಗೂ ದೀಪಾವಳಿ ವೇಳೆ ದೇಶೀಯ ಉತ್ಪನ್ನಗಳ ಬಳಕೆ ಹೆಚ್ಚಾಗಿರುವ ಕುರಿತು ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದರು. ಈಗಾಗಲೇ ದೇಶಾದ್ಯಂತ ಮದುವೆ ಸಮಾರಂಭಗಳ ಸೀಸನ್‌ ಆರಂಭವಾಗಿದೆ. ಮದುವೆ ವೇಳೆಯೂ ಜನ ದೇಶೀಯ ವಸ್ತುಗಳನ್ನು ಖರೀದಿಸಬೇಕು. ಆ ಮೂಲಕ ಸ್ಥಳೀಯವಾಗಿ ಆರ್ಥಿಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ಹಾಗೆಯೇ, ಖರೀದಿ ವೇಳೆ ಏಕೀಕೃತ ಪಾವತಿ ವ್ಯವಸ್ಥೆ (UPI) ಅನ್ವಯವೇ ಹಣ ಪಾವತಿಸಬೇಕು ಎಂದು ಪ್ರಧಾನಿ ಕರೆ ನೀಡಿದರು.

ವಿದೇಶಗಳಲ್ಲಿ ಮದುವೆಯಾಗುವ ಟ್ರೆಂಡ್ ಸರಿಯೇ?: ಇತ್ತೀಚಿನ ದಿನಗಳಲ್ಲಿ ವಿದೇಶಕ್ಕೆ ಹೋಗಿ ಮದುವೆಯಾಗುವವರ ಸಂಖ್ಯೆ ಹೆಚ್ಚಾಗಿದೆ. ಇದು ಅಗತ್ಯವಿದೆಯೇ, ಭಾರತದ ನೆಲದಲ್ಲಿ, ಭಾರತದ ಜನರ ನಡುವೆ ಮದುವೆ ಮಾಡಿಕೊಂಡರೆ ದೇಶದ ಹಣವು ದೇಶದಲ್ಲಿ ಉಳಿಯುತ್ತದೆ. ನೀವು ಇಲ್ಲೇ ಮದುವೆಯಾದರೆ ನಿಮ್ಮ ಮದುವೆಯಲ್ಲಿ ನಾಡಿನ ಜನತೆಗೆ ಒಂದಷ್ಟು ಸೇವೆ ಸಲ್ಲಿಸುವ ಅವಕಾಶ ಸಿಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com