ಸಿಲ್ಕ್ಯಾರಾ ಸುರಂಗ ಕುಸಿತ: ಕಾರ್ಮಿಕರ ರಕ್ಷಣೆಗೆ Rat Hole ಮೈನಿಂಗ್, ಏನಿದು ಇಲಿ ರಂಧ್ರದ ಗಣಿಗಾರಿಕೆ ತಂತ್ರ?

ಉತ್ತರಾಖಂಡದ ಉತ್ತರಕಾಶಿಯಲ್ಲಿನ ಸಿಲ್ಕ್ಯಾರಾ ಸುರಂಗ ಕುಸಿತ ಪ್ರಕರಣದ ಕಾರ್ಮಿಕರ ರಕ್ಷಣೆಗೆ ಹಸಸಾಹಸ ಪಡಲಾಗುತ್ತಿದ್ದು ಲಂಬ ಕೊರೆಯುವ ಪ್ರಕ್ರಿಯೆ ಅಥವಾ ವರ್ಟಿಕಲ್ ಡಿಗ್ಗಿಂಗ್ ಕಾರ್ಯಾಚರಣೆ ಚಾಲ್ತಿಯಲ್ಲಿರುವಂತೆಯೇ ರ್ಯಾಟ್ ಹೋಲ್ ಮೈನಿಂಗ್ ಗೆ ತಜ್ಞರು ಮುಂದಾಗಿದ್ದಾರೆ.
ರ್ಯಾಟ್ ಹೋಲ್ ಮೈನಿಂಗ್
ರ್ಯಾಟ್ ಹೋಲ್ ಮೈನಿಂಗ್

ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯಲ್ಲಿನ ಸಿಲ್ಕ್ಯಾರಾ ಸುರಂಗ ಕುಸಿತ ಪ್ರಕರಣದ ಕಾರ್ಮಿಕರ ರಕ್ಷಣೆಗೆ ಹಸಸಾಹಸ ಪಡಲಾಗುತ್ತಿದ್ದು ಲಂಬ ಕೊರೆಯುವ ಪ್ರಕ್ರಿಯೆ ಅಥವಾ ವರ್ಟಿಕಲ್ ಡಿಗ್ಗಿಂಗ್ ಕಾರ್ಯಾಚರಣೆ ಚಾಲ್ತಿಯಲ್ಲಿರುವಂತೆಯೇ ರ್ಯಾಟ್ ಹೋಲ್ ಮೈನಿಂಗ್ ಗೆ ತಜ್ಞರು ಮುಂದಾಗಿದ್ದಾರೆ.

ಮಾನವ ಶಕ್ತಿ ಬಳಕೆ ಬಿಟ್ಟು ಬೇರೆ ದಾರಿಯಿಲ್ಲ ಎಂದ ತಜ್ಞರು
ಈಗಾಗಲೇ ರಕ್ಷಣಾ ಕಾರ್ಯಾಚರಣೆಗಾಗಿ ಸುರಂಗದೊಳಗೆ ಕಳುಹಿಸಲಾಗಿದ್ದ ಆಗರ್ ಡ್ರಿಲ್ಲಿಂಗ್ ಯಂತ್ರ ಪೈಪ್ ನುಗ್ಗಿಸುವ ವೇಳೆ ಅದರ ಮೂತಿ ತುಂಡರಿಸಿ ಅದು ವಿಫಲವಾಗಿತ್ತು. ಹೀಗಾಗಿ ಆಗರ್ ಯಂತ್ರದ ಕಾರ್ಯಾಚರಣೆ ನಿಲ್ಲಿಸಿ ಅದನ್ನು ಹರಸಾಹಸ ಪಟ್ಟು ಸುರಂಗದಿಂದ ಹೊರಗೆ ತರಲಾಗಿತ್ತು. ಇದೀಗ ತಜ್ಞರು ಸುರಂಗದಲ್ಲಿ ಕಾರ್ಮಿಕರ ರಕ್ಷಣೆಗೆ ಮಾನವ ಶಕ್ತಿ ಬಳಕೆ ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ ತಜ್ಞರು ರ್ಯಾಟ್ ಹೋಲ್ ಮೈನಿಂಗ್ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇಷ್ಟಕ್ಕೂ ಏನಿದು ರ್ಯಾಟ್ ಹೋಲ್ ಮೈನಿಂಗ್? 
ಇಲಿ ರಂಧ್ರದ ಗಣಿಗಾರಿಕೆ ಅಥವಾ ರ್ಯಾಟ್ ಹೋಲ್ ಮೈನಿಂಗ್ ಮೂಲತಃ ಮಾನವ ಚಾಲಿತ ಕೊರೆಯುವ ವಿಧಾನವಾಗಿದೆ. ಈ ತಂತ್ರವನ್ನು ಉಪಯೋಗಿಸಿ ಪೈಪ್‌ನೊಳಗಿನ ಕಲ್ಲಿನ ಅವಶೇಷಗಳನ್ನು ತೆಗೆದುಹಾಕಲು ಮಾನವ ಚಾಲಿತ ಡ್ರಿಲ್ಲಿಂಗ್‌ ಪ್ರಕ್ರಿಯೆಯನ್ನು ಬಳಸಲಾಗುತ್ತದೆ. ಈ ಮಾನವ ಚಾಲಿತ ಕೊರೆಯುವ ಕೆಲಸವನ್ನು ಕೈಗೊಳ್ಳಲು 6 ತಜ್ಞರ ತಂಡವು ಈಗಾಗಲೇ ಸಿಲ್ಕ್ಯಾರಾ ಸುರಂಗ ಸ್ಥಳಕ್ಕೆ ತಲುಪಿದೆ. ಈ ತಂಡ ಪೈಪ್ ನೊಳಗೆ ಬಿದ್ದಿರುವ ಅವಶೇಷಗಳನ್ನು ಮಾನವ ಚಾಲಿತವಾಗಿ ತೆಗೆದುಹಾಕಲು ಸುರಂಗದ 800 ಎಂಎಂ ಪೈಪ್ ಒಳಗೆ ಹೋಗುತ್ತಾರೆ. ಪೈಪ್ ನೊಳಗೆ ಹೋಗಿ ಅಲ್ಲಿ ಅವರು ಮಾನವ ಚಾಲಿತ ಡ್ರಿಲ್ಲಿಂಗ್ ಯಂತ್ರಗಳನ್ನು ಉಪಯೋಗಿಸಿ ಪೈಪ್ ನೊಳಗಿನ ಅವಶೇಷಗಳನ್ನು ತೆರವುಗೊಳಿಸುತ್ತಾರೆ. 

ಈ ತಂಡದಲ್ಲಿ ಭಾರತೀಯ ಸೇನೆಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ನ ಎಂಜಿನಿಯರ್‌ಗಳು ಮತ್ತು ಸ್ಥಳೀಯ ನಾಗರಿಕರು ಇದ್ದಾರೆ. ಇವರೊಟ್ಟಿಗೆ ಕೊರೆಯುವ ಯಂತ್ರದ ಹೊರತಾಗಿ, ಸುತ್ತಿಗೆ, ಸಲಿಕೆ, ಟ್ರೊವೆಲ್ ಮತ್ತು ಆಮ್ಲಜನಕಕ್ಕಾಗಿ ಜೀವಾಧಾರಕ ಸಾಧನಗಳನ್ನು ಈ ವಿಶೇಷ ತಂಡಗಳು ಸುರಂಗದ ಒಳಗೆ ಹೋಗುವಾಗ ಒಯ್ಯುತ್ತವೆ. 

ಏನಿದರ ಲಾಭ?
ಪೈಪ್‌ನೊಳಗೆ ಸಿಲುಕಿಕೊಂಡಿದ್ದ ಸುರಂಗದ ಸಮತಲ ಕೊರೆಯಲು ಬಳಸುತ್ತಿದ್ದ ಆಗರ್ ಯಂತ್ರವನ್ನು ಪ್ಲಾಸ್ಮಾ ಕಟ್ಟರ್ ಬಳಸಿ ಇಂದು ಮುಂಜಾನೆ ಕತ್ತರಿಸಿ ತೆಗೆಯಲಾಗಿದೆ. ಆಗರ್ ಯಂತ್ರವು ಪೈಪ್‌ನೊಳಗೆ ಸಿಲುಕಿಕೊಂಡಿತ್ತು. ಇದನ್ನು ಹೊರತೆಗೆಯುವ ಕಾರ್ಯದ ವೇಳೆ ಸುರಂಗದ ಬಾಯಿಯ ಮೇಲೆ 48 ಮೀ ಅವಶೇಷಗಳನ್ನು ಬಿದ್ದಿತ್ತು. ಇದೇ ಅವಶೇಷಗಳನ್ನು ತೆರವುಗೊಳಿಸಲು ಈ ರ್ಯಾಟ್ ಹೋಲ್ ಮೈನಿಂಗ್ ತಂತ್ರವನ್ನು ಬಳಸಲಾಗುತ್ತಿದೆ.

ಎಲ್ಲೆಲ್ಲಿ ಬಳಕೆಯಾಗಿತ್ತು?
ಇಲ್ಲಿ ರಕ್ಷಣಾ ಸಿಬ್ಬಂದಿ ಹೆಚ್ಚಾಗಿ ಗಣಿಗಳಲ್ಲಿ ಕೆಲಸ ಮಾಡುವ ಮತ್ತು ಗಂಟೆಗಳ ಕಾಲ ಕೊರೆಯುವ ಅನುಭವವನ್ನು ಹೊಂದಿರುವ ಕೊಳವೆ ಗಣಿಗಳನ್ನು ಒಳಗೊಂಡಂತೆ ಕಿರಿದಾದ ಹಾದಿಗಳಲ್ಲಿ ಕೈಯಾರೆ ಅಗೆಯುವ ಮತ್ತು ಕೊರೆಯುವಲ್ಲಿ ಪರಿಣಿತರಾಗಿದ್ದಾರೆ. ಇಲಿ ರಂಧ್ರದ ಗಣಿಗಾರಿಕೆ ತಂತ್ರವನ್ನು ಸಾಮಾನ್ಯವಾಗಿ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಬಳಸಲಾಗುತ್ತದೆ, ವಿಶೇಷವಾಗಿ ಕಷ್ಟಕರವಾದ ಭೂಪ್ರದೇಶವನ್ನು ಹೊಂದಿರುವ ಪ್ರದೇಶಗಳಲ್ಲಿ ಈ ತಂತ್ರವನ್ನು ಬಳಸಲಾಗುತ್ತಿತ್ತು.

ಸುದೀರ್ಘ ಕಾರ್ಯಾಚರಣೆ
ಈ Rat Hole ಮೈನಿಂಗ್ ಕಾರ್ಯಾಚರಣೆ ಪೂರ್ಣಗೊಳ್ಳಲು ಸುಮಾರು 10 ದಿನಗಳ ಅವಧಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಸೇನೆಯ ಇಂಜಿನಿಯರಿಂಗ್ ಘಟಕವು 1.2x1.5 ಮೀ ಉಕ್ಕಿನ ಚೌಕಟ್ಟು 1 ಮೀಟರ್ ದಪ್ಪ ವ್ಯಾಸದಲ್ಲಿ ಕೊರೆಯುತ್ತದೆ. ಮದ್ರಾಸ್ ಸಪ್ಪರ್ಸ್ ಇತರ ಏಜೆನ್ಸಿಗಳ ಸಹಾಯದಿಂದ ಸುರಂಗದ ಬಾಯಿಯಿಂದ ಒಳಭಾಗಕ್ಕೆ ಚೌಕಟ್ಟುಗಳನ್ನು ಒಂದೊಂದಾಗಿ ತೆಗೆದುಕೊಂಡು ಹೋಗುತ್ತಾರೆ, ಇದು ಕನಿಷ್ಠ 10 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com